ಮಹಿಳೆಗೆ ಸಚಿವ ಸ್ಥಾನ ಖಚಿತ ಎಂದ ಡಿಕೆಶಿ: ಅಧಿವೇಶನ ಆರಂಭಕ್ಕೂ ಮುನ್ನ ಖಾತೆ ಹಂಚಿಕೆಯಾಗದಿದ್ರೆ ಏನ್ಮಾಡ್ತಾರಂತೆ ಗೊತ್ತಾ!

ಮಹೇಶ್ ಇ, ಭೂಮನಹಳ್ಳಿ Edited By:

Updated on: Aug 10, 2026 | 9:48 AM

ನವದೆಹಲಿಯಲ್ಲಿ ಡಿಕೆ ಶಿವಕುಮಾರ್ ಅವರು ಸಚಿವ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ಕುರಿತು ಮಾತನಾಡಿದ್ದಾರೆ. ಬಾಕಿ ಇರುವ ಒಂದೇ ಒಂದು ಸಚಿವ ಸ್ಥಾನ ಮಹಿಳಾ ಕೋಟಾಕ್ಕೆ ಮೀಸಲಿದ್ದು, ಅದನ್ನು ಭರ್ತಿ ಮಾಡಲು ಯಾವುದೇ ಅವಸರವಿಲ್ಲ ಎಂದಿದ್ದಾರೆ. ಮುಂಬರುವ ಅಧಿವೇಶನದಲ್ಲಿ ಎಲ್ಲ ಇಲಾಖೆಗಳ ಪರವಾಗಿ ತಾನೇ ಉತ್ತರ ನೀಡಲು ಸಿದ್ಧ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ನವದೆಹಲಿ, ಆಗಸ್ಟ್ 10: ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಕುರಿತು ದೆಹಲಿಯಲ್ಲಿ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ. ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಪ್ರಸ್ತುತ ಒಂದೇ ಒಂದು ಸಚಿವ ಸ್ಥಾನ ಖಾಲಿಯಿದ್ದು, ಅದು ಮಹಿಳಾ ಕೋಟಾಗೆ ಮೀಸಲಾಗಿದೆ ಎಂದರು. ಮಹಿಳೆಗೆ ಸಚಿವ ಸ್ಥಾನ ನೀಡುವುದು ಖಚಿತ, ಆದರೆ ಅದನ್ನು ಭರ್ತಿ ಮಾಡಲು ಅಷ್ಟು ತರಾತುರಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಖಾತೆ ಹಂಚಿಕೆ ವಿಳಂಬದ ಬಗ್ಗೆ ಕೇಳಿದಾಗ, ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅವಧಿಯಲ್ಲಿ ವಿಳಂಬವಾದ ಉದಾಹರಣೆ ನೀಡಿದರು. ಯಡಿಯೂರಪ್ಪ ದೆಹಲಿಯಲ್ಲಿ ಎಷ್ಟು ದಿನ ಕಳೆದಿದ್ದರು ಎಂಬುದನ್ನು ನೆನಪಿಸಿದ ಡಿಕೆ ಶಿವಕುಮಾರ್, ಸಚಿವರು ಈಗಾಗಲೇ ಜಿಲ್ಲೆಗಳಿಗೆ ಭೇಟಿ ನೀಡಿ ಬರಗಾಲ ಪರಿಸ್ಥಿತಿ ಕುರಿತು ವರದಿಗಳನ್ನು ನೀಡಿದ್ದಾರೆ ಎಂದು ತಿಳಿಸಿದರು. ಖಾತೆ ಹಂಚಿಕೆ ಆಗದಿದ್ದರೆ ಅಧಿವೇಶನದಲ್ಲಿ ತಾನೊಬ್ಬನೇ ಎಲ್ಲ ಇಲಾಖೆಗಳ ಪರವಾಗಿ ಉತ್ತರ ನೀಡಲು ಸಿದ್ಧ ಎಂದು ಡಿಕೆ ಶಿವಕುಮಾರ್ ಹೇಳಿದರು. ಖಾತೆಗಳನ್ನು ನಾಳೆಗೇ ಹಂಚಿಕೆ ಮಾಡಬೇಕು ಎಂಬ ಅವಸರವಿಲ್ಲ ಎಂದು ಅವರು ತಿಳಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us