ಪಾಂಡವಪುರ ಗರ್ಭಪಾತ ಪ್ರಕರಣ: ತೀವ್ರ ರಕ್ತಸ್ರಾವ, ಹೊಟ್ಟೆನೋವಿನಿಂದ ಬಳಲುತ್ತಿರುವ ಮಹಿಳೆಯರು

ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಕಳೆದ ವರ್ಷ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಮಂಡ್ಯದಲ್ಲಿ ಆಲೆಮನೆಯಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಕರಾಳ ದಂಧೆ ಬಯಲಾಗಿತ್ತು. ಕಳೆದ ತಿಂಗಳು ಪಾಂಡವಪುರದಲ್ಲಿ ಸರ್ಕಾರಿ ಕ್ವಾಟರ್ಸ್​​ನಲ್ಲಿ ಗರ್ಭಪಾತ ಮಾಡುತ್ತಿದ್ದ ಪ್ರಕರಣ ಬಯಲಾಗಿದ್ದು, ನರ್ಸ್​ ಶೃತಿ ಎಂಬುವರನ್ನು ಬಂಧಿಸಲಾಗಿದೆ. ಇದೀಗ ಇವರಿಂದ ಗರ್ಭಪಾತ ಮಾಡಿಸಿಕೊಂಡ ಮಹಿಳೆಯರು ಅನಾರೋಗ್ಯಕ್ಕೆ ತುತ್ತಾಗುತ್ತುದ್ದಾರೆ.

ಪಾಂಡವಪುರ ಗರ್ಭಪಾತ ಪ್ರಕರಣ: ತೀವ್ರ ರಕ್ತಸ್ರಾವ, ಹೊಟ್ಟೆನೋವಿನಿಂದ ಬಳಲುತ್ತಿರುವ ಮಹಿಳೆಯರು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on: Jun 01, 2024 | 2:50 PM

ಮಂಡ್ಯ, ಜೂ. 01: ಪಾಂಡವಪುರ ಹೆಣ್ಣು ಭ್ರೂಣ ಹತ್ಯೆ (Female Feticide) ಪ್ರಕರಣಕ್ಕೆ ಸಂಬಂಧಿಸಿದಂತೆ ಕರಾಳ ದಂಧೆಯ ಒಂದೊಂದೆ ಮುಖ ಬಗೆದಷ್ಟು ಬಯಲಾಗುತ್ತಿದೆ. ಅಕ್ರಮ ಗರ್ಭಪಾತದ ದಂಧೆ ಮಂಡ್ಯದ (Mandya) ಹಳ್ಳಿ ಹಳ್ಳಿಯಲ್ಲೂ ಬೇರೂರಿದೆ. ಅಕ್ರಮವಾಗಿ ಗರ್ಭಪಾತ ಮಾಡಿಸಿಕೊಂಡ ಮಹಿಳೆಯರು ತೀವ್ರ ರಕ್ತಸ್ರಾವವಾಗಿ ವಿಪರೀತ ಹೊಟ್ಟೆನೋವಿನಿಂದ ಬಳಲುತ್ತಿದ್ದಾರೆ. ಇದೀಗ, ಅಕ್ರಮವಾಗಿ ಗರ್ಭಪಾತ ಮಾಡಿಸಿಕೊಂಡ ಮಹಿಳೆ ತೀವ್ರ ರಕ್ತಸ್ರಾವದಿಂದ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ಅಕ್ರಮ ಗರ್ಭಪಾತ ದಂಧೆಯ ಬಗ್ಗೆ ಎಳೆಎಳೆಯಾಗಿ ವೈದ್ಯರ ಮುಂದೆ ಹೇಳಿದ್ದಾರೆ.

ತೀವ್ರ ರಕ್ತಸ್ರಾವದಿಂದ ಅಸ್ವಸ್ಥರಾಗಿ ಶ್ರೀರಂಗಪಟ್ಟಣ ಮೂಲದ ಮಾಲಾಶ್ರೀ ಎಂಬುವುರು ಪಾಂಡವಪುರ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರ ಪರಿಶೀಲನೆ ವೇಳೆ ದಂಧೆಯ ರಾಕ್ಷಸ ಮುಖ ಅನಾವರಣಗೊಂಡಿದೆ. ಹಣದಾಸೆಗೆ ದಂಧೆಕೋರು ಓಮಿಮಿ ವ್ಯಾನ್‌ನಲ್ಲೇ ಸ್ಕ್ಯಾನಿಂಗ್ ಮಾಡಿ, ಒಂಟಿ ಮನೆಯಲ್ಲಿ ಗರ್ಭಪಾತ ಮಾಡುತ್ತಿದ್ದರು.

ಇದನ್ನೂ ಓದಿ: ಮಂಡ್ಯ: 25-30 ಸಾವಿರಕ್ಕೆ ಗರ್ಭಪಾತ ಮಾಡುತಿದ್ವಿ, ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಬಂಧಿತ ನರ್ಸ್

ಕಳೆದ ಏ.4 ರಂದು ಪಾಂಡವಪುರ ತಾಲೂಕಿನ ಹೊಸಕೋಟೆ ಗ್ರಾಮದ ಒಂಟಿ ಮನೆಯಲ್ಲಿ ಮಾಲಾಶ್ರೀ ಅವರಿಗೆ ಬಂಧಿತ ನರ್ಸ್ ಶೃತಿ ಅಕ್ರಮವಾಗಿ ಗರ್ಭಪಾತ ಮಾಡಿದ್ದರು. ಗರ್ಭಪಾತದ ಮಾತ್ರೆ ನುಂಗಿಸಿ ನಂತರ ಹೆಣ್ಣುಭ್ರೂಣ ಹೊರ ತೆಗೆದಿದ್ದರು. ಆರೋಪಿಗಳು ಗರ್ಭಪಾತ ಮಾಡಲು 32 ಸಾವಿರ ರೂ. ಪಡೆದಿದ್ದರು. ಸ್ಕ್ಯಾನಿಂಗ್‌ಗೆ 13ಸಾವಿರ ಮತ್ತು ಗರ್ಭಪಾತ ಮಾಡಲು 19 ಸಾವಿರ ವಸೂಲಿ ಮಡಿದ್ದಾರೆ.

ಆದರೆ ಸರಿಯಾಗಿ ಗರ್ಭಪಾತವಾಗದ ಹಿನ್ನೆಲೆಯಲ್ಲಿ ಮಾಲಾಶ್ರೀ ಅವರಿಗೆ ತೀವ್ರ ರಕ್ತಸ್ರಾವವಾಗಿ ಹೊಟ್ಟೆನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗರ್ಭಪಾತ ಮಾಡಿದ್ದ ನರ್ಸ್​ ಶೃತಿಯನ್ನು ಪಾಂಡವಪುರ ಹೆಲ್ತ್ ಕ್ವಾರ್ಟರ್ಸ್ ಭ್ರೂಣ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಇನ್ನು ಸ್ಕ್ಯಾನಿಂಗ್ ಮಾಡಿದ್ದ ಅಭಿ, ಮಾಲಾಶ್ರೀ, ಪತಿ ರವಿ ಕುಮಾರ್ ಹಾಗೂ ಆಶಾ, ಶಿವರಾಜ್, ಚೇತನ್ ವಿರುದ್ಧ ದೂರು ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ