ಅರಕಲುಗೂಡಿನ ಜೆಡಿಎಸ್ ಕಾರ್ಯಕರ್ತನನ್ನು ಸೂರಜ್ ರೇವಣ್ಣ ಅಸಹಜ ಲೈಂಗಿಕ ಕ್ರೀಡೆಗೆ ಬಳಸಿಕೊಂಡರೇ?

|

Updated on: Jun 22, 2024 | 12:43 PM

ಖುದ್ದು ರೇವಣ್ಣ ಮಹಿಳೆಯೊಬ್ಬರ ಅಪಹರಣದ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿಂದ ಹೊರಗಿದ್ದಾರೆ. ಪ್ರಜ್ವಲ್ ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸಿರುವ ಆರೋಪದಲ್ಲಿ ಜೈಲು ಸೇರಿದ್ದಾರೆ. ಮಹಿಳೆಯನ್ನು ಬೆದರಿಸಿದ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಸಿಕ್ಕ ಬಳಿಕ ಪೊಲೀಸರ ಮುಂದೆ ಹಾಜರಾಗಿದ್ದಾರೆ. ಈಗ ಸೂರಜ್ ಪ್ರಕರಣ.

ಹಾಸನ: ಅರಕಲಗೂಡು ವಿಧಾನಸಭಾ ಕ್ಷೇತ್ರದ ಈ ಯುವ ಜೆಡಿಎಎಸ್ ಕಾರ್ಯಕರ್ತ (JDS worker) ಹೇಳುವ ಪ್ರಕಾರ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ಪುತ್ರ ಮತ್ತ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ಸಹೋದರ ಡಾ ಸೂರಜ್ ರೇವಣ್ಣ (Dr Suraj Revanna) ಒಬ್ಬ ಸಲಿಂಗಕಾಮಿ (homosexual) ಮತ್ತು ಯುವಕನನ್ನು ಅಸಹಜ ಮತ್ತು ಅನೈಸರ್ಗಿಕ ಲೈಂಗಿಕ ಕ್ರೀಡೆಗಾಗಿ ಬಳಸಿಕೊಂಡಿದ್ದಾರೆ. ಹೊಳೆನರಸೀಪುರ ತಾಲ್ಲೂಕಿನ ಗನ್ನಿಕಡ ಗ್ರಾಮದಲ್ಲಿರುವ ತೋಟದ ಮನೆಯೊಂದರಲ್ಲಿ ಸೂರಜ್ ರೇವಣ್ಣ ತನ್ನ ಮೇಲೆ ಅಸಹಜ ಲೈಂಗಿಕ ಅತ್ಯಾಚಾರ ನಡೆಸಿದರೆಂದು ಸಂತ್ರಸ್ತ ಹೇಳುತ್ತಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತನಗೆ ಸೂರಜ್ ನ ಪರಿಚಯವಾಯಿತು ಮತ್ತು ಅವರು ಫೋನ್ ಮಾಡಿ ತನ್ನನ್ನು ತೋಟದ ಮನೆಗೆ ಕರೆಸಿಕೊಂಡರು ಎಂದು ಸಂತ್ರಸ್ತ ಹೇಳುತ್ತಾರೆ. ರೇವಣ್ಣ ಕುಟುಂಬಕ್ಕೆ ಏನಾಗಿದೆ ಅಂತ ಕನ್ನಡಿಗರಿಗೆ ಅರ್ಥವಾಗುತ್ತಿಲ್ಲ. ಖುದ್ದು ರೇವಣ್ಣ ಮಹಿಳೆಯೊಬ್ಬರ ಅಪಹರಣದ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿಂದ ಹೊರಗಿದ್ದಾರೆ. ಪ್ರಜ್ವಲ್ ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸಿರುವ ಆರೋಪದಲ್ಲಿ ಜೈಲು ಸೇರಿದ್ದಾರೆ. ಮಹಿಳೆಯನ್ನು ಬೆದರಿಸಿದ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಸಿಕ್ಕ ಬಳಿಕ ಪೊಲೀಸರ ಮುಂದೆ ಹಾಜರಾಗಿದ್ದಾರೆ. ಈಗ ಸೂರಜ್ ಪ್ರಕರಣ…

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸೂರಜ್‌ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ವ್ಯಕ್ತಿ ವಿರುದ್ಧವೇ ಎಫ್‌ಐಆರ್

Follow us on