ಡಿಕೆ ಸುರೇಶ್ ಮನೆಯಲ್ಲಿ ಬಿಜೆಪಿ ಶಾಸಕರು-ಎಸ್ ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್!

Updated on: Jun 05, 2024 | 1:17 PM

ಕ್ರಮದ ಮಾತು ಹಾಗಿರಲಿ, ಅವರನ್ನು ಕರೆಸಿ ಏನು ನಿಮ್ಮ ಸಮಸ್ಯೆ ಅಂತ ಕೇಳುವ ಪ್ರಯತ್ನವನ್ನೂ ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾಡಿಲ್ಲ. ಸೋಮಶೇಖರ್ ಅವರಿಗೆ ಡಿಕೆ ಶಿವಕುಮಾರ್ ಜೊತೆ ಸಲುಗೆ ಇದೆ ಗೌರವವೂ ಇದೆ. ಹಾಗಾಗೇ, ತಮ್ಮ ನಡೆ ಬಿಜೆಪಿ ನಾಯಕರಿಗೆ ಗೊತ್ತಾಗುತ್ತದೆ ಅಂತ ಗೊತ್ತಿದ್ದರೂ ಸುರೇಶ್ ಮನೆಗೆ ಬಂದಿದ್ದಾರೆ.

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸೋತರೂ ಡಿಕೆ ಸುರೇಶ್ (DK Suresh) ಮನೆ ಚಟುವಟಿಕೆಯ ಕೇಂದ್ರವಾಗಿದೆ (bustling with activities). ಅವರ ಮನೆಯಲ್ಲಿ ಪಕ್ಷದ ಮುಖಂಡರು, ಸ್ನೇಹಿತರು ಮತ್ತು ಹಿತೈಷಿಗಳು ಬೀಡು ಬಿಟ್ಟಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಬಿಜೆಪಿ ಶಾಸಕರಾಗಿರುವ ಎಸ್ ಟಿ ಸೋಮಶೇಖರ್ (ST Somashekhar) ಮತ್ತು ಶಿವರಾಂ ಹೆಬ್ಬಾರ್ (Shivaram Hebbar) ಸಹ ಇಂದು ಸುರೇಶ್ ನಿವಾಸಕ್ಕೆ ಆಗಮಿಸುತ್ತಿರುವುದು ಇಲ್ಲಿ ಕಾಣುತ್ತದೆ. ಬಿಜೆಪಿ ಶಿಬಿರದಲ್ಲಿ ಸೋಮಶೇಖರ್ ಮತ್ತು ಹೆಬ್ಬಾರ್ ರೆಬೆಲ್ ಶಾಸಕರಾಗಿ ಗುರುತಿಸಿಕೊಂಡಿರುವುದು ಮತ್ತು ಅವರ ಒಲವು ಕಾಂಗ್ರೆಸ್ ಪಕ್ಷದ ಮೇಲಿರುವುದು ಹೊಸ ಸುದ್ದಿಯೇನಲ್ಲ. ಇನ್ ಫ್ಯಾಕ್ಟ್, ಅವರು ಪಕ್ಷ ಶಿಸ್ತಿನ ಕ್ರಮ ತೆಗೆದುಕೊಳ್ಳಲಿ ಅಂತ ಕಾಯುತ್ತಿದ್ದಾರೆ. ಕ್ರಮದ ಮಾತು ಹಾಗಿರಲಿ, ಅವರನ್ನು ಕರೆಸಿ ಏನು ನಿಮ್ಮ ಸಮಸ್ಯೆ ಅಂತ ಕೇಳುವ ಪ್ರಯತ್ನವನ್ನೂ ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾಡಿಲ್ಲ. ಸೋಮಶೇಖರ್ ಅವರಿಗೆ ಡಿಕೆ ಶಿವಕುಮಾರ್ ಜೊತೆ ಸಲುಗೆ ಇದೆ ಗೌರವವೂ ಇದೆ. ಹಾಗಾಗೇ, ತಮ್ಮ ನಡೆ ಬಿಜೆಪಿ ನಾಯಕರಿಗೆ ಗೊತ್ತಾಗುತ್ತದೆ ಅಂತ ಗೊತ್ತಿದ್ದರೂ ಸುರೇಶ್ ಮನೆಗೆ ಬಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶದಲ್ಲಿ ಎಸ್ ಟಿ ಸೋಮಶೇಖರ್ ಭುಜದಡವಿ ಆತ್ಮೀಯತೆ ಪ್ರದರ್ಶಿಸಿದ ಸಿದ್ದರಾಮಯ್ಯ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More