Karnataka Assembly Polls: ಬೆಂಗಳೂರು ಆಗ್ನೇಯ ವಿಭಾಗದಲ್ಲಿ ರೌಡಿಶೀಟರ್​ಗಳ ಮೇಲೆ ಪೊಲೀಸ್ ತೀವ್ರ ನಿಗಾ, ಕೆಲವರು ಗಡೀಪಾರು

Karnataka Assembly Polls: ಬೆಂಗಳೂರು ಆಗ್ನೇಯ ವಿಭಾಗದಲ್ಲಿ ರೌಡಿಶೀಟರ್​ಗಳ ಮೇಲೆ ಪೊಲೀಸ್ ತೀವ್ರ ನಿಗಾ, ಕೆಲವರು ಗಡೀಪಾರು

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 21, 2023 | 11:42 AM

ತಮ್ಮ ವಲಯದ ಐವರು ಹಿಸ್ಟರಿ ಶೀಟರ್ ಗಳನ್ನು ಗಡೀಪಾರು ಮಾಡಲಾಗಿದೆ, ಇನ್ನೂ ಕೆಲವರನ್ನು ನಗರದಿಂದ ಹೊರಹಾಕುವ ಪ್ರಸ್ತಾಪವನ್ನು ಪರಿಶೀಲಿಸಲಾಗುತ್ತಿದೆ ಎಂದ ಡಿಸಿಪಿ ಬಾಬಾ ಹೇಳಿದರು.  

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ (assembly polls) ಮುಗಿಯುವರೆಗೆ ರೌಡಿ, ಪುಡಿ ರೌಡಿ, ಗೂಂಡಾ ಮತ್ತು ಮಾದಕ ವಸ್ತುಗಳನ್ನು ಮಾರಾಟ ಮಾಡುವವರಿಗೆ (drug peddlers) ಉಳಿಗಾಲವಿಲ್ಲ. ನಗರದ ಆಗ್ನೇಯ ವಲಯದ ಪೊಲೀಸರು ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ತಮ್ಮ ಸಿಬ್ಬಂದಿ ನಡೆಸುತ್ತಿರುವ ಕಾರ್ಯಾಚರಣೆ ಬಗ್ಗೆ ಮಾತಾಡಿದ ಆಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬಾ (DCP CK Baba) ವಲಯದ ಎಲ್ಲ ಠಾಣೆಗಳ ಪೊಲೀಸರು ಒಂದು ಟೀಮ್ ಮಾಡಿಕೊಂಡು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಬರುವ ರೌಡಿ ಶೀಟರ್ ಮನೆಗಳ ಮೇಲೆ ದಾಳಿ ನಡೆಸಿ ಮನೆಯಲ್ಲಿ ಅಡಗಿಸಿರಬಹುದಾದ ಮಾರಕಾಸ್ತ್ರ ಮತ್ತು ಡ್ರಗ್ಸ್ ವಶಪಡಿಸಿಕೊಳ್ಳುತ್ತಿದ್ದಾರೆ. ಆಡುಗೋಡಿ, ತಿಲಕ್ ನಗರ್, ಹೆಚ್ ಎಸ್ ಆರ್ ಲೇಔಟ್, ಪರಪ್ಪನ ಅಗ್ರಹಾರ, ಕೋರಮಂಗಲ ಮೊದಲಾದ ಸ್ಥಳಗಳಲ್ಲಿ ವಾಸವಾಗಿರುವ ರೌಡಿಗಳಿಗೆ ಬಾಲ ಬಿಚ್ಚದಂತೆ ಎಚ್ಚರಿಸಲಾಗಿದೆ ಎಂದು ಬಾಬಾ ಹೇಳಿದರು. ತಮ್ಮ ವಲಯದ ಐವರು ಹಿಸ್ಟರಿ ಶೀಟರ್ ಗಳನ್ನು ಗಡೀಪಾರು ಮಾಡಲಾಗಿದೆ, ಇನ್ನೂ ಕೆಲವರನ್ನು ನಗರದಿಂದ ಹೊರಹಾಕುವ ಪ್ರಸ್ತಾಪವನ್ನು ಪರಿಶೀಲಿಸಲಾಗುತ್ತಿದೆ ಎಂದ ಡಿಸಿಪಿ ಬಾಬಾ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ