ಮುಂದುವರಿದ ಸತೀಶ್ ಜಾರಕಿಹೊಳಿ-ಲಕ್ಷ್ಮಣ ಸವದಿ ಕೋಳಿ ಜಗಳ, ಸಚಿವನಿಂದ ಮತ್ತೊಮ್ಮೆ ತರಾಟೆ !

Updated on: Jun 07, 2024 | 7:36 PM

ನಾನು ಹೇಳಿದ್ದು ಆರೋಪ ಎನಿಸಿದರೆ ಅವರು ತಮ್ಮ ಪರವಾಗಿ ಸ್ಪಷ್ಟೀಕರಣ ನೀಡಲಿ, ಅವರನ್ನು ಯಾರೂ ತಡೆದಿಲ್ಲ. ಅವರ ಕ್ಷೇತ್ರದಲ್ಲಿ ಪ್ರಿಯಾಂಕಾಗೆ ಕಡಿಮೆ ವೋಟು ಬಿದ್ದಿರೋದು ಸತ್ಯ ಎಂದು ಜಾರಕಿಹೊಳಿ ಹೇಳಿದರು. ವಿಲನ್ ಮಾಡುತ್ತಿದ್ದೇನೆ ಅಂತ ಹೇಳಲು ಅವರು ಯಾರು? ಜನ ನಮ್ಮೊಂದಿಗಿದೆ, ಸರ್ಕಾರ ನಮ್ಮೊಂದಿಗಿದೆ ಎಂದು ಕೂಗಾಡುವ ಧ್ವನಿಯಲ್ಲಿ ಸಚಿವ ಜಾರಕಿಹೊಳಿ ಹೇಳಿದರು.

ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಮತ್ತು ಆಥಣಿ ಶಾಸಕ ಲಕ್ಷ್ಮಣ ಸವದಿ (Laxman Savadi) ನಡುವೆ ಜಗಳ ತಾರಕಕ್ಕೇರುತ್ತಿದೆ. ಇವತ್ತು ಬೆಳಗ್ಗೆ ಕಾರ್ಯಕರ್ತರ ಸಭೆಯಲ್ಲಿ ಮಾತಾಡಿ ಸವದಿಯನ್ನು ತರಾಟೆಗೆ ತೆಗದುಕೊಂಡಿದ್ದ ಸತೀಶ್ ಇವತ್ತು ಸಾಯಂಕಾಲ ನಗರದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ವಾಕ್ಪ್ರಹಾರ (verbal attack) ಮುಂದುವರಿಸಿದರು. ಚುನಾವಣಾ ಪ್ರಚಾರ ಕಾರ್ಯುದಲ್ಲಿ ಅವರೇನು ಮಾಡಿದರು ಅನ್ನೋದನ್ನು ಕಣ್ಣಾರೆ ನೋಡಿದ್ದೇವೆ. ಅವರನ್ನು ಟಾರ್ಗೆಟ್ ಮಾಡುತ್ತಿಲ್ಲ ಮತ್ತು ಅವರ ವಿರುದ್ಧ ವೃಥಾ ಆರೋಪಗಳನ್ನು ಮಾಡುತ್ತಿಲ್ಲ. ನಾನು ಹೇಳುತ್ತಿರುವುದಕ್ಕೆ ಮತ್ತು ನಾನು ಹೇಳಿದ್ದು ಆರೋಪ ಎನಿಸಿದರೆ ಅವರು ತಮ್ಮ ಪರವಾಗಿ ಸ್ಪಷ್ಟೀಕರಣ ನೀಡಲಿ, ಅವರನ್ನು ಯಾರೂ ತಡೆದಿಲ್ಲ. ಅವರ ಕ್ಷೇತ್ರದಲ್ಲಿ ಪ್ರಿಯಾಂಕಾಗೆ ಕಡಿಮೆ ವೋಟು ಬಿದ್ದಿರೋದು ಸತ್ಯ ಎಂದು ಜಾರಕಿಹೊಳಿ ಹೇಳಿದರು. ವಿಲನ್ ಮಾಡುತ್ತಿದ್ದೇನೆ ಅಂತ ಹೇಳಲು ಅವರು ಯಾರು? ಜನ ನಮ್ಮೊಂದಿಗಿದೆ, ಸರ್ಕಾರ ನಮ್ಮೊಂದಿಗಿದೆ ಎಂದು ಕೂಗಾಡುವ ಧ್ವನಿಯಲ್ಲಿ ಸಚಿವ ಜಾರಕಿಹೊಳಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಸತೀಶ್ ಜಾರಕಿಹೊಳಿ ವಿಷಯದಲ್ಲಿ ಡಿಕೆ ಶಿವಕುಮಾರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು ಯಾಕೆಂದು ಗೊತ್ತಾಗಲಿಲ್ಲ!

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More