ಸೀರಿಯಲ್ ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ಸೀರಿಯಲ್ ನಟಿ ಶ್ರುತಿ ಅವರಿಗೆ ಚಾಕು ಹಾಕಲಾಗಿದೆ. ಈ ಬಗ್ಗೆ ಪ್ರತ್ಯಕ್ಷದರ್ಶಿಗಳು ಮಾತನಾಡಿದ್ದಾರೆ. ಘಟನೆ ನಡೆದ ದಿನ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ. ಈ ರೀತಿ ಆಗಿದ್ದು ಇದೇ ಮೊದಲೇನೂ ಅಲ್ಲ ಎಂದು ಕೂಡ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..
ಕಿರುತೆರೆ ನಟಿ ಶ್ರುತಿ (Serial Actress Shruthi) ಅವರಿಗೆ ಚಾಕು ಹಾಕಲಾಗಿದೆ. ಈ ಸುದ್ದಿ ಕೇಳಿ ಎಲ್ಲರಿಗೂ ಆತಂಕ ಆಗಿದೆ. ‘ಅಮೃತಧಾರೆ’ (Amruthadhaare) ಸೀರಿಯಲ್ನಲ್ಲಿ ಅಭಿನಯಿಸಿ ಗುರುತಿಸಿಕೊಂಡ ಶ್ರುತಿ ಅವರಿಗೆ ಪತಿಯೇ ಚಾಕು ಇರಿದಿದ್ದಾರೆ ಎನ್ನಲಾಗಿದೆ. ಪತಿ ಅಮರೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶ್ರುತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಗ್ಗೆ ಪ್ರತ್ಯಕ್ಷದರ್ಶಿಗಳು ಮಾತನಾಡಿದ್ದಾರೆ. ಘಟನೆ ನಡೆದ ದಿನ ಪರಿಸ್ಥಿತಿ ಹೇಗಿತ್ತು ಎಂಬುದನ್ನು ವಿವರಿಸಿದ್ದಾರೆ. ಈ ರೀತಿ ಆಗಿದ್ದು ಇದೇ ಮೊದಲೇನೂ ಅಲ್ಲ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
