ಹೊರಗೆ ಟಫ್ ಆಗಿರೋ ಡಿಕೆ ಶಿವಕುಮಾರ್​ ಮನೆಯಲ್ಲಿ ಹೇಗಿರ್ತಾರೆ?; ವೀಕೆಂಡ್​ ವಿತ್ ರಮೇಶ್​ನಲ್ಲಿ ವಿವರಿಸಿದ ಮಗಳು ಐಶ್ವರ್ಯಾ

Aishwarya Shivakumar: ‘ವೀಕೆಂಡ್ ವಿತ್ ರಮೇಶ್’ ವೇದಿಕೆ ಮೇಲೆ ಪತ್ನಿ ಉಶಾ ಶಿವಕುಮಾರ್, ಮಗಳು ಐಶ್ವರ್ಯಾ ಶಿವಕುಮಾರ್ ಮೊದಲಾದವರು ಆಗಮಿಸಿದ್ದಾರೆ. ತಂದೆಯ ಬಗ್ಗೆ ಐಶ್ವರ್ಯಾ ಮಾತನಾಡಿದ್ದಾರೆ.

ಹೊರಗೆ ಟಫ್ ಆಗಿರೋ ಡಿಕೆ ಶಿವಕುಮಾರ್​ ಮನೆಯಲ್ಲಿ ಹೇಗಿರ್ತಾರೆ?; ವೀಕೆಂಡ್​ ವಿತ್ ರಮೇಶ್​ನಲ್ಲಿ ವಿವರಿಸಿದ ಮಗಳು ಐಶ್ವರ್ಯಾ
ಐಶ್ವರ್ಯಾ-ಶಿವಕುಮಾರ್
Follow us
ರಾಜೇಶ್ ದುಗ್ಗುಮನೆ
| Updated By: Digi Tech Desk

Updated on:Jun 06, 2023 | 1:53 PM

Weekend With Ramesh 5 Grand Finale: ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (Dk Shivakumar) ಅವರು ಕಾಂಗ್ರೆಸ್​​ನಲ್ಲಿ ಹಲವು ವರ್ಷಗಳಿಂದ ಆ್ಯಕ್ಟೀವ್ ಆಗಿದ್ದಾರೆ. ರಾಷ್ಟ್ರ ರಾಜಕೀಯದಲ್ಲಿಯೂ ಡಿಕೆ ಶಿವಕುಮಾರ್ ಪ್ರಮುಖ ವ್ಯಕ್ತಿಯಾಗಿ ಬಿಂಬಿತವಾಗುತ್ತಿದ್ದಾರೆ. ವರ್ಣರಂಜಿತ ರಾಜಕೀಯ ಜೀವನ ಅನುಭವಿಸಿರುವ ಹಾಗೂ ಅನುಭವಿಸುತ್ತಿರುವ ಡಿ.ಕೆ. ಶಿವಕುಮಾರ್ ಈಗ ‘ವೀಕೆಂಡ್ ವಿತ್ ರಮೇಶ್ ಸೀಸನ್​ 5’ರ (Weekend With Ramesh 5) ಕೊನೆಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ. 100ನೇ ಸಾಧಕನಾಗಿ ಅವರು ವಿಶೇಷ ಕುರ್ಚಿ ಮೇಲೆ ಕೂರುತ್ತಿದ್ದಾರೆ. ಈ ಸಂಚಿಕೆಯ ಪ್ರೋಮೋ ವೈರಲ್ ಆಗಿದೆ.

‘ವೀಕೆಂಡ್ ವಿತ್ ರಮೇಶ್​ ಸೀಸನ್ 5’ ಮಾರ್ಚ್​ ತಿಂಗಳಲ್ಲಿ ಆರಂಭ ಆಯಿತು. ಮೊದಲ ಅತಿಥಿಯಾಗಿ ರಮ್ಯಾ ಆಗಮಿಸಿದ್ದರು. ನಂತರ ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ, ಡಾಕ್ಟರ್​ ಮಂಜುನಾಥ್, ಹಿರಿಯ ನಟ ದತ್ತಣ್ಣ, ಅವಿನಾಶ್, ಮಂಡ್ಯ ರಮೇಶ್, ಸಿಹಿ ಕಹಿ ಚಂದ್ರು, ನೆನಪಿರಲಿ ಪ್ರೇಮ್ ಮೊದಲಾದವರು ಬಂದು ಸಾಧಕರ ಚೇರ್ ಮೇಲೆ ಕುಳಿತಿದ್ದಾರೆ. ಈಗ ಡಿಕೆ ಶಿವಕುಮಾರ್ ಅವರ ಬದುಕಿನ ಬಗ್ಗೆ ತಿಳಿದುಕೊಳ್ಳುವ ಸಮಯ.

‘ವೀಕೆಂಡ್ ವಿತ್ ರಮೇಶ್’ ವೇದಿಕೆ ಮೇಲೆ ಪತ್ನಿ ಉಶಾ ಶಿವಕುಮಾರ್, ಮಗಳು ಐಶ್ವರ್ಯಾ ಶಿವಕುಮಾರ್ ಮೊದಲಾದವರು ಆಗಮಿಸಿದ್ದಾರೆ. ‘ಹೊರಗಡೆ ಅವರು ಟಫ್ ಮ್ಯಾನ್. ಮನೆಯಲ್ಲಿ ಸಖತ್ ಎಮೋಷನಲ್. ಅವರು ನನ್ನ ಹೀರೋ’ ಎಂದು ಐಶ್ವರ್ಯಾ ಹೇಳಿಕೊಂಡಿದ್ದಾರೆ. ಸಿಹಿ ಕಹಿ ಚಂದ್ರು ಕೂಡ ವೇದಿಕೆ ಏರಿದ್ದು, ‘ಏನೇ ಆದರೂ ಶಿವಕುಮಾರ್ ಇರ್ತಾರೆ ಅನ್ನೋ ಗ್ಯಾರಂಟಿ’ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಡಿಕೆಶಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಈ ಪ್ರೋಮೋ ವೈರಲ್ ಆಗಿದೆ. ಆರನೇ ಕ್ಲಾಸ್​ನಲ್ಲೇ ರಾಜಕಾರಣಿ ಆಗಬೇಕು ಎನ್ನುವ ಕನಸನ್ನು ಡಿಕೆಶಿ ಕಂಡಿದ್ದರು. ಈ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

View this post on Instagram

A post shared by Zee Kannada (@zeekannada)

ಇದನ್ನೂ ಓದಿ: ಡಿಕೆ ಶಿವಕುಮಾರ್​ ಎಪಿಸೋಡ್​​ನೊಂದಿಗೆ ವೀಕೆಂಡ್ ವಿತ್​ ರಮೇಶ್ ಮುಗಿಯಲಿದೆ​; ಖಚಿತಪಡಿಸಿದ ವಾಹಿನಿ

ಡಿ.ಕೆ. ಶಿವಕುಮಾರ್ ಅವರ ಬಾಲ್ಯ, ಅವರ ಕುಟುಂಬ, ಶಿಕ್ಷಣ, ಕಾಲೇಜು ದಿನಗಳು, ಹೋರಾಟ, ಕಾಂಗ್ರೆಸ್ ಪಕ್ಷ ಸೇರ್ಪಡೆ, ಮೊದಲ ಚುನಾವಣೆ ಸೋಲು, ದೇವೇಗೌಡರನ್ನು ಸೋಲಿಸಿದ್ದು, ದೊಡ್ಡ ರಾಜಕಾರಣಿಗಳ ಸಖ್ಯ, ರಾಜಕೀಯದ ಪಟ್ಟುಗಳು, ಸಿಬಿಐ, ಇಡಿ, ಐಟಿ ಪ್ರಕರಣಗಳು, ಈ ಚುನಾವಣೆಯಲ್ಲಿನ ಅಭೂತಪೂರ್ವ ಗೆಲುವುಗಳ ಜೊತೆಗೆ ತಮ್ಮ ಕುಟುಂಬ, ಪತ್ನಿ, ಮಕ್ಕಳು ಹಾಗೂ ಸಹೋದರ ಡಿಕೆ ಸುರೇಶ್ ಸೇರಿದಂತೆ ಇನ್ನೂ ಹಲವು ವಿಷಯಗಳ ಬಗ್ಗೆ ಡಿಕೆ ಶಿವಕುಮಾರ್ ಮಾತನಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:16 pm, Tue, 6 June 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ