ಮಕ್ಕಳು ಮತ್ತು ಪಾಲಕರ ನಡುವೆ ಸಂವಾದ ಕಡಿಮೆಯಾಗುತ್ತಾ ಹೋದಂತೆ ಜನರೇಶನ್ ಗ್ಯಾಪ್ ಕಂದರ ಹೆಚ್ಚುತ್ತಾ ಹೋಗುತ್ತದೆ: ಐಶ್ವರ್ಯ ಶಿವಕುಮಾರ್

ನಮ್ಮ ಪ್ರತಿನಿಧಿಯೊಂದಿಗೆ ಮಾತಾಡುವಾಗ ಅವರು, ಶಾಲಾ ಮತ್ತು ಕಾಲೇಜುಗಳನ್ನು ತಮ್ಮ ಮಕ್ಕಳಿಗಾಗಿ ಆಯ್ಕೆ ಮಾಡಿಕೊಳ್ಳುವಾಗ ಪೋಷಕರು ಚೂಸಿಯಾಗಿರಬೇಕು ಅಂತ ಹೇಳಲಿಲ್ಲ. ಯಾವುದೋ ಒಂದು ಶಾಲೆಯಲ್ಲಿ ವಾಚ್ಮನ್ ನಿಂದ ಹಿಡಿದು ಪ್ರಿನ್ಸಿಪಾಲ್ ವರೆಗೆ ಎಲ್ಲರೂ ಒಂದೇ ರೀತಿಯಾಗಿ ಮಾತಾಡಿದರೆ ಅದು ಒಳ್ಳೆಯ ಸ್ಕೂಲ್ ಅಂತ ಹೇಳಿದ್ದು ಎಂದರು.

ಮಕ್ಕಳು ಮತ್ತು ಪಾಲಕರ ನಡುವೆ ಸಂವಾದ ಕಡಿಮೆಯಾಗುತ್ತಾ ಹೋದಂತೆ ಜನರೇಶನ್ ಗ್ಯಾಪ್ ಕಂದರ ಹೆಚ್ಚುತ್ತಾ ಹೋಗುತ್ತದೆ: ಐಶ್ವರ್ಯ ಶಿವಕುಮಾರ್
|

Updated on: Jun 23, 2024 | 5:01 PM

ನೆಲಮಂಗಲ: ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಪುತ್ರಿ ಐಶ್ವರ್ಯ ಶಿವಕುಮಾರ್ (Aishwarya Shivakumar) ಶಿಕ್ಷಣ ಕ್ಷೇತ್ರದಲ್ಲಿ (field of education) ದೊಡ್ಡ ಹೆಸರು ಮಾಡುತ್ತಿದ್ದಾರೆ ಮತ್ತು ಅವರ ಐಡೆಂಟಿಗೆ ತಂದೆಯ ಹೆಸರೇನೂ ಬೇಕಿಲ್ಲ ಅನಿಸುತ್ತೆ. ಇವತ್ತು ನೆಲಮಂಗಲದ ಸೌಂದರ್ಯ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಅವರು ವಿಶೇಷ ಅತಿಥಿಯಾಗಿ ಭಾಗಿಯಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾಡಿದರು. ನಂತರ ಹೊರಬಂದ ಅವರು ನಮ್ಮ ಪ್ರತಿನಿಧಿಯೊಂದಿಗೆ ಮಾತಾಡುವಾಗ, ಶಾಲಾ ಮತ್ತು ಕಾಲೇಜುಗಳನ್ನು ತಮ್ಮ ಮಕ್ಕಳಿಗಾಗಿ ಆಯ್ಕೆ ಮಾಡಿಕೊಳ್ಳುವಾಗ ಪೋಷಕರು ಚೂಸಿಯಾಗಿರಬೇಕು ಅಂತ ಹೇಳಲಿಲ್ಲ. ಯಾವುದೋ ಒಂದು ಶಾಲೆಯಲ್ಲಿ ವಾಚ್ಮನ್ ನಿಂದ ಹಿಡಿದು ಪ್ರಿನ್ಸಿಪಾಲ್ ವರೆಗೆ ಎಲ್ಲರೂ ಒಂದೇ ರೀತಿಯಾಗಿ ಮಾತಾಡಿದರೆ ಅದು ಒಳ್ಳೆಯ ಸ್ಕೂಲ್ ಅಂತ ಹೇಳಿದ್ದು ಎಂದರು.

ಶಿಕ್ಷಣ ವ್ಯವಸ್ಥೆಯಲ್ಲಿ ಅಥವಾ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಪೋಷಕರ ನಡುವೆ ಹೊಂದಾಣಿಕೆ ಮುಖ್ಯವಾಗಿದೆ, ಹಾಗೆಯೇ, ವಿದ್ಯಾರ್ಥಿ ಹಾಗೂ ಶಿಕ್ಷಕರ ನಡುವಿನ ಸಂಬಂಧವೂ ಅಷ್ಟೇ ಮುಖ್ಯ ಎಂದ ಐಶ್ವರ್ಯ, ಇವತ್ತಿನ ಯುಗದಲ್ಲಿ ಪೋಷಕರು ಮತ್ತು ಮಕ್ಕಳ ನಡುವೆ ಸಂವಾದದ ಪ್ರಮಾಣ ತೀರ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು. ಇಬ್ಬರ ನಡುವೆ ಕಮ್ಯುನಿಕೇಷನ್ ನಡೆಯದಿದ್ದರೆ ಜನರೇಶನ್ ಗ್ಯಾಪ್ ಹೆಚ್ಚುತ್ತಾ ಹೋಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹೊರಗೆ ಟಫ್ ಆಗಿರೋ ಡಿಕೆ ಶಿವಕುಮಾರ್​ ಮನೆಯಲ್ಲಿ ಹೇಗಿರ್ತಾರೆ?; ವೀಕೆಂಡ್​ ವಿತ್ ರಮೇಶ್​ನಲ್ಲಿ ವಿವರಿಸಿದ ಮಗಳು ಐಶ್ವರ್ಯಾ

Follow us