AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gufi Paintal: ಮಹಾಭಾರತದಲ್ಲಿ ಶಕುನಿ ಪಾತ್ರ ಮಾಡಿ ಜನಪ್ರಿಯತೆ ಪಡೆದಿದ್ದ ಗೂಫಿ ಪೈಂತಲ್ ನಿಧನ

ಕೆಲ ದಿನಗಳ ಹಿಂದೆ ಗೂಫಿಗೆ ಆರೋಗ್ಯ ಕೈ ಕೊಟ್ಟ ಬಗ್ಗೆ ವರದಿ ಆಗಿತ್ತು. ಅವರು ಆಸ್ಪತ್ರೆಯಿಂದ ಮರಳಿ ಬರಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಸುಳ್ಳಾಗಿದೆ.

Gufi Paintal: ಮಹಾಭಾರತದಲ್ಲಿ ಶಕುನಿ ಪಾತ್ರ ಮಾಡಿ ಜನಪ್ರಿಯತೆ ಪಡೆದಿದ್ದ ಗೂಫಿ ಪೈಂತಲ್ ನಿಧನ
ಗೂಫಿ ಪೈಂತಲ್
ರಾಜೇಶ್ ದುಗ್ಗುಮನೆ
| Edited By: |

Updated on:Jun 05, 2023 | 4:04 PM

Share

ಟಿವಿ ಸೀರಿಯಲ್ ‘ಮಹಾಭಾರತ’ದಲ್ಲಿ (Mahabharat) ಶಕುನಿ ಪಾತ್ರ ಮಾಡಿ ಎಲ್ಲರ ಗಮನ ಸೆಳೆದಿದ್ದ ನಟ ಗೂಫಿ ಪೈಂತಲ್ ಅವರು ಇಂದು (ಜೂನ್ 5) ನಿಧನ ಹೊಂದಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. ಹಲವು ವರ್ಷಗಳಿಂದ ಗೂಫಿ ಅವರು ವಯೋ ಸಹಜ ಕಾಯಿಲೆಯಿಂದ ಬಳುತ್ತಿದ್ದರು. ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದರಿಂದ ಗೂಫಿ (Gufi Paintal) ಅವರನ್ನು ವಾರಗಳ ಹಿಂದೆ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಚಿಕಿತ್ಸೆ ಫಲಕಾರಿ ಆಗದೆ ಅವರು ಮೃತಪಟ್ಟಿದ್ದಾರೆ. ಅವರ ಸೋದರ ಸಂಬಂಧಿ ಹಿತೇನ್ ಪೈಂತಲ್ (Hiten Paintal) ಅವರು ಈ ನೋವಿನ ಸಂಗತಿ ಹಂಚಿಕೊಂಡಿದ್ದಾರೆ.

‘ದುರದೃಷ್ಟವಶಾತ್ ಗೂಫಿ ಇನ್ನಿಲ್ಲ. ಅವರು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಆಸ್ಪತ್ರೆಯಲ್ಲಿ ನಿಧನರಾದರು. ಯಾವುದೇ ನೋವಿಲ್ಲದೆ ಅವರು ಮೃತಪಟ್ಟರು’ ಎಂದು ಹಿತೇನ್ ಮಾಹಿತಿ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಗೂಫಿಗೆ ಆರೋಗ್ಯ ಕೈ ಕೊಟ್ಟ ಬಗ್ಗೆ ವರದಿ ಆಗಿತ್ತು. ಅವರು ಆಸ್ಪತ್ರೆಯಿಂದ ಮರಳಿ ಬರಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಸುಳ್ಳಾಗಿದೆ.

ಕೆಲ ದಿನಗಳ ಹಿಂದೆ ಮಾತನಾಡಿದ್ದ ಹಿತೇನ್, ‘ಗೂಫಿ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರಿಗೆ ಸಾಕಷ್ಟು ಸಮಯದಿಂದ ಆರೋಗ್ಯ ಸರಿ ಇಲ್ಲ. ಈಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ. ಕಳೆದ ಏಳೆಂಟು ದಿನಗಳಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಅವರ ಆರೋಗ್ಯ ಸ್ಥಿರ ಸ್ಥಿತಿಗೆ ಬಂದಿದೆ’ ಎಂದಿದ್ದರು. ಇದಾದ ಕೆಲವೇ ದಿನಗಳಲ್ಲಿ ಅವರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಭೀಕರ ರಸ್ತೆ ಅಪಘಾತ; ಖ್ಯಾತ ಕಿರುತೆರೆ ನಟ ನಿಧನ, ಮೂವರ ಸ್ಥಿತಿ ಗಂಭೀರ

ಬಿಆರ್ ಚೋಪ್ರಾ ನಿರ್ಮಾಣದ ‘ಮಹಾಭಾರತ್’ (1988) ಸರಣಿ ಎಲ್ಲರ ಗಮನಸೆಳೆದಿತ್ತು. ಅಂದಿನ ಕಾಲದಲ್ಲಿ ಈ ಸರಣಿ ಭಾರೀ ಮನರಂಜನೆ ನೀಡಿತ್ತು. ಮಹಾಭಾರತದಲ್ಲಿ ಬರುವ ಶಕುನಿ ಪಾತ್ರವನ್ನು ಸಮರ್ಥವಾಗಿ ಗೂಫಿ ನಿರ್ವಹಿಸಿದ್ದರು. ‘ಸುಹಾಗ್’, ‘ದಿಲ್ಲಾಗಿ’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ‘ಹೆಲೋ ಇನ್​ಸ್ಪೆಕ್ಟರ್’ ಹೆಸರಿನ ಸಿಐಡಿ ಧಾರಾವಾಹಿಯಲ್ಲಿ ನಟಿಸಿಯೂ ಅವರು ಗಮನ ಸೆಳೆದಿದ್ದರು. ಇತ್ತೀಚಿನ ವರೆಗೂ ಕಿರುತೆರೆಯಲ್ಲಿ ಗೂಫಿ ಆ್ಯಕ್ಟೀವ್ ಆಗಿದ್ದರು.

ಇಂದು ಗೂಫಿ ಅವರ ಅಂತ್ಯ ಸಂಸ್ಕಾರ ನಡೆಯಲಿದೆ. ಮುಂಬೈ ಅಂಧೇರಿಯ ಸ್ಮಶಾನದಲ್ಲಿ ಅಂತಿಮ ವಿಧಿವಿಧಾನ ನಡೆಯಲಿದೆ. ಗೂಫಿ ಅವರಿಗೆ ಓರ್ವ ಮಗ ಹಾಗೂ ಸೊಸೆ, ಮೊಮ್ಮಕಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:05 pm, Mon, 5 June 23

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ