ಅಶ್ವಿನಿ ಗೌಡ ಗೆಲ್ಲಿಸಲು 25 ಲಕ್ಷ ಪೇಮೆಂಟ್ ಆಗಿದ್ಯಾ? ಕರವೇ ಸದಸ್ಯರ ಖಡಕ್ ತಿರುಗೇಟು

Edited By:

Updated on: Jan 14, 2026 | 8:56 PM

ಅಶ್ವಿನಿ ಗೌಡ ಅವರು ಬಿಗ್ ಬಾಸ್ ಫಿನಾಲೆ ತಲುಪಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಅವರನ್ನು ಗೆಲ್ಲಿಸಲು 25 ಲಕ್ಷ ರೂಪಾಯಿ ಪೇಮೆಂಟ್ ಮಾಡಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಆ ಆರೋಪಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ತಿರುಗೇಟು ನೀಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ (Ashwini Gowda) ಅವರು ಫಿನಾಲೆ ತಲುಪಿದ್ದಾರೆ. ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಅವರನ್ನು ಗೆಲ್ಲಿಸಲು 25 ಲಕ್ಷ ರೂಪಾಯಿ ಪೇಮೆಂಟ್ ಮಾಡಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಆ ಆರೋಪಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ತಿರುಗೇಟು ನೀಡಿದ್ದಾರೆ. ‘ಕರವೇ ಅಧ್ಯಕ್ಷರಾದ ನಾರಾಯಣ ಗೌಡ ಅವರು ಮಗನ ಮದುವೆಯ ಕಾರ್ಡ್ ಕೊಡಲು ಸುದೀಪ್ ಮನೆಗೆ ಹೋಗಿದ್ದರು. ಅದನ್ನು ಗಿಲ್ಲಿ ಫ್ಯಾನ್ಸ್ ಈ ರೀತಿ ತಿರುಗಿಸಿ ಟ್ರೋಲ್ ಮಾಡುತ್ತಿದ್ದಾರೆ. ಇದಕ್ಕೆಲ್ಲ ನಾವು ಜಗ್ಗಲ್ಲ. ಕರವೇ ಕಾರ್ಯಕರ್ತರೆಲ್ಲ ಅಶ್ವಿನಿ ಗೌಡ ಅವರಿಗೆ ವೋಟ್ ಮಾಡುತ್ತಿದ್ದಾರೆ. ಅಶ್ವಿನಿ ಅವರೇ ಗೆಲ್ಲುವುದು’ ಎಂದು ಕರವೇ ಸದಸ್ಯರು ಹೇಳಿದ್ದಾರೆ. ಜನವರಿ 17 ಮತ್ತು 18ರಂದು ‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಫಿನಾಲೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.