ಬಿಎಸ್ ವೈ ಅಂದರೆ ಭೀಮಣ್ಣ ಖಂಡ್ರೆ, ಶಾಮನೂರು ಶಿವಶಂಕ್ರಪ್ಪ ಮತ್ತು ಯಡಿಯೂರಪ್ಪ: ಬಸನಗೌಡ ಪಾಟೀಲ್ ಯತ್ನಾಳ್

|

Updated on: Jun 23, 2024 | 3:04 PM

ರಾಜ್ಯದಲ್ಲಿ ಈ ಮೂವರ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಅಳಿಯಂದಿರು ಚುನಾವಣೆಗೆ ನಿಲ್ಲುತ್ತಾರೆ, ಮಹಾಸಭಾದ ಇತರ ಸದಸ್ಯರು ಅವರ ಮನೆಗಳಲ್ಲಿ ಕಸ ಗುಡಿಸುವ ಕೆಲಸ ಮಾಡಬೇಕು ಎಂದರು. ಇವರ ಸಾಲಿಗೆ ಗಜಕೇಸರಿ (ಸಚಿವ ಶಿವಾನಂದ ಪಾಟೀಲ್) ಕುಟುಂಬ ಸೇರಿಕೊಂಡಿದೆ ಎಂದು ಯತ್ನಾಳ್ ವ್ಯಂಗ್ಯವಾಡಿದರು.

ವಿಜಯಪುರ: ವಿಧಾನಸಭಾ ಚುನಾವಣೆ ಮುಗಿಯಿತು, ಲೋಕಸಭಾ ಚುನಾವಣೆ ಮುಗೀತು, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಹೊಸ ಸರ್ಕಾರ ರಚನೆಯಾಯಿತು. ಆದರೆ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರು ಬಿಎಸ್ ಯಡಿಯೂರಪ್ಪರ (BS Yediyurappa) ಕುಟುಂಬವನ್ನು ನಿಂದಿಸುವುದು ಮಾತ್ರ ಮುಗಿಯುತ್ತಿಲ್ಲ. ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಯತ್ನಾಳ್, ಲೋಕಸಭಾ ಚುನಾವಣೆಯಲ್ಲಿ ಬಿಎಸ್ ವೈ ಅವರು ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು ನಿನ್ನೆ ಅವರು ನೀಡಿದ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ ಎಂದರು. ನಂತರ ವೀರಶೈವ ಮಹಾಸಭಾದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಯತ್ನಾಳ್; ಬಿಎಸ್ ವೈಗೆ ಹೊಸ ವ್ಯಾಖ್ಯಾನ ನೀಡಿ, ಬಿ ಅಂದರೆ ಭೀಮಣ್ಣ ಖಂಡ್ರೆ, ಎಸ್ ಅಂದ್ರೆ ಶಾಮನೂರು ಶಿವಶಂಕರಪ್ಪ ಮತ್ತು ವೈ ಅಂದ್ರೆ ಯಡಿಯೂರಪ್ಪ ಎಂದು ಹೇಳಿದರು. ರಾಜ್ಯದಲ್ಲಿ ಈ ಮೂವರ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಅಳಿಯಂದಿರು ಚುನಾವಣೆಗೆ ನಿಲ್ಲುತ್ತಾರೆ, ಮಹಾಸಭಾದ ಇತರ ಸದಸ್ಯರು ಅವರ ಮನೆಗಳಲ್ಲಿ ಕಸ ಗುಡಿಸುವ ಕೆಲಸ ಮಾಡಬೇಕು ಎಂದರು. ಇವರ ಸಾಲಿಗೆ ಗಜಕೇಸರಿ (ಸಚಿವ ಶಿವಾನಂದ ಪಾಟೀಲ್) ಕುಟುಂಬ ಸೇರಿಕೊಂಡಿದೆ ಎಂದು ಯತ್ನಾಳ್ ವ್ಯಂಗ್ಯವಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: