AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

DK Shivakumar: ಡಿಕೆ ಶಿವಕುಮಾರ್​ ಎಪಿಸೋಡ್​​ನೊಂದಿಗೆ ವೀಕೆಂಡ್ ವಿತ್​ ರಮೇಶ್ ಮುಗಿಯಲಿದೆ​; ಖಚಿತಪಡಿಸಿದ ವಾಹಿನಿ

WWR5 Grand Finale: ಈ ಸೀಸನ್​ನಲ್ಲಿ ಅವಿನಾಶ್, ಮಂಡ್ಯ ರಮೇಶ್, ಸಿಹಿ ಕಹಿ ಚಂದ್ರು, ನೆನಪಿರಲಿ ಪ್ರೇಮ್ ಮೊದಲಾದವರು ಬಂದು ಸಾಧಕರ ಚೇರ್ ಮೇಲೆ ಕುಳಿತು ಹೋಗಿದ್ದಾರೆ. ಈಗ ನೂರನೇ ಸಾಧಕರಾಗಿ ಡಿಕೆ ಶಿವಕುಮಾರ್ ಬರುತ್ತಿದ್ದಾರೆ.

DK Shivakumar: ಡಿಕೆ ಶಿವಕುಮಾರ್​ ಎಪಿಸೋಡ್​​ನೊಂದಿಗೆ ವೀಕೆಂಡ್ ವಿತ್​ ರಮೇಶ್ ಮುಗಿಯಲಿದೆ​; ಖಚಿತಪಡಿಸಿದ ವಾಹಿನಿ
ಡಿಕೆಶಿ
ರಾಜೇಶ್ ದುಗ್ಗುಮನೆ
| Updated By: Digi Tech Desk

Updated on:Jun 06, 2023 | 1:05 PM

Share

Weekend With Ramesh 5 Grand Finale: ‘ವೀಕೆಂಡ್ ವಿತ್ ರಮೇಶ್​ ಸೀಸನ್ 5’ರಲ್ಲಿ ಹಲವು ಸಾಧಕರು ಬಂದು ಹೋಗಿದ್ದಾರೆ. ಎಲ್ಲರೂ ತಮ್ಮ ಜರ್ನಿ ಬಗ್ಗೆ, ಕಷ್ಟದ ದಿನಗಳ ಬಗ್ಗೆ, ಯಶಸ್ಸು ಕಂಡ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ವಿಕೆಂಡ್ ವಿತ್ ರಮೇಶ್ ಮೊದಲ ಸೀಸನ್​ನಿಂದ ಐದನೇ ಸೀಸನ್​ವರೆಗೆ ಒಟ್ಟೂ 99 ಸಾಧಕರು ಬಂದು ಹೋಗಿದ್ದಾರೆ. 100ನೇ ಸಾಧಕನಾಗಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಆಗಮಿಸುತ್ತಿದ್ದಾರೆ. ಇದರ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದೆ.

ಈ ಮೊದಲು ಮಾತನಾಡಿದ್ದ ರಮೇಶ್ ಅರವಿಂದ್ ಅವರು ನೂರನೇ ಅತಿಥಿ ಹೇಗಿರಲಿದ್ದಾರೆ ಎಂಬುದನ್ನು ವಿವರಿಸಿದ್ದರು. ‘ಐದನೇ ಸೀಸನ್​​ನ ಮೊದಲ ಅತಿಥಿಯಾಗಿ ರಮ್ಯಾ ಬರುತ್ತಿದ್ದಾರೆ. ನೂರನೇ ಅತಿಥಿ ತುಂಬಾನೇ ವಿಶೇಷವಾಗಿರಲಿದ್ದಾರೆ’ ಎಂದು ರಮೇಶ್ ಅರವಿಂದ್ ಹೇಳಿದ್ದರು. ಈಗ ನೂರನೇ ಅತಿಥಿಯಾಗಿ ಡಿಕೆ ಶಿವಕುಮಾರ್ ಆಗಮಿಸುತ್ತಿದ್ದಾರೆ.

ಇದನ್ನೂ ಓದಿ: ವೀಕೆಂಡ್ ವಿತ್ ರಮೇಶ್​ಗೆ ಡಿಕೆ ಶಿವಕುಮಾರ್, ಸಾಧಕರ ಕುರ್ಚಿಯಲ್ಲಿ ಟ್ರಬಲ್ ಶೂಟರ್

‘ರಾಜ್ಯ ಕಂಡ ಪ್ರಚಂಡ ರಾಜಕಾರಣಿ, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರ ಬದುಕಿನ ಜರ್ನಿ ಅನಾವರಣ. ವೀಕೆಂಡ್ ವಿತ್ ರಮೇಶ್-5 ಗ್ರ್ಯಾಂಡ್ ಫಿನಾಲೆ. ಶನಿ-ಭಾನು ರಾತ್ರಿ ‌9ಕ್ಕೆ’ ಎಂದು ಹೊಸ ಪ್ರೋಮೋ ಹಂಚಿಕೊಂಡು ಕ್ಯಾಪ್ಶನ್ ನೀಡಲಾಗಿದೆ. ಈ ಮೂಲಕ ‘ವೀಕೆಂಡ್ ವಿತ್ ಎಪಿಸೋಡ್​ ಸೀಸನ್ 5’ ಕೊನೆ ಆಗಲಿದೆ ಎಂದು ವಾಹಿನಿ ಕಡೆಯಿಂದ ಮಾಹಿತಿ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:46 pm, Tue, 6 June 23

ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ