ಬೆಳಗಾವಿ ಉತ್ಸವದಲ್ಲಿ ಡಾಲಿ ಮಾಸ್ ಡೈಲಾಗ್; ಅಭಿಮಾನಿಗಳ ಖುಷಿ ನೋಡಿ..
ನಟ ಡಾಲಿ ಧನಂಜಯ್ ಅವರು ಬೆಳಗಾವಿ ಉತ್ಸವಕ್ಕೆ ತೆರಳಿದ್ದಾರೆ. ಆ ಅವರು ವೇದಿಕೆಯಲ್ಲಿ ಮಾತನಾಡಿದ ವಿಡಿಯೋ ಇಲ್ಲಿದೆ. ಸಿನಿಮಾದ ಡೈಲಾಗ್ ಹೇಳುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ‘ಸುಬ್ಬಿ ಅಂಕಲ್ನ ಹೊಡಿತೀನಿ ಸುಬ್ಬಿ’ ಎನ್ನುವ ಡೈಲಾಗ್ ಹೇಳಿದಾಗ ಅಭಿಮಾನಿಗಳು ಖುಷಿಯಿಂದ ಕೇಕೆ ಹಾಕಿದರು.
ನಟ ಡಾಲಿ ಧನಂಜಯ್ ಅವರು ಬೆಳಗಾವಿ ಉತ್ಸವಕ್ಕೆ (Belagavi Utsava) ತೆರಳಿದ್ದಾರೆ. ಅವರು ವೇದಿಕೆಯಲ್ಲಿ ಮಾತನಾಡಿದ ವಿಡಿಯೋ ಇಲ್ಲಿದೆ. ಸಿನಿಮಾದ ಡೈಲಾಗ್ ಹೇಳುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ‘ಈ ಜನಸಾಗರ ನೋಡಿ ಬಹಳ ಖುಷಿ ಆಯಿತು. ಪ್ರತಿ ಬಾರಿ ಇಲ್ಲಿಗೆ ಬಂದಿದ್ದೇನೆ. ಆದರೆ ಈ ಬಾರಿ ಸೇರಿದ್ದಷ್ಟು ಜನರನ್ನು ನಾನು ನೋಡಿಲ್ಲ. ಬಹಳ ಚೆನ್ನಾಗಿ ಆಯೋಜನೆ ಮಾಡಿದ್ದಾರೆ. ಎಲ್ಲರೂ ಸೇರಿ ಪ್ರೀತಿಯಿಂದ ಮಾಡಿದಾಗ ಎಷ್ಟು ಖುಷಿಯಿಂದ ಜನರು ಸೇರುತ್ತಾರೆ ಎಂಬುದಕ್ಕೆ ಬೆಸ್ಟ್ ಉದಾಹರಣೆ ಇದು. ಬೆಳಗಾವಿಯಲ್ಲಿ ಕನ್ನಡದ ಉತ್ಸವಕ್ಕೆ ಇಷ್ಟು ಜನರು ಸೇರಿರುವುದು ಬಹಳ ಖುಷಿ’ ಎಂದು ಡಾಲಿ ಧನಂಜಯ (Daali Dhananjaya) ಅವರು ಹೇಳಿದರು. ಅಲ್ಲದೇ ‘ಸುಬ್ಬಿ ಅಂಕಲ್ನ ಹೊಡಿತೀನಿ ಸುಬ್ಬಿ’ ಎನ್ನುವ ಡೈಲಾಗ್ ಹೇಳಿದಾಗ ಅಭಿಮಾನಿಗಳು ಖುಷಿಯಿಂದ ಕೇಕೆ ಹಾಕಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

