ಕುಮಾರಸ್ವಾಮಿಯಂತೆ ಲೋಕಸಭಾ ಸದಸ್ಯೆಯಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಶೋಭಾ ಕರಂದ್ಲಾಜೆ!
ಸಂಸತ್ತಿನ ಅಧಿಕಾರಿಯೊಬ್ಬರು ಕುಮಾರಿ ಶೋಭಾ ಕರಂದ್ಲಾಜೆ ಅಂತ ಹೆಸರು ಕರೆದ ಬಳಿಕ ಹಿಂಬದಿಯ ಸೀಟುಗಳ ಪೈಕಿ ಒಂದರಲ್ಲಿ ಆಸೀನರಾಗಿದ್ದ ಶೋಭಾ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಎಡಭಾಗದಿಂದ ನಡೆದು ಬಂದು ಪೋಡಿಯಂ ತಲುಪಿದರು.
ದೆಹಲಿ: ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರಂತೆಯೇ ಬೆಂಗಳೂರು ಉತ್ತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ಶೋಭಾ ಕರಂದ್ಲಾಜೆಯವರು (Shobha Karandlaje) ಕನ್ನಡದಲ್ಲಿ ಲೋಕಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಂಸತ್ತಿನ ಅಧಿಕಾರಿಯೊಬ್ಬರು ಕುಮಾರಿ ಶೋಭಾ ಕರಂದ್ಲಾಜೆ ಅಂತ ಹೆಸರು ಕರೆದ ಬಳಿಕ ಹಿಂಬದಿಯ ಸೀಟುಗಳ ಪೈಕಿ ಒಂದರಲ್ಲಿ ಆಸೀನರಾಗಿದ್ದ ಶೋಭಾ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ಎಡಭಾಗದಿಂದ ನಡೆದು ಬಂದು ಪೋಡಿಯಂ ತಲುಪಿದರು. ಶೋಭಾ ಕರಂದ್ಲಾಜೆ ಎಂಬ ನಾನು ಎಂದು ಆರಂಭಿಸುವ ಅವರು, ಲೋಕಸಭಾ ಸದಸ್ಯಳಾಗಿ ಚುನಾಯಿತಳಾಗಿ, ಕಾನೂನು ಮೂಲಕ ಸ್ಥಾಪಿಸಲ್ಪಟ್ಟಿರುವ ಭಾರತದ ಸಂವಿಧಾನಕ್ಕೆ ಸತ್ಯ, ಶ್ರದ್ಧೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆಂದು, ಭಾರತದ ಸಾರ್ವಭೌಮತೆ ಮತ್ತು ಅಖಂಡತೆಯನ್ನು ಎತ್ತಿಹಿಡಿಯುವೆನೆಂದು ಮತ್ತು ಕೈಗೊಳ್ಳಲಿರುವ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುವೆನೆಂದು ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ ಎಂದರು. ಕುಮಾರಸ್ವಾಮಿಯವರು ಬಿಳಿ ಅಂಗಿ ಮತ್ತು ಬಿಳಿ ಪಂಚೆ ಧರಿಸಿದ್ದರೆ ಶೋಭಾ ಅವರು ಶ್ವೇತವರ್ಣದ ಸೀರೆಯನ್ನುಟ್ಟಿದ್ದರು. ಪ್ರಧಾನಿ ಮೋದಿ ಸಂಪುಟದಲ್ಲಿ ಅವರು ಸಣ್ಣ ಮತ್ತು ಮಧ್ಯಮ ಉದ್ಯಮ, ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವೆ ಆಗಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಶೋಭಾ ಕರಂದ್ಲಾಜೆ ನನ್ನನ್ನು ಸಭೆಗಳಿಗೆ ಕರೆಯದೆ ಅವಮಾನಿಸುತ್ತಿದ್ದಾರೆ: ಎಸ್ ಟಿ ಸೋಮಶೇಖರ್, ಬಿಜೆಪಿ ಶಾಸಕ