ಸಲಿಂಗ ಕಾಮ ಕೇಸ್: ಸೂರಜ್ ರೇವಣ್ಣ ಪರ ವಕಾಲತ್ತಿಗೆ 10 ಜನ ವಕೀಲರ ತಂಡ ಸಿದ್ಧ
ಅಸಹಜ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಮಾಜಿ ಸಚಿವ ಎಚ್ ಡಿ ರೆವಣ್ಣ ಅವರ ಹಿರಿಯ ಪುತ್ರ, ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಬಂಧನವಾಗಿದೆ. ಈ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿದ್ದು, ಇದೀಗ ಸೂರಜ್ ರೇವಣ್ಣ ಪರ ವಕಾಲತ್ತು ವಹಿಸಲು 10 ಜನರ ವಕೀಲರ ತಂಡ ಸಹ ಸಿದ್ಧವಾಗಿದೆ.
ಹಾಸನ, (ಜೂನ್ 23): ಅಸಹಜ ಲೈಂಗಿಕ ದೌರ್ಜನ್ಯ ಆರೋಪದ ಜೆಡಿಎಸ್ ಪರಿಷತ್ ಸದಸ್ಯ ಸೂರಜ್ ರೇವಣ್ಣ (Suraj Revanna) ಬಂಧನವಾಗಿದ್ದು, ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ವಿಚಾರಣೆ ನಡೆಸಿ ವೈದ್ಯಕೀಯ ಪರೀಕ್ಷೆ ಮಾಡಿಸಿ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಬೆಂಗಳೂರಿಗೆ ಕರೆದೊಯ್ದ ಜನಪ್ರತಿನಿಧಿಗಳ ಕೋರ್ಟ್ ಜಡ್ಜ್ ಮುಂದೆ ಹಾಜರುಪಡಿಸಲಿದ್ದಾರೆ. ಇನ್ನೊಂದೆಡೆ ಸೂರಜ್ ರೇವಣ್ಣ ಪರ ವಕಾಲತ್ತು ವಹಿಸಲು 10 ಜನರ ವಕೀಲರ ತಂಡ ರೆಡಿಯಾಗಿದ್ದು, ಈಗಾಗಲೇ ತನಿಖಾಧಿಕಾರಿಯನ್ನು ಭೇಟಿ ಮಾಡಿ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡಿದೆ.
ಇನ್ನು ಹಾಸನದಲ್ಲಿ ಸೂರಜ್ ರೇವಣ್ಣ ಪರ ವಕೀಲ ಪೂರ್ಣಚಂದ್ರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಪ್ರಕರಣದ ಬಗ್ಗೆ ತನಿಖಾಧಿಕಾರಿ ಭೇಟಿ ಮಾಡಿ ಮಾಹಿತಿ ಪಡೆದಿದ್ದೇವೆ. ನಿನ್ನೆ(ಜೂನ್ 23) ಠಾಣೆಗೆ ಬಂದಾಗ ಸೂರಜ್ರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕಾನೂನಿಗೆ ಗೌರವ ಕೊಟ್ಟು ಪೊಲೀಸ್ ಠಾಣೆಗೆ ಅವರೇ ಬಂದಿದ್ದಾರೆ. ಬೆಂಗಳೂರಿಗೆ ಕರೆದೊಯ್ದ ಜನಪ್ರತಿನಿಧಿಗಳ ಕೋರ್ಟ್ ಜಡ್ಜ್ ಮುಂದೆ ಹಾಜರುಪಡಿಸಲಿದ್ದಾರೆ. ಇಲ್ಲಿನ ಜಡ್ಜ್ ಮುಂದೆ ಹಾಜರುಪಡಿಸಿದ್ರೆ ವಕಾಲತ್ತು ವಹಿಸುತ್ತಿದ್ದೆವು. ಎಲ್ಲರು ಚರ್ಚಿಸಿ ಮುಂದಿನ ಕಾನೂನು ಹೋರಾಟ ಮಾಡುತ್ತೇವೆ ಎಂದರು.
ಇದನ್ನೂ ಓದಿ: ರೇವಣ್ಣ ಕುಟುಂಬಕ್ಕೆ ಮತ್ತೊಂದು ಶಾಕ್, ಸೂರಜ್ ರೇವಣ್ಣ ಕೇಸ್ ಸಿಐಡಿಗೆ ವರ್ಗಾವಣೆ
ಕಸ್ಟಡಿಯಲ್ಲಿ ಇರುವುದರಿಂದ ಮಾತನಾಡಲು ಅವಕಾಶ ಸಿಕ್ಕಿಲ್ಲ. ಪ್ರಕರಣ ತನಿಖಾ ಹಂತದಲ್ಲಿ ಇದೆ. ಸತ್ಯಾಸತ್ಯತೆ ಹೊರಬರುತ್ತೆ. ದೂರುದಾರ ಶಿವಕುಮಾರ್ ವಿಚಾರ ಗೊತ್ತಿಲ್ಲ ಎಂದು ಹೇಳಿದರು.
ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಸದ್ಯ ಸೂರಜ್ ರೇವಣ್ಣ ಮೊಬೈಲ್ ಜಪ್ತಿ ಮಾಡಿ ಮೆಸೇಜ್, ವಾಟ್ಸಾಪ್ ಕರೆ, ಫೋನ್ ಕರೆ ಬಗ್ಗೆ ಪರಿಶೀಲನೆ ಮಾಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಮತ್ತೊಂದೆಡೆ ಪೊಲೀಸರು ಸೂರಜ್ ರೇವಣ್ಣ ಅವರನ್ನು ವಯದ್ಯಕೀಯ ಪರೀಕ್ಷೆ ಮಾಡಿಸಿ ಬಳಿಕ ಜನಪ್ರತಿನಿಧಿಗಳ ಕೋರ್ಟ್ ಜಡ್ಜ್ ಮುಂದೆ ಹಾಜರುಪಡಿಸಲಿದ್ದಾರೆ. ಇಂದು ಭಾನುವಾರವಾಗಿದ್ದರಿಂದ ಕೋರ್ಟ್ಗೆ ರಜೆ ಇದೆ. ಹೀಗಾಗಿ ನ್ಯಾಯಾಧೀಶರ ಮನೆಗೆ ಕರೆದೊಯ್ಯಲಿದ್ದಾರೆ.
ಇನ್ನು ಈ ಪ್ರಕರಣದ ತನಿಖೆ ಅಗ್ಯತ್ಯವಾಗಿದ್ದರಿಂದ ಸೂರಜ್ ರೇವಣ್ಣ ಅವರನ್ನು ತಮ್ಮ ಕಸ್ಟಡಿಗೆ ನೀಡುವಂತೆ ಸಿಐಡಿ ಅಧಿಕಾರಿಗಳು ಜಡ್ಜ್ ಮುಂದೆ ಮನವಿ ಮಾಡಲಿದ್ದಾರೆ. ಆದ್ರೆ, ಜಡ್ಜ್, ಸೂರಜ್ ಅವರನ್ನು ಕಸ್ಟಡಿಗೆ ನೀಡುತ್ತಾರೋ ಅಥವಾ ನ್ಯಾಯಾಂಗ ಬಂಧನಕ್ಕೆ ನೀಡುತ್ತಾರೋ ಎನ್ನುವುದನ್ನು ಕಾದುನೋಡಬೇಕಿದೆ.
ಅದ್ರೆ, ಇಂತಹ ಪ್ರಕರಣಗಳಲ್ಲಿ ತನಿಖೆ ಅಗತ್ಯವಾಗಿದ್ದರಿಂದ ಬಹುತೇಕ ಆರೋಪಿಗಳನ್ನು ತನಿಖಾಧಿಕಾರಿಗಳ ಕಸ್ಟಡಿಗೆ ನೀಡುವುದು ಹೆಚ್ಚು. ಹೀಗಾಗಿ ಸೂರಜ್ ರೇವಣ್ಣ ಅವರನ್ನು ಸಹ ಸಿಐಡಿ ಕಸ್ಟಡಿಗೆ ನೀಡುವ ಸಾಧ್ಯತೆಗಳು ಹೆಚ್ಚಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:44 pm, Sun, 23 June 24