ನಾವು ಸುಮ್ಮನಿದ್ದರೂ ಬಿಜೆಪಿ ಕೆಣಕುತ್ತಿದೆ, ಇನ್ನು ಮುಂದೆ ನಾವೇನು ಅಂತ ತೋರಿಸ್ತೇವೆ: ಡಿಕೆ ಶಿವಕುಮಾರ್
ಕಾಂಗ್ರೆಸ್ ಯಾವುದನ್ನೂ ಆಧಾರರಹಿತವಾಗಿ ಹೇಳಿಲ್ಲ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದನ್ನು ಮತ್ತು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಯವ್ಯಾವ ಹುದ್ದೆಗೆ ಎಷ್ಟೆಷ್ಟು ಲಂಚ ನೀಡಬೇಕಿತ್ತು ಅಂತ ಪತ್ರಿಕೆಗಳಲ್ಲಿ ವರದಿಯಾದ ಅಂಶಗಳ ಆಧಾರದಲ್ಲ್ಲೇ ಕಾಂಗ್ರೆಸ್ ಆಗಿನ ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್ ಕಮೀಶನ್ ಸರ್ಕಾರ ಅಂತ ಹೇಳಿದ್ದು ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರು: ಬಿಜೆಪಿ ಹೂಡಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ವಿಚಾರಣೆಗೆ ಹಾಜರಾದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದ ಡಿಕೆ ಶಿವಕುಮಾರ್ (DK Shivakumar), ಬಿಜೆಪಿ ವಿರುದ್ಧ ಬೆಂಕಿಯುಗುಳಿದರು. ಇವತ್ತಿನ ವಿಚಾರಣೆಯಲ್ಲಿ ರಾಹುಲ್ ಗಾಂಧಿಯವರು (Rahul Gandhi) ಸಹ ಹಾಜರಿರಬೇಕಿತ್ತು, ದೆಹಲಿಯಲ್ಲಿ ಇವತ್ತೇ ಇಂಡಿಯ ಮೈತ್ರಿಕೂಟದ ಸಭೆ ಇರುವ ಕಾರಣ ಬರಲಾಗಿಲ್ಲ, ಅವರು ಕಾನೂನನ್ನು ಗೌರವಿಸುವ ವ್ಯಕ್ತಿ, ಮುಂದಿನ ವಿಚಾರಣೆಗೆ ಖಂಡಿತ ಹಾಜರಾಗುತ್ತಾರೆ ಎಂದು ಶಿವಕುಮಾರ್ ಹೇಳಿದರು. ನಂತರ ಬಿಜೆಪಿ ಮೇಲೆ ನೇರ ಪ್ರಹಾರ ಮಾಡಿದ ಅವರು ನಾವು ಸುಮ್ಮನಿದ್ದರೂ ಬಿಜಪಿ ನಾಯಕರು ಕೆಣಕುವ ಪ್ರಯತ್ನ ಮಾಡುತ್ತಿದ್ದಾರೆ ಅದರೆ ಇನ್ನು ಮುಂದೆ ನಾವು ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡುವ ಧಾಟಿಯಲ್ಲಿ ಹೇಳಿದರು. ಕಾಂಗ್ರೆಸ್ ಯಾವುದನ್ನೂ ಆಧಾರರಹಿತವಾಗಿ ಹೇಳಿಲ್ಲ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿದನ್ನು ಮತ್ತು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಯವ್ಯಾವ ಹುದ್ದೆಗೆ ಎಷ್ಟೆಷ್ಟು ಲಂಚ ನೀಡಬೇಕಿತ್ತು ಅಂತ ಪತ್ರಿಕೆಗಳಲ್ಲಿ ವರದಿಯಾದ ಅಂಶಗಳ ಆಧಾರದಲ್ಲ್ಲೇ ಕಾಂಗ್ರೆಸ್ ಆಗಿನ ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್ ಕಮೀಶನ್ ಸರ್ಕಾರ ಅಂತ ಹೇಳಿದ್ದು ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಎಸ್ಐಟಿ ನೋಡಿಕೊಳ್ಳುತ್ತದೆ, ನಾನ್ಯಾಕೆ ತಲೆಕೆಡಿಸಿಕೊಳ್ಳಲಿ? ಡಿಕೆ ಶಿವಕುಮಾರ್