ಡಿಕೆ ಶಿವಕುಮಾರ್ನ ಮೊದಲು ನೋಡಿದ ರಾಜೀವ್ ಗಾಂಧಿ ಹೇಳಿದ್ದು ಒಂದೇ ಮಾತು; ‘ವೀಕೆಂಡ್..’ ಶೋನಲ್ಲಿ ವಿವರಿಸಿದ ಡಿಕೆಶಿ
Weekend With Ramesh 5: ಶಿವಕುಮಾರ್ ಕಾಂಗ್ರೆಸ್ ಸೇರಿ ಪಕ್ಷದಲ್ಲಿ ಒಂದೊಂದೇ ಹಂತ ಏರುತ್ತಾ ಬಂದರು. ಅವರು ರಾಜೀವ್ ಗಾಂಧಿ ಭೇಟಿ ಬಗ್ಗೆ ಈಗ ವೀಕೆಂಡ್ ವಿತ್ ರಮೇಶ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ನ ಪ್ರಮುಖ ನಾಯಕ, ಉಪಮುಖ್ಯ ಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ರಾಜಕೀಯದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಅವರು ಟ್ರಬಲ್ ಶೂಟರ್ ಎಂದೇ ಫೇಮಸ್. ರಾಷ್ಟ್ರ ರಾಜಕಾರಣದಲ್ಲೂ ಅವರು ಗಮನ ಸೆಳೆಯುತ್ತಿದ್ದಾರೆ. ರಾಜಕೀಯ ಬದುಕಿನ ಜೊತೆ ಡಿಕೆಶಿ ಸಾಕಷ್ಟು ವಿವಾದ ಕೂಡ ಮಾಡಿಕೊಂಡಿದ್ದಾರೆ ಡಿಕೆಎಸ್ ರಾಜಕೀಯಕ್ಕೆ ಅವರು ಬಂದಿದ್ದು ಹೇಗೆ? ಆರಂಭದ ದಿನ ಹೇಗಿತ್ತು ಎಂಬಿತ್ಯಾದಿ ವಿಚಾರಗಳ ಕುರಿತು ಅವರು ‘ವೀಕೆಂಡ್ ವಿತ್ ರಮೇಶ್ ಸೀಸನ್ 5’ರಲ್ಲಿ (Weekend With Ramesh) ಹೇಳಿಕೊಂಡಿದ್ದಾರೆ. ಇದರ ಪ್ರೋಮೋನ ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಶನಿವಾರ (ಜೂನ್ 10) ಹಾಗೂ ಭಾನುವಾರ (ಜೂನ್ 11) ಈ ಎಪಿಸೋಡ್ ಪ್ರಸಾರ ಕಾಣಲಿದೆ. ಡಿಕೆಶಿ ಅವರ ಎಪಿಸೋಡ್ನೊಂದಿಗೆ ‘ವೀಕೆಂಡ್ ವಿತ್ ರಮೇಶ್ ಸೀಸನ್ 5’ ಪೂರ್ಣಗೊಳ್ಳಲಿದೆ.
ಶಿವಕುಮಾರ್ ಅವರು 80ರ ದಶಕದಲ್ಲಿ ವಿದ್ಯಾರ್ಥಿ ನಾಯಕನಾಗಿ ಗುರುತಿಸಿಕೊಂಡರು. ನಂತರ ಕಾಂಗ್ರೆಸ್ ಸೇರಿ ಪಕ್ಷದಲ್ಲಿ ಒಂದೊಂದೇ ಹಂತ ಏರುತ್ತಾ ಬಂದರು. 1989ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅವರು ಮೈಸೂರು ಜಿಲ್ಲೆಯ ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು. ಆಗ ಅವರಿಗೆ 27 ವರ್ಷ ವಯಸ್ಸು. 1994, 1999, 2004ರಲ್ಲಿ ಅವರು ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದರು. ನಂತರ 2008, 2013, 2018 ಹಾಗೂ 2023ರ ವಿಧಾನಸಭೆ ಚುನಾವಣೆಯಲ್ಲಿ ಹುಟ್ಟೂರು ಕನಕಪುರದಲ್ಲಿ ಸ್ಪರ್ಧಿಸಿ ಗೆಲುವು ಕಂಡರು. ಈಗ ಕಾಂಗ್ರೆಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆಗಿದ್ದಾರೆ. ಅವರ ರಾಜಕೀಯ ಬದುಕು ರೋಚಕವಾಗಿದೆ ಎಂಬುದುರಲ್ಲಿ ಯಾವುದೇ ಅನುಮಾನ ಬೇಡ. ಈ ಪೈಕಿ ಕೆಲ ವಿಚಾರಗಳ ಕುರಿತು ಅವರು ‘ವೀಕೆಂಡ್ ವಿತ್ ರಮೇಶ್ 5’ರಲ್ಲಿ ಹಂಚಿಕೊಳ್ಳಲಿದ್ದಾರೆ. ಈಗ ರಿಲೀಸ್ ಆದ ಪ್ರೋಮೋದಲ್ಲಿ ಅವರ ರಾಜಕೀಯ ಬದುಕಿನ ಬಗ್ಗೆ ಮಾಹಿತಿ ಇದೆ.
6ನೇ ತರಗತಿಯಲ್ಲಿದ್ದಾಗಲೇ ಡಿಕೆಶಿ ಅವರು ರಾಜಕೀಯದ ಕಡೆ ಸೆಳೆತ ಹೊಂದಿದ್ದರು. ಭವಿಷ್ಯದಲ್ಲಿ ತಾವು ರಾಜಕಾರಣಿ ಆಗಬೇಕು ಎಂಬುದನ್ನು ಅವರು ಆಗಲೇ ನಿರ್ಧರಿಸಿದ್ದರು. ಈ ವಿಚಾರವನ್ನು ಅವರು ಸಾಧಕರ ಕುರ್ಚಿ ಮೇಲೆ ಕುಳಿತು ಹೇಳಿಕೊಂಡಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜೊತೆಗಿನ ಭೇಟಿ ಬಗ್ಗೆಯೂ ಅವರು ಮಾತನಾಡಿದ್ದಾರೆ.
View this post on Instagram
ಇದನ್ನೂ ಓದಿ: ಹೊರಗೆ ಟಫ್ ಆಗಿರೋ ಡಿಕೆ ಶಿವಕುಮಾರ್ ಮನೆಯಲ್ಲಿ ಹೇಗಿರ್ತಾರೆ?; ವೀಕೆಂಡ್ ವಿತ್ ರಮೇಶ್ನಲ್ಲಿ ವಿವರಿಸಿದ ಮಗಳು ಐಶ್ವರ್ಯಾ
ಡಿಕೆಶಿ ಅವರು ವಿದ್ಯಾರ್ಥಿ ನಾಯಕನಾಗಿ ಗಮನ ಸೆಳೆಯುತ್ತಿದ್ದ ಕಾಲವದು. ‘ನನ್ನನ್ನು ನೋಡಿದ ರಾಜೀವ್ ಗಾಂಧಿ ವರ್ಲ್ಡ್ ಯೂತ್ ಆ್ಯಂಡ್ ಸ್ಟುಡೆಂಟ್ ಫೆಸ್ಟಿವಲ್ಗೆ ನೀವು ಆಯ್ಕೆ ಆಗಿದ್ದೀರಿ ಎಂದು ನನಗೆ ಹೇಳಿದ್ದರು’ ಎಂಬುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ ಡಿಕೆಶಿ. ‘ನನ್ನ ಕುಟುಂಬದ ವೃತ್ತಿ ಕೃಷಿ, ಆದರೆ, ರಾಜಕೀಯ ನನಗೆ ಪ್ಯಾಷನ್’ ಎಂದಿದ್ದಾರೆ. ಆರಂಭದ ದಿನಗಳಲ್ಲಿ ಡಿಕೆಶಿ ಕರ್ನಾಟಕ ಪ್ರದೇಶ್ ಯೂತ್ ಕಾಂಗ್ರೆಸ್ ಸಮಿತಿಯಲ್ಲೂ ಗುರುತಿಸಿಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ