ಅಥಣಿ ಶಾಸಕ ಲಕ್ಷ್ಮಣ ಸವದಿಯಿಂದ ಮೋಸವಾಯಿತು ಅಂತ ಸತೀಶ್ ಜಾರಕಿಹೊಳಿ ಹೇಳೋದ್ಯಾಕೆ?

ಅರುಣ್​ ಕುಮಾರ್​ ಬೆಳ್ಳಿ

Updated on: Jun 07, 2024 | 12:38 PM

ಅಥಣಿ ವಿಧಾನಸಭಾ ಕ್ಷೇತ್ರದಿಂದ ಪ್ರಿಯಾಂಕಾಗೆ ಲೀಡ್ ಸಿಗದಿರುವುದು ಸತೀಶ್ ರನ್ನು ಕೆರಳಿಸಿದೆ. ಜಾತೆಯಲ್ಲಿ ರಥವನ್ನು ಎಲ್ಲರೂ ಅದನ್ನು ಮುಂದಕ್ಕೆ ಎಳೆದರೆ ಕೆಲವರು ಹಿಂದಕ್ಕೆಳಿಯುತ್ತಿರುತ್ತಾರೆ ಎಂದು ಸಚಿವ ಹೇಳಿದರು. ನಿನ್ನೆ ಕುಡಚಿ ಶಾಸಕ ಮಹೇಂದ್ರ ಕೆ ತಮ್ಮಣ್ಣನವರ್ ಸಹ ಸತೀಶ್ ಜಾರಕಿಹೊಳಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

ಬೆಳಗಾವಿ: ಚಿಕ್ಕೋಡಿಯಲ್ಲಿ ಲೋಕಸಭಾ ಚುನಾವಣೆಗೆ ಪ್ರಚಾರ ಆರಂಭವಾಗುವ ಮೊದಲೇ ಸತೀಶ್ ಜಾರಕಿಹೊಳಿ (Satish Jarkiholi) ಮತ್ತು ಅಥಣಿ ಶಾಸಕ ಲಕ್ಷ್ಮಣ ಸವದಿ (Laxman Savadi) ನಡುವೆ ಎಲ್ಲವೂ ಸರಿಯಲ್ಲ ಅನ್ನೋದು ಆ ಭಾಗದ ಜನಕ್ಕೆ ಗೊತ್ತಾಗಿತ್ತು. ಚಿಕ್ಕೋಡಿ ಕಾಂಗ್ರೆಸ್ ಕಚೇರಿ (Chikkodi Congress office) ಮುಂದೆ ಮೆತ್ತಿದ್ದ ಬೃಹತ್ ಪೋಸ್ಟರ್ ನಲ್ಲಿ ಸವದಿ ಅವರ ಫೋಟೋ ಇರಲಿಲ್ಲ. ಅದಕ್ಕೆ ಸಚಿವ ಮತ್ತು ಶಾಸಕ ತಮಗೆ ತಿಳಿದ ಸಮಜಾಯಿಷಿಗಳನ್ನು ನೀಡಿದರು. ಚುನಾವಣೆ ಫಲಿತಾಂಶದ ಬಳಿಕ ಅವರ ನಡುವಿನ ಅಸಮಾಧಾನ ಉಲ್ಬಣಗೊಂಡಿದೆ ಮತ್ತು ಸತೀಶ್ ಅದನ್ನು ಇಂದು ಕಾರ್ಯಕರ್ತರೊಂದಿಗೆ ಮಾತಾಡುವಾಗ ಬಹಿರಂಗಗೊಳಿಸಿದರು. ಬಿಜೆಪಿಯಿಂದ ಕಾಂಗ್ರೆಸ್ ಗೆ ಬಂದ ನಾಯಕರನ್ನು ನಂಬಿಕೊಂಡಿದ್ದರೆ ಪ್ರಿಯಾಂಕಾ ಜಾರಕಿಹೊಳಿ ಗೆಲ್ಲೋದು ಕಷ್ಟವಾಗುತಿತ್ತು, ವಲಸೆ ಕಾಂಗ್ರೆಸ್ಸಿಗರು ಮಾಡಲಿರುವ ಮೋಸದ ಬಗ್ಗೆ ಸುಳಿವು ಸಿಕ್ಕಿದ್ದರಿಂದ ಮೂಲ ಕಾಂಗ್ರೆಸ್ಸಿಗರಿಗೆ ಮೊದಲೇ ಎಚ್ಚರಿಕೆ ನೀಡಿದ್ದೆ ಎಂದು ಸತೀಶ್ ಹೇಳುತ್ತಾರೆ. ಅಥಣಿ ವಿಧಾನಸಭಾ ಕ್ಷೇತ್ರದಿಂದ ಪ್ರಿಯಾಂಕಾಗೆ ಲೀಡ್ ಸಿಗದಿರುವುದು ಸತೀಶ್ ರನ್ನು ಕೆರಳಿಸಿದೆ. ಜಾತೆಯಲ್ಲಿ ರಥವನ್ನು ಎಲ್ಲರೂ ಅದನ್ನು ಮುಂದಕ್ಕೆ ಎಳೆದರೆ ಕೆಲವರು ಹಿಂದಕ್ಕೆಳಿಯುತ್ತಿರುತ್ತಾರೆ ಎಂದು ಸಚಿವ ಹೇಳಿದರು. ನಿನ್ನೆ ಕುಡಚಿ ಶಾಸಕ ಮಹೇಂದ್ರ ಕೆ ತಮ್ಮಣ್ಣನವರ್ ಸಹ ಸತೀಶ್ ಜಾರಕಿಹೊಳಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಕಾಂಗ್ರೆಸ್​​ನಲ್ಲಿ ಮತ್ತೆ ಡಿನ್ನರ್ ಪಾಲಿಟಿಕ್ಸ್: ಸತೀಶ್ ಜಾರಕಿಹೊಳಿ ನಿವಾಸದಲ್ಲಿ ದಲಿತ ನಾಯಕರ ಸಭೆ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.