Lohitashwa: ಲೋಹಿತಾಶ್ವ ನಿಧನ: ಸ್ನೇಹಿತನನ್ನು ಕಳೆದುಕೊಂಡ ನೋವಲ್ಲಿ ಆ ದಿನಗಳ ಮೆಲುಕು ಹಾಕಿದ ಸುಂದರ್ ರಾಜ್​

| Updated By: ಮದನ್​ ಕುಮಾರ್​

Updated on: Nov 09, 2022 | 12:43 PM

Lohitashwa Death: ಲೋಹಿತಾಶ್ವ ಅವರ ಪ್ರತಿಭೆ ಮತ್ತು ವ್ಯಕ್ತಿತ್ವದ ಬಗ್ಗೆ ಸುಂದರ್​ ರಾಜ್​ ಮಾತನಾಡಿದ್ದಾರೆ. ಸ್ನೇಹಿತನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು​ ಪ್ರಾರ್ಥಿಸಿದ್ದಾರೆ.

ಬಣ್ಣದ ಲೋಕದಲ್ಲಿ ಅಪಾರ ಅನುಭವ ಹೊಂದಿದ್ದ ಹಿರಿಯ ಕಲಾವಿದ ಲೋಹಿತಾಶ್ವ (Lohitashwa) ಅವರು 80ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಮಂಗಳವಾರ (ನ.8) ಬೆಂಗಳೂರಿನಲ್ಲಿ ಅವರು ಕೊನೆಯುಸಿರು ಎಳೆದರು. ಕುಮಾರಸ್ವಾಮಿ ಲೇಔಟ್​ನಲ್ಲಿರುವ ಅವರ ನಿವಾಸದಲ್ಲಿ ಅನೇಕ ಸೆಲೆಬ್ರಿಟಿಗಳು ಅಂತಿಮ ದರ್ಶನ ಪಡೆದಿದ್ದಾರೆ. ನಟ ಸುಂದರ್​ ರಾಜ್​ (Sundar Raj) ಮತ್ತು ಲೋಹಿತಾಶ್ವ ಅವರು ಸ್ನೇಹಿತರಾಗಿದ್ದರು. ಗೆಳೆಯನನ್ನು ಕಳೆದುಕೊಂಡ ನೋವಿನಲ್ಲೇ ತಮ್ಮ ಸ್ನೇಹವನ್ನು ಸುಂದರ್​ ರಾಜ್​ ಮೆಲುಕು ಹಾಕಿದ್ದಾರೆ. ಲೋಹಿತಾಶ್ವ ಅವರ ಪ್ರತಿಭೆ ಮತ್ತು ವ್ಯಕ್ತಿತ್ವದ ಬಗ್ಗೆ ಅವರು ಮಾತನಾಡಿದ್ದಾರೆ. ತುಮಕೂರಿನ ತೊಂಡಗೆರೆ ಗ್ರಾಮದಲ್ಲಿ ಲೋಹಿತಾಶ್ವ ಅವರ ಅಂತ್ಯಕ್ರಿಯೆ (Lohitashwa Funeral) ಇಂದು (ನ.9) ನಡೆಯಲಿದೆ. ಸ್ನೇಹಿತನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸುಂದರ್​ ರಾಜ್​ ಪ್ರಾರ್ಥಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Nov 09, 2022 12:43 PM