ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಎಸ್ಐಟಿ ನೋಡಿಕೊಳ್ಳುತ್ತದೆ, ನಾನ್ಯಾಕೆ ತಲೆಕೆಡಿಸಿಕೊಳ್ಳಲಿ? ಡಿಕೆ ಶಿವಕುಮಾರ್

ರಾಜ್ಯದಲ್ಲಿ ಪ್ರಸ್ತುತ ಪೊಲೀಸ್ ವ್ಯವಸ್ಥೆ ಬಗ್ಗೆ ಮಾಡಿರುವ ಕಾಮೆಂಟ್ ಗೆ ಉತ್ತರ ನೀಡಿದ ಶಿವಕುಮಾರ್, ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವುದೋ ಒಂದು ಸಮಾರಂಭದ ಹಿನ್ನೆಲೆಯಲ್ಲಿ ಉಡುಪಿ ಮತ್ತು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಬಿಜೆಪಿ ವಸ್ತ್ರಗಳನ್ನು ತೊಡಿಸಿದ್ದು ಅರ್ ಅಶೋಕ ಅವರಿಗೆ ಮರೆತಂತಿದೆ ಎಂದು ಕುಹುಕವಾಡಿದರು.

ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಎಸ್ಐಟಿ ನೋಡಿಕೊಳ್ಳುತ್ತದೆ, ನಾನ್ಯಾಕೆ ತಲೆಕೆಡಿಸಿಕೊಳ್ಳಲಿ? ಡಿಕೆ ಶಿವಕುಮಾರ್
|

Updated on: May 31, 2024 | 2:53 PM

ರಾಮನಗರ: ಇಂದು ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ಶುಕ್ರವಾರ ಬೆಳಗಿನ ಜಾವ ಎಸ್ಐಟಿಯಿಂದ (SIT) ಬಂಧನಕ್ಕೊಳಗಾದ ಪ್ರಜ್ವಲ್ ರೇವಣ್ಣ (Prajwal Revanna) ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದರು. ಅವರು ನೀಡಿದ ಪ್ರತಿಕ್ರಿಯೆ ನಿರ್ವಿಕಾರ ಭಾವದಿಂದ ಕೂಡಿತ್ತು. ಪ್ರಜ್ವಲ್ ಬಂಧನದ ಸುದ್ದಿ ಇಂದು ಬೆಳಗ್ಗೆ ಪೇಪರಲ್ಲಿ ಓದಿದೆ. ಪ್ರಕರಣದ ತನಿಖೆ ನಡೆಸಲು ಎಸ್ಐಟಿ ಇದೆ, ಅದು ನೋಡಿಕೊಳ್ಳುತ್ತದೆ, ನಾನ್ಯಾಕೆ ತಲೆಕೆಡಿಸಿಕೊಳ್ಳಲಿ ಎಂದು ಅವರು ಹೇಳಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಅವರ ಸಾವಿನ ಬಗ್ಗೆ ಈಶ್ವರಪ್ಪ ಅವರು; ತಾನು ಸಚಿವನಾಗಿದ್ದಾಗ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಸುದ್ದಿ ಹೊರಬೀಳುತ್ತಿದಂತೆಯೇ ರಾಜೀನಾಮೆ ಸಲ್ಲಸಿದ್ದೆ, ಆದರೆ ಬಿ ನಾಗೇಂದ್ರ ಇನ್ನೂ ಯಾಕೆ ರಾಜೀನಾಮೆನ ಸಲ್ಲಿಸಿಲ್ಲ ಎಂದು ಕೇಳಿದ್ದಾರೆ ಅಂತ ಹೇಳಿದ್ದಕ್ಕೆ ಶಿವಕುಮಾರ್, ತಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಸ್ತವಾಂಶವನ್ನು ತಿಳಿಯುವ ಪ್ರಯತ್ನ ಮಾಡುತ್ತಿದ್ದೇವೆ, ಅದು ಮುಗಿದ ಬಳಿಕ ಒಂದು ನಿರ್ಧಾರ ತೆಗೆದುಕೊಳ್ಳುತ್ತೇವೆ, ಸರ್ಕಾರ ಯಾರನ್ನೂ ರಕ್ಷಣೆ ಮಾಡುತ್ತಿಲ್ಲ ಎಂದು ಶಿವಕುಮಾರ್ ಹೇಳಿದರು. ರಾಜ್ಯದಲ್ಲಿ ಪ್ರಸ್ತುತ ಪೊಲೀಸ್ ವ್ಯವಸ್ಥೆ ಬಗ್ಗೆ ಮಾಡಿರುವ ಕಾಮೆಂಟ್ ಗೆ ಉತ್ತರ ನೀಡಿದ ಶಿವಕುಮಾರ್, ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವುದೋ ಒಂದು ಸಮಾರಂಭದ ಹಿನ್ನೆಲೆಯಲ್ಲಿ ಉಡುಪಿ ಮತ್ತು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಬಿಜೆಪಿ ವಸ್ತ್ರಗಳನ್ನು ತೊಡಿಸಿದ್ದು ಅರ್ ಅಶೋಕ ಅವರಿಗೆ ಮರೆತಂತಿದೆ ಎಂದು ಕುಹುಕವಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್​ನಲ್ಲಿ ಸಿಎಂ, ಸಚಿವರ ಮಹತ್ವದ ಮಾತುಕತೆ; ಕೆಲ ಸಚಿವರ ಕುರ್ಚಿಗೆ ಕಂಟಕ ಸಾಧ್ಯತೆ

Follow us
ಜೈಲಿನಲ್ಲಿ ದರ್ಶನ್​ ಭೇಟಿಯ ಬಳಿಕ ರಕ್ಷಿತಾ-ಪ್ರೇಮ್ ಹೇಳಿದ್ದಿಷ್ಟು?
ಜೈಲಿನಲ್ಲಿ ದರ್ಶನ್​ ಭೇಟಿಯ ಬಳಿಕ ರಕ್ಷಿತಾ-ಪ್ರೇಮ್ ಹೇಳಿದ್ದಿಷ್ಟು?
ಪವಿತ್ರಾ ಗೌಡ ಭೇಟಿಯಾಗಲು ಜೈಲಿಗೆ ಬಂದ ವಕೀಲ ಮಾಧ್ಯಮಕ್ಕೆ ಉಪನ್ಯಾಸ ನೀಡಿದರು!
ಪವಿತ್ರಾ ಗೌಡ ಭೇಟಿಯಾಗಲು ಜೈಲಿಗೆ ಬಂದ ವಕೀಲ ಮಾಧ್ಯಮಕ್ಕೆ ಉಪನ್ಯಾಸ ನೀಡಿದರು!
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ಅಮರನಾಥ ಗುಹೆಗೆ ಮೊದಲ ಬ್ಯಾಚ್​ನ 1100​​ ಭಕ್ತರಿಂದ ಯಾತ್ರೆ ಆರಂಭ
ಅಮರನಾಥ ಗುಹೆಗೆ ಮೊದಲ ಬ್ಯಾಚ್​ನ 1100​​ ಭಕ್ತರಿಂದ ಯಾತ್ರೆ ಆರಂಭ
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು
ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆದಿವೆ ಎಂದು ಫೋನ್ ಬಿಸಾಡಿದ ಚನ್ನಬಸಪ್ಪ
ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆದಿವೆ ಎಂದು ಫೋನ್ ಬಿಸಾಡಿದ ಚನ್ನಬಸಪ್ಪ