ಮಕ್ಕಳಿಬ್ಬರೂ ಲೈಂಗಿಕ ಆರೋಪಗಳಲ್ಲಿ ಜೈಲು ಸೇರಿದರೂ ರೇವಣ್ಣನ ಮೊಗದಲ್ಲಿ ಮಾಸದ ಮುಗುಳ್ನಗು!

ಮಕ್ಕಳಿಬ್ಬರೂ ಲೈಂಗಿಕ ಆರೋಪಗಳಲ್ಲಿ ಜೈಲು ಸೇರಿದರೂ ರೇವಣ್ಣನ ಮೊಗದಲ್ಲಿ ಮಾಸದ ಮುಗುಳ್ನಗು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 23, 2024 | 4:11 PM

ರಾಜ್ಯದಲ್ಲಿ ಏನು ನಡೀತಿದೆ ಅಂತ ಚೆನ್ನಾಗಿ ಗೊತ್ತಿದೆ, ಯಾರು ತಪ್ಪು ಯಾರು ಸರಿ ಅಂತ ಕಾಲವೇ ನಿರ್ಧರಿಸಲಿದೆ ಎಂದು ಹೇಳಿದ ಅವರು ಸೂರಜ್ ನಿಂದ ಅಸಹಜ ಲೈಂಗಿಕ ಅತ್ಯಾಚಾರಕ್ಕೆ ಒಳಗಾಗಿರುವೆನೆಂದು ಆರೋಪಿಸುತ್ತಿರುವ ಯುವಕನ ವಿರುದ್ಧ ಸೂರಜ್ ಆಪ್ತ ಶಿವಕುಮಾರ್ ಎನ್ನುವವನು ದೂರು ಸಲ್ಲಿಸಲು ಹೋದ ವಿಚಾರ ತನಗೆ ಗೊತ್ತಿಲ್ಲ ಎನ್ನುತ್ತಾರೆ.

ಬೆಂಗಳೂರು: ಲೈಂಗಿಕ ದುರಾಚಾರದ ಆರೋಪಗಳಲ್ಲಿ ತನ್ನಿಬ್ಬರು ಮಕ್ಕಳು ಜೈಲು ಸೇರಿದರೂ ಹೆಚ್ ಡಿ ರೇವಣ್ಣ (HD Revanna) ಅವರ ಮುಖದಲ್ಲಿ ಮುಗುಳ್ನಗು ಮಾಸಿಲ್ಲ. ಇವತ್ತು ಬೆಂಗಳೂರಿಗೆ ಆಗಮಿಸಿದ ಅವರನ್ನು ಮಾಧ್ಯಮ ಪ್ರತಿನಿಧಿಗಳು ಸೂರಜ್ ರೇವಣ್ಣ (Suraj Revanna) ಬಗ್ಗೆ ಪ್ರಶ್ನೆ ಕೇಳಿದಾಗ ರೇವಣ್ಣ ನಗುತ್ತಲೇ, ನಾನೀಗ ಯಾವುದೇ ಹೇಳಿಕೆ ನೀಡಲ್ಲ. ಇಂಥ ಷಡ್ಯಂತ್ರಗಳಿಗೆಲ್ಲ (conspiracy) ನಾನು ಹೆದರಲ್ಲ, ನನಗೆ ದೇವರ ಮೇಲೆ ನಂಬಿಕೆ ಇದೆ ಮತ್ತು ನಾಡಿನ ನ್ಯಾಯಾಂಗ ವ್ಯವಸ್ಥೆ ಮೇಲೆ ಸಹ ವಿಶ್ವಾಸವಿದೆ ಎಂದು ಹೇಳಿದರು. ರಾಜ್ಯದಲ್ಲಿ ಏನು ನಡೀತಿದೆ ಅಂತ ಚೆನ್ನಾಗಿ ಗೊತ್ತಿದೆ, ಯಾರು ತಪ್ಪು ಯಾರು ಸರಿ ಅಂತ ಕಾಲವೇ ನಿರ್ಧರಿಸಲಿದೆ ಎಂದು ಹೇಳಿದ ಅವರು ಸೂರಜ್ ನಿಂದ ಅಸಹಜ ಲೈಂಗಿಕ ಅತ್ಯಾಚಾರಕ್ಕೆ ಒಳಗಾಗಿರುವೆನೆಂದು ಆರೋಪಿಸುತ್ತಿರುವ ಯುವಕನ ವಿರುದ್ಧ ಸೂರಜ್ ಆಪ್ತ ಶಿವಕುಮಾರ್ ಎನ್ನುವವನು ದೂರು ಸಲ್ಲಿಸಲು ಹೋದ ವಿಚಾರ ತನಗೆ ಗೊತ್ತಿಲ್ಲ ಎನ್ನುತ್ತಾರೆ.

ರೇವಣ್ಣ ಸಹ ಮಹಿಳೆಯೊಬ್ಬರ ಮೇಲೆ ಲೈಂಗಿಕ ಅತ್ಯಾಚಾರ ಮತ್ತು ಇನ್ನೊಬ್ಬ ಮಹಿಳೆಯ ಅಪಹರಣ ನಡೆಸಿದ ಪ್ರಕರಣಗಳಲ್ಲಿ ಜಾಮೀನು ಪಡೆದು ಜೈಲುವಾಸ ತಪ್ಪಿಸಿಕೊಂಡಿದ್ದಾರೆ. ಆವರ ಪತ್ನಿ ಭವಾನಿ ರೇವಣ್ಣ ಸಹ ಮಹಿಳೆಯೊಬ್ಬರನ್ನು ಬೆದರಿಸಿದ ಆರೋಪದಲ್ಲಿ ನಿರೀಕ್ಷಣಾ ಜಾಮೀನು ಪಡೆದು ಅರೆಸ್ಟ್ ಆಗುವುದರಿಂದ ಬಚಾವಾಗಿದ್ದಾರೆ. ಒಂದು ಪಕ್ಷ ಇವರಿಬ್ಬರಿಗೆ ಬೇಲ್ ಸಿಕ್ಕಿರದಿದ್ದರೆ ಇಡೀ ಕುಟುಂಬವೇ ಜೈಲಿನಲ್ಲಿರಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುತಿತ್ತು!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರೇವಣ್ಣ ಕುಟುಂಬಕ್ಕೆ ಮತ್ತೊಂದು ಶಾಕ್, ಸೂರಜ್​ ರೇವಣ್ಣ ಕೇಸ್​ ಸಿಐಡಿಗೆ ವರ್ಗಾವಣೆ