ಸಿಎಂ ಆಗೋಕೆ ಏನ ಮಾಡಬೇಕು ಸರ್​? ಬಾಲಕನ ಪ್ರಶ್ನೆಗೆ ಸಚಿವ ಸೋಮಣ ಉತ್ತರ ಹೀಗಿದೆ..

ಸಿಎಂ ಆಗೋಕೆ ಏನ ಮಾಡಬೇಕು ಸರ್​? ಬಾಲಕನ ಪ್ರಶ್ನೆಗೆ ಸಚಿವ ಸೋಮಣ ಉತ್ತರ ಹೀಗಿದೆ..

ವಿವೇಕ ಬಿರಾದಾರ
|

Updated on: Apr 21, 2023 | 9:48 AM

ಸಚಿವ ವಿ. ಸೋಮಣ್ಣ ವರುಣಾ ಮತ್ತು ಚಾಮರಾಜನಗರ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದು, ಚಾಮರಾಜನಗರದ ವಿವಿಧೆಡೆ ಮತಯಾಚಿಸುತ್ತಿದ್ದಾರೆ. ಈ ವೇಳೆ ಓರ್ವ ಬಾಲಕ ಮುಖ್ಯಮಂತ್ರಿಯಾಗಲು ಏನು ಮಾಡಬೇಕು ಅಂತ ಸೋಮಣ್ಣರನ್ನು ಪ್ರಶ್ನಿಸಿದ್ದಾನೆ.

ಚಾಮರಾಜನಗರ: ಸಚಿವ ವಿ. ಸೋಮಣ್ಣ (V Somanna) ವರುಣಾ (Varuna) ಮತ್ತು ಚಾಮರಾಜನಗರ (Chamarajnagar) ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದು, ಚಾಮರಾಜನಗರದ ವಿವಿಧೆಡೆ ಮತಯಾಚಿಸುತ್ತಿದ್ದಾರೆ. ಪಾರ್ಕ್​, ಹೋಟೆಲ್​, ಕ್ಯಾಂಟೀನ್​​​, ಅಂಗಡಿಗಳ ಬಳಿ ಮತಯಾಚನೆ ಮಾಡುತ್ತಿದ್ದಾರೆ. ಈ ವೇಳೆ ಓರ್ವ ಬಾಲಕ ಮುಖ್ಯಮಂತ್ರಿಯಾಗಲು ಏನು ಮಾಡಬೇಕು ಅಂತ ಸೋಮಣ್ಣರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ವಿ ಸೋಮಣ್ಣ ಅವರು ನೀನು ಏನು ಮಾಡಬೇಡಾ ಹೋಗಪ್ಪಾ ತಂದೆ, ಚೆನ್ನಾಗಿ ಓದು. ಸಿಎಂ-ಗಿಎಂ ಎಲ್ಲಾ ಲೆಕ್ಕ ಇಲ್ಲ ನೀನೆ ದೊಡ್ಡ ಸಿಎಂ. ಚೆನ್ನಾಗಿ ಓದು, ಕ್ರೀಡೆಯಲ್ಲಿ ಆಕ್ಟಿವಾಗಿರು. ಬಾಕಿದೆಲ್ಲಾ ಬಿಟ್ಬಿಡು. ನಿನ್ನ ಹಣೆಯಲ್ಲಿ ಬರೆದಿದ್ದರೇ ಆಗುತ್ತೀಯಾ, ಎಂದು ಬಾಲಕನಿಗೆ ಸೋಮಣ್ಣ ಕಿವಿ ಮಾತು ಹೇಳಿದ್ದಾರೆ.