ಸೂರಜ್ ರೇವಣ್ಣನನ್ನು ಬೆಂಗಳೂರಿಗೆ ಕರೆತಂದ ಪೊಲೀಸರು, ಸಾಯಂಕಾಲ ನ್ಯಾಯಾಲಯದ ಮುಂದೆ ಹಾಜರು
ಜೂನ್ 16ರಂದು ಹೊಳೆನರಸೀಪುರ ಹೊರವಲಯದಲ್ಲಿರುವ ಗನ್ನಿಕಡದ ತೋಟದ ಮನೆಗೆ ತನ್ನನ್ನು ಕರೆಸಿಕೊಂಡ ಸೂರಜ್ ತನ್ನೊಂದಿಗೆ ಅನೈಸರ್ಗಿಕ ಲೈಂಗಿಕ ಕ್ರೀಡೆ ನಡೆಸಿದರು ಎಂದು ಸಂತ್ರಸ್ತ ಯುವಕ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾನೆ ಮತ್ತು ದೂರಿನ ಮೇರೆಗೆ ಸೂರಜ್ ರನ್ನು ಬಂಧಿಸಲಾಗಿದೆ.
ಹಾಸನ: ಅರಕಲುಗೂಡಿನ ಜೆಡಿಎಸ್ ಕಾರ್ಯಕರ್ತನೊಬ್ಬನ (party worker) ಮೇಲೆ ಅಸಹಜ ಲೈಂಗಿಕ ಅತ್ಯಾಚಾರ ನಡೆಸಿದ ಆರೋಪದಲ್ಲಿ ಹೊಳೆರರಸೀಪುರ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಡಾ ಸೂರಜ್ ರೇವಣ್ಣರನ್ನು (Dr Suraj Revanna) ಇಂದು ಮಧ್ಯಾಹ್ನ ಹಾಸನದಿಂದ ಬೆಂಗಳೂರಿಗೆ ಕರೆತರಲಾಯಿತು. ಕೆಂಪು ಟೀ ಶರ್ಟ್ ಧರಿಸಿರುವ ಸೂರಜ್ ರೇವಣ್ಣ ಪೊಲೀಸ್ ವ್ಯಾನ್ ಹತ್ತುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಇಂದು ಸಾಯಂಕಾಲ ಸೂರಜ್ ರನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ( People’s Representative Court) ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದೆಂದು ಪೊಲೀಸ್ ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಸಂತ್ರಸ್ತ ಯುವಕನ ವಿರುದ್ಧ ದೂರು ಸಲ್ಲಿಸಿದ್ದ ಸೂರಜ್ ರೇವಣ್ಣನ ಆಪ್ತ ಶಿವಕುಮಾರ್ ಹೆಸರಿನ ವ್ಯಕ್ತಿ ತನ್ನ ಧಣಿಯನ್ನು ಪೊಲೀಸರು ಬಂಧಿಸಿದ ಸುದ್ದಿ ಕಿವಿಗೆ ಬೀಳುತ್ತಲೇ ಪರಾರಿಯಾಗಿದ್ದಾನೆ. ಅವನನ್ನು ಹುಡುಕುವ ಕೆಲಸವನ್ನು ಪೊಲೀಸರು ಆರಂಭಿಸಿದ್ದಾರೆ. ಜೂನ್ 16ರಂದು ಹೊಳೆನರಸೀಪುರ ಹೊರವಲಯದಲ್ಲಿರುವ ಗನ್ನಿಕಡದ ತೋಟದ ಮನೆಗೆ ತನ್ನನ್ನು ಕರೆಸಿಕೊಂಡ ಸೂರಜ್ ತನ್ನೊಂದಿಗೆ ಅನೈಸರ್ಗಿಕ ಲೈಂಗಿಕ ಕ್ರೀಡೆ ನಡೆಸಿದರು ಎಂದು ಸಂತ್ರಸ್ತ ಯುವಕ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾನೆ ಮತ್ತು ದೂರಿನ ಮೇರೆಗೆ ಸೂರಜ್ ರನ್ನು ಬಂಧಿಸಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಲಿಂಗ ಕಾಮ ಕೇಸ್: ಸೂರಜ್ ರೇವಣ್ಣ ಪರ ವಕಾಲತ್ತಿಗೆ 10 ಜನ ವಕೀಲರ ತಂಡ ಸಿದ್ಧ