ಡಿಕೆ ಸುರೇಶ್ ನಿಜಾಮನಾಗುವುದು ಬೇಡ, ನಿಜಾಮನನ್ನು ಬಗ್ಗುಬಡಿದ ಸರ್ದಾರ್ ಪಟೇಲ್ ರಂಥ ನೇತೃತ್ವ ಬಿಜೆಪಿಯಲ್ಲಿದೆ: ಸಿಟಿ ರವಿ

|

Updated on: Feb 03, 2024 | 6:58 PM

ಬಿಜೆಪಿ ಅಧಿಕಾರಾವಧಿಯಲ್ಲಿ ಅದರಲ್ಲೂ ವಿಶೇಷವಾಗಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದ 10 ವರ್ಷಗಳ ಅವಧಿಯಲ್ಲಿ, ಕರ್ನಾಟಕಕ್ಕೆ ಯಾವ್ಯಾವ ಯೋಜನೆಗಳು  ಬಂದಿವೆ, ಎಷ್ಟೆಷ್ಟು ಅನುದಾನ ಸಿಕ್ಕಿದೆ ಅನ್ನೋದನ್ನು ಅಂಕಿ ಅಂಶಗಳ ಮೂಲಕ ಜನರಿಗೆ ತೋರಿಸುತ್ತೇವೆ ಎಂದು ರವಿ ಹೇಳಿದರು.

ಹಾಸನ: ಕರ್ನಾಟಕದ ಮಂತ್ರಿಗಳು ಮತ್ತು ಕಾಂಗ್ರೆಸ್ ಪಕ್ಷದ ಶಾಸಕರು ದೆಹಲಿಯಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದರೆ ಮಾಡಲಿ, ಅದಕ್ಕೆ ಬಿಜೆಪಿಯ ತಕರಾರೇನೂ ಇಲ್ಲ, ಪ್ರಜಾಪ್ರಭುತ್ವದಲ್ಲಿ (Democracy) ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ ಎಂದು ಬಿಜೆಪಿ ನಾಯಕ ಸಿಟಿ ರವಿ (CT Ravi) ಹೇಳಿದರು. ಹಾಸನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ರಾಜ್ಯ ಕಾಂಗ್ರೆಸ್ ನಾಯಕರು (Congress leaders) ಮಾಡುತ್ತಿರುವ ಅರೋಪಗಳಲ್ಲಿ ನಿಜಾಯಿತಿ ಎಷ್ಟು ಸುಳ್ಳೆಷ್ಟು ಅಂತ ತಿಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತದೆ ಎಂದರು. ಬಿಜೆಪಿ ಅಧಿಕಾರಾವಧಿಯಲ್ಲಿ ಅದರಲ್ಲೂ ವಿಶೇಷವಾಗಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದ 10 ವರ್ಷಗಳ ಅವಧಿಯಲ್ಲಿ, ಕರ್ನಾಟಕಕ್ಕೆ ಯಾವ್ಯಾವ ಯೋಜನೆಗಳು  ಬಂದಿವೆ, ಎಷ್ಟೆಷ್ಟು ಅನುದಾನ ಸಿಕ್ಕಿದೆ ಅನ್ನೋದನ್ನು ಅಂಕಿ ಅಂಶಗಳ ಮೂಲಕ ಜನರಿಗೆ ತೋರಿಸುತ್ತೇವೆ ಎಂದು ರವಿ ಹೇಳಿದರು. ಮುಂದುವರಿದು ಮಾತಾಡಿದ ಅವರು, ಪ್ರತಿಭಟನೆ ಮಾಡೋದಿಕ್ಕೆ ಅವರಿಗೆ ಹಕ್ಕಿದೆಯೇ ಹೊರತು ದೇಶ ಒಡೆಯುವ ಹಕ್ಕಿಲ್ಲ, ಸಂಸದ ಡಿಕೆ ಸುರೇಶ್ ತಮ್ಮ ನಿಜಾಮ್ ಮನಸ್ಥಿತಿಯಿಂದ ಹೊರಬರಬೇಕು, ನಿಜಾಮನಾಗುವ ಹಪಾಹಪಿ ಅವರಿಗೆ ಬೇಡ; ಯಾಕೆಂದರೆ, ನಿಜಾಮನ ರಜಾಕರನ್ನು ಬಗ್ಗು ಬಡಿದು, ದೇಶವನ್ನು ಒಗ್ಗೂಡಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಂಥ ನೇತೃತ್ವ ಬಿಜೆಪಿಯಲ್ಲಿದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ