ಕೋಲಾರ: ಕನ್ನಡ ರಾಜ್ಯೋತ್ಸವ ಹಿನ್ನೆಲೆ ಸರ್ಕಾರಿ ಬಸ್​ಗೆ ಅದ್ದೂರಿ ಅಲಂಕಾರ

Updated on: Nov 15, 2025 | 9:00 AM

ಕೋಲಾರ ಜಿಲ್ಲೆಯ ಯಾರಂಘಟ್ಟ ಗ್ರಾಮಸ್ಥರು ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಗ್ರಾಮಕ್ಕೆ ನಿತ್ಯ ಸೇವೆ ಸಲ್ಲಿಸುವ ಸರ್ಕಾರಿ ಬಸ್‌ಗೆ ಕನ್ನಡ ಬಾವುಟ ಕಟ್ಟಿ, ಹೂವಿನಿಂದ ಅಲಂಕರಿಸಿ ಸಂಭ್ರಮಿಸಿದ್ದಾರೆ. ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಸೇರಿ ನಿತ್ಯ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯುವ ಚಾಲಕ ಮತ್ತು ನಿರ್ವಾಹಕರನ್ನು ಸನ್ಮಾನಿಸಿ ಗೌರವಿಸಿದ್ದಾರೆ. ಈ ಮೂಲಕ ಕನ್ನಡ ಪ್ರೀತಿ ಮತ್ತು ಸಾರ್ವಜನಿಕ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಂಪು ಹಳದಿ ಹೂವು ಮತ್ತು ಕರ್ನಾಟಕ ಬಾವುಟಗಳಿಂದ ಶೃಂಗರಿಸಿದ ಸರ್ಕಾರಿ ಬಸ್ಸಿನ ದೃಶ್ಯಾವಳಿಗಳು ಇಲ್ಲಿವೆ.

ಕೋಲಾರ, ನವೆಂಬರ್ 15: ಕೋಲಾರ ಜಿಲ್ಲೆಯ ಯಾರಂಘಟ್ಟ ಗ್ರಾಮಸ್ಥರು ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಗ್ರಾಮಕ್ಕೆ ನಿತ್ಯ ಸೇವೆ ಸಲ್ಲಿಸುವ ಸರ್ಕಾರಿ ಬಸ್‌ಗೆ ಕನ್ನಡ ಬಾವುಟ ಕಟ್ಟಿ, ಹೂವಿನಿಂದ ಅಲಂಕರಿಸಿ ಸಂಭ್ರಮಿಸಿದ್ದಾರೆ. ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಸೇರಿ ನಿತ್ಯ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯುವ ಚಾಲಕ ಮತ್ತು ನಿರ್ವಾಹಕರನ್ನು ಸನ್ಮಾನಿಸಿ ಗೌರವಿಸಿದ್ದಾರೆ. ಕೆಂಪು ಹಳದಿ ಹೂವು ಮತ್ತು ಕರ್ನಾಟಕ ಬಾವುಟಗಳಿಂದ ಶೃಂಗರಿಸಿದ ಸರ್ಕಾರಿ ಬಸ್ಸಿನ ದೃಶ್ಯಾವಳಿಗಳು ಇಲ್ಲಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published on: Nov 15, 2025 08:59 AM