ಲೋಕಸಭಾ ಚುನಾವಣೆಯಲ್ಲಿ ಕಳಾಹೀನ ಪ್ರದರ್ಶನ, ಆತ್ಮಾವಲೋಕನ ಶುರುಮಾಡಿದ ಡಿಕೆ ಶಿವಕುಮಾರ್

|

Updated on: Jun 05, 2024 | 4:58 PM

ಡಿಕೆ ಸುರೇಶ್, ಸೌಮ್ಯ ರೆಡ್ಡಿ, ಪ್ರೊಫೆಸರ್ ರಾಜೀವ್ ಗೌಡ ಮೊದಲಾದ ಪ್ರಮುಖರು ಸೋತಿದ್ದು ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಯಿತು. ದಕ್ಷಿಣ ಕರ್ನಾಟಕದಲ್ಲಿ ಪಕ್ಷದ ಪ್ರದರ್ಶನ ಕಳಾಹೀನ ಅಂತ ಹೇಳಿದರೂ ಅದು ಅಂಡರ್ ಸ್ಟೇಟ್ಮೆಂಟ್. ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರು ಮಾತಾಡಿಕೊಳ್ಳಲಾರಂಭಿಸಿದ್ದಾರೆ.

ಬೆಂಗಳೂರು: ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡಲು ಕಾಂಗ್ರೆಸ್ ಪಕ್ಷ ವಿಫಲಗೊಂಡ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಆತ್ಮಾವಲೋಕನ ಶುರುಮಾಡಿದ್ದಾರೆ. ತಮ್ಮ ನಿವಾಸದಲ್ಲಿ ಅವರು ಕೆಲ ಕಾಂಗ್ರೆಸ್ ನಾಯಕರ ಜೊತೆ ಸಮಾಲೋಚನೆ ನಡೆಸಿದರು. ಅವರೊಂದಿಗೆ ಸಚಿವರಾದ ಕೆಹೆಚ್ ಮುನಿಯಪ್ಪ (KH Muniyappa), ಎನ್ ಚಲುವರಾಯಸ್ವಾಮಿ (N Cheluvarayaswamy), ಡಿ ಸುಧಾಕರ್ (D Sudhakar), ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಹೆಚ್ ಡಿ ಕುಮಾರಸ್ವಾಮಿ ಎದುರು ಹೀನಾಯವಾಗಿ ಸೋತ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಮತ್ತು ಲೋಕಸಭಾ ಚುನಾವಣೆಯಲ್ಲಿ ಸೋತ ಕೆಲ ಮುಖಂಡರು ಇದ್ದರು. ಕಳೆದ ಬಾರಿ ಕೇವಲ ಒಂದು ಸೀಟು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಟ್ಯಾಲಿಯನ್ನು 9ಕ್ಕೆ ಹೆಚ್ಚಿಸಿಕೊಂಡಿತಾದರೂ 16-20 ಸ್ಥಾನ ಗೆಲ್ಲುವ ಅದರ ನಿರೀಕ್ಷೆ ಹುಸಿಹೋಯಿತು. ಡಿಕೆ ಸುರೇಶ್, ಸೌಮ್ಯ ರೆಡ್ಡಿ, ಪ್ರೊಫೆಸರ್ ರಾಜೀವ್ ಗೌಡ ಮೊದಲಾದ ಪ್ರಮುಖರು ಸೋತಿದ್ದು ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಯಿತು. ದಕ್ಷಿಣ ಕರ್ನಾಟಕದಲ್ಲಿ ಪಕ್ಷದ ಪ್ರದರ್ಶನ ಕಳಾಹೀನ ಅಂತ ಹೇಳಿದರೂ ಅದು ಅಂಡರ್ ಸ್ಟೇಟ್ಮೆಂಟ್. ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರು ಮಾತಾಡಿಕೊಳ್ಳಲಾರಂಭಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ನಾವು ಸುಮ್ಮನಿದ್ದರೂ ಬಿಜೆಪಿ ಕೆಣಕುತ್ತಿದೆ, ಇನ್ನು ಮುಂದೆ ನಾವೇನು ಅಂತ ತೋರಿಸ್ತೇವೆ: ಡಿಕೆ ಶಿವಕುಮಾರ್

Follow us on