ದೆಹಲಿಯಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಭೇಟಿಯಾದ ಸಿಎಂ ಡಿಕೆ ಶಿವಕುಮಾರ್

ಮಹೇಶ್ ಇ, ಭೂಮನಹಳ್ಳಿ Edited By:

Updated on: Jun 12, 2026 | 1:04 PM

ಮುಖ್ಯಮಂತ್ರಿಯಾದ ಬಳಿಕ ದೆಹಲಿಗೆ ಭೇಟಿ ನೀಡಿದ ಡಿಕೆ ಶಿವಕುಮಾರ್ ಅವರು, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪರಾಷ್ಟ್ರಪತಿ ರಾಧಾಕೃಷ್ಣನ್ ಅವರನ್ನು ಭೇಟಿಯಾಗಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಈ ಭೇಟಿಯಲ್ಲಿ ಡಿಕೆ ಶಿವಕುಮಾರ್ ಕೃತಜ್ಞತೆ ಸಲ್ಲಿಸಿ, ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ.

ನವದೆಹಲಿ, ಜೂನ್​​ 12: ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಉಪರಾಷ್ಟ್ರಪತಿ ರಾಧಾಕೃಷ್ಣನ್ ಅವರನ್ನು ಕೂಡ ಭೇಟಿಯಾಗಿ ಶಿವಕುಮಾರ್ ಅವರು ಚರ್ಚೆ ನಡೆಸಿದ್ದಾರೆ. ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ದೆಹಲಿಗೆ ತೆರಳಿರುವ ಡಿಕೆಶಿ, ದೇಶದ ಗಣ್ಯಾತಿಗಣ್ಯ ನಾಯಕರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮೊದಲು ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನೂ ಸಿಎಂ ಭೇಟಿಯಾಗಿದ್ದರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Jun 12, 2026 01:02 PM
Follow Us
ಮಹೇಶ್ ಇ, ಭೂಮನಹಳ್ಳಿ

ಮಹೇಶ್ ಇ ಎಂಬ ನಾನು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಭೂಮನಹಳ್ಳಿ ಗ್ರಾಮದ ನಿವಾಸಿ. ನಮ್ಮ ಹೆಮ್ಮೆಯ ಟಿವಿ9 ತುಮಕೂರು ಜಿಲ್ಲಾ ವರದಿಗಾರನಾಗಿ ಸತತ 9 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಡೆದಾಡುವ ದೇವರು ತ್ರಿವಿಧ ದಾಸೋಹಿ ಶಿವಕುಮಾರ್ ಶ್ರೀಗಳು ಲಿಂಗೈಕ್ಯರಾದಾಗ ಆ ಸುದ್ದಿ ಬಿತ್ತರ ಬಗ್ಗೆ ಹಾಗೂ ಕೊನೆ ಕ್ಷಣದಲ್ಲಿ ದೇವರ ಜೊತೆಯಿದ್ದ ಎಲ್ಲಾ ಕಾರ್ಯಕ್ರಮಗಳನ್ನ ನೋಡಿ ವರದಿ ಮಾಡಿದ್ದು ನನ್ನ ಭಾಗ್ಯ..ಬಡ ಕುಟುಂಬದಿಂದ ಬಂದಿರುವ ನನಗೆ ಟಿವಿ9 ಸಂಸ್ಥೆ ತುಮಕೂರು ಅಂತಾ ಅತಿದೊಡ್ಡ ಜಿಲ್ಲೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದ...