‘ಕೆಜಿಎಫ್​ ರೀತಿಯ ಕ್ವಾಲಿಟಿ ಸಿನಿಮಾಗಳ ಸಂಖ್ಯೆ ಹೆಚ್ಚಿಸಿ’: ಕನ್ನಡ ಚಿತ್ರರಂಗಕ್ಕೆ ಸಿಎಂ ಬೊಮ್ಮಾಯಿ ಸಲಹೆ

| Updated By: ಮದನ್​ ಕುಮಾರ್​

Updated on: Apr 25, 2022 | 1:57 PM

‘ಕೆಜಿಎಫ್​: ಚಾಪ್ಟರ್​ 2’ ಚಿತ್ರ ಎಲ್ಲರಿಗೂ ಒಂದು ಮಾದರಿಯನ್ನು ಹಾಕಿಕೊಟ್ಟಿದೆ. ಈ ಚಿತ್ರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮೆಚ್ಚುಗೆ ಸೂಚಿಸಿದ್ದಾರೆ.

ಯಶ್​ ನಟನೆಯ ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಚಿತ್ರದಿಂದಾಗಿ ಜಾಗತಿಕ ಮಟ್ಟದಲ್ಲಿ ಕನ್ನಡ ಚಿತ್ರರಂಗದ (Sandalwood) ಬಾವುಟ ಎತ್ತರಕ್ಕೆ ಹಾರುವಂತಾಗಿದೆ. ವಿಶ್ವಾದ್ಯಂತ ಈ ಚಿತ್ರ ಅತ್ಯುತ್ತಮ ಕಲೆಕ್ಷನ್​ ಮಾಡಿದೆ. ಕನ್ನಡದ ಜೊತೆಗೆ ಹಿಂದಿ, ಮಲಯಾಳಂ, ತಮಿಳು ಮತ್ತು ತೆಲುಗಿಗೆ ಡಬ್​ ಆಗಿ ಬಿಡುಗಡೆ ಆದ ಈ ಸಿನಿಮಾವನ್ನು ಎಲ್ಲ ಭಾಷೆಯ ಜನರು ಮನಸಾರೆ ಮೆಚ್ಚಿಕೊಂಡಿದ್ದಾರೆ. ‘ಕೆಜಿಎಫ್​ 2’ ಚಿತ್ರದ ಸಾಧನೆಯನ್ನು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Karnataka CM Basavaraj Bommai) ಅವರು ಕೊಂಡಾಡಿದ್ದಾರೆ. ಕರ್ನಾಟಕ ಚಲನಚಿತ್ರ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಗುಣಮಟ್ಟದ ಸಿನಿಮಾಗಳನ್ನು ಮಾಡುವಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರೇರಣೆ ನೀಡಬೇಕು. ಈಗ ಕಾಲ ಬದಲಾಗಿದೆ. ಕರ್ನಾಟಕ ಮಾತ್ರವಲ್ಲದೇ ವಿಶ್ವಾದ್ಯಂತ ಜನರು ಕನ್ನಡ ಸಿನಿಮಾ ನೋಡುತ್ತಾರೆ. ‘ಕೆಜಿಎಫ್​ 2’ ರೀತಿಯ ಕ್ವಾಲಿಟಿಯಲ್ಲಿ ಎಲ್ಲ ಚಿತ್ರಗಳು ಮೂಡಿಬರಲಿ. ಮೈಸೂರಿನಲ್ಲಿ ಚಿತ್ರ ನಗರಿ ನಿರ್ಮಾಣದ ಕಾರ್ಯವನ್ನು ಈ ವರ್ಷ ಆರಂಭ ಮಾಡಿಸುತ್ತೇನೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ:

ಅರುಣ್​ ಸಾಗರ್​ ಪುತ್ರಿಯ ‘ಕೆಜಿಎಫ್​ 2’ ಸಾಂಗ್​ ಸೂಪರ್​ ಹಿಟ್​; ಒಂದು ದಿನದೊಳಗೆ 4.7 ಮಿಲಿಯನ್​ ವೀಕ್ಷಣೆ

‘ಕೆಜಿಎಫ್​: ಚಾಪ್ಟರ್​ 2’ ಬಗ್ಗೆ ಉಪೇಂದ್ರ ಮೆಚ್ಚುಗೆ; ಇನ್ನುಳಿದವರ ಮೌನಕ್ಕೆ ಯಶ್​ ಫ್ಯಾನ್ಸ್​ ತಕರಾರು​