ಮೈಸೂರು: ಕಾಂಗ್ರೆಸ್ ನಾಯಕರ ಫ್ಲೆಕ್ಸ್ ಗಳ ನಡುವೆ ಕಡಿಮೆ ಎತ್ತರದ ಎಸ್ ಟಿ ಸೋಮಶೇಖರ್ ಫ್ಲೆಕ್ಸ್!
ಪ್ರಮುಖ ರಸ್ತೆಯೊಂದರಲ್ಲಿ ಸಾಲಾಗಿ ಜೋಡಿಸಿರುವ ಕಾಂಗ್ರೆಸ್ ನಾಯಕರ ಫ್ಲೆಕ್ಸ್ಗಳನ್ನು ಗಮನಿಸಿ. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಸೋನಿಯಾ ಗಾಂಧಿ, ಹೆಚ್ ಸಿ ಮಹದೇವಪ್ಪ ಮೊದಲಾದವರ ಫ್ಲೆಕ್ಸ್ ಗಳ ಸೋಮಶೇಖರ್ ಫ್ಲೆಕ್ಸ್! ಒಂದು ಸಂಗತಿಯನ್ನು ಗಮನಿಸಿ. ಫ್ಲೆಕ್ಸ್ ನಲ್ಲಿ ಸೋಮಶೇಖರ್ ಎತ್ತರ ಗಣನೀಯವಾಗಿ ಕಡಿಮೆ ಕಾಣಿಸುತ್ತದೆ.
ಮೈಸೂರು: ತೆಲುಗಿನಲ್ಲಿ ಗಾದೆ ಮಾತೊಂದಿದೆ, ಅವ್ವ ಮೀನ ಪ್ರಾಣಂ ಬುವ್ವ ಮೀನ ಪ್ರಾಣಂ…ಅಂತ. ಇದೇ ಸಾರಾಂಶವನ್ನು ಹೇಳುವ ಗಾದೆ ಕನ್ನಡದಲ್ಲೂ ಇದೆ. ಅಕ್ಕಿ ಮೇಲೆ ಆಸೆ ನೆಂಟರ ಮೇಲೂ ಪ್ರೀತಿ! ಇದರರ್ಥ ಎರಡನ್ನು ಬಿಟ್ಟುಕೊಡುವಂತಿಲ್ಲ, ನೆಂಟರು ಬಂದಾಗ ಹೆಚ್ಚು ಅಕ್ಕಿ ಖರ್ಚಾಗೋದು ನಿಜ, ಅದರೆ ನೆಂಟರ ಮೇಲಿನ ಪ್ರೀತಿಯೂ ಇರೋದ್ರಿಂದ ಅವರನ್ನು ಕಡೆಗಣಿಸುವಂತಿಲ್ಲ! ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ, ಯಶವಂತಪುರದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ (ST Somashekhar) ಮನಸ್ಥಿತಿ, ಧೋರಣೆ ಈ ಗಾದೆ ಮಾತಿಗೆ ಹೋಲುತ್ತದೆ. ಬಿಜೆಪಿ ಶಾಸಕರಾದರೂ (BJP MLA) ಸೋಮಶೇಖರ್ ಫ್ಲೆಕ್ಸ್ ಕಾಂಗ್ರೆಸ್ ನಾಯಕರ ಫ್ಲೆಕ್ಸ್ ಗಳ ನಡುವೆ ರಾರಾಜಿಸುತ್ತಿದೆ. ಮೈಸೂರು ನಗರದಲ್ಲಿಂದು ಸ್ಥಳೀಯ ಬಿಜೆಪಿ ಧುರೀಣ ಹೆಚ್ ವಿ ರಾಜೀವ (HV Rajeev) ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಹಿನ್ನೆಲೆಯಲ್ಲಿ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿತ್ತು. ನಗರದ ಪ್ರಮುಖ ರಸ್ತೆಯೊಂದರಲ್ಲಿ ಸಾಲಾಗಿ ಜೋಡಿಸಿರುವ ಕಾಂಗ್ರೆಸ್ ನಾಯಕರ ಫ್ಲೆಕ್ಸ್ಗಳನ್ನು ಗಮನಿಸಿ. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಸೋನಿಯಾ ಗಾಂಧಿ, ಹೆಚ್ ಸಿ ಮಹದೇವಪ್ಪ ಮೊದಲಾದವರ ಫ್ಲೆಕ್ಸ್ ಗಳ ಸೋಮಶೇಖರ್ ಫ್ಲೆಕ್ಸ್! ಒಂದು ಸಂಗತಿಯನ್ನು ಗಮನಿಸಿ. ಫ್ಲೆಕ್ಸ್ ನಲ್ಲಿ ಸೋಮಶೇಖರ್ ಎತ್ತರ ಗಣನೀಯವಾಗಿ ಕಡಿಮೆ ಕಾಣಿಸುತ್ತದೆ. ಅದು ಅಚಾತುರ್ಯವೋ ಅಥವಾ ಉದ್ದೇಶಪೂರ್ವಕವೋ ಅಂತ ಕಾಂಗ್ರೆಸ್ ನಾಯಕರೇ ಹೇಳಬೇಕು!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಪರ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಪ್ರಚಾರ!
ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆ ಬಾಗಿಲಿಗೆ ಬಂದ ಆಗಂತುಕ!
ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ

