ಮತ್ತಿಕೆರೆಯ ಜೆಪಿ ಪಾರ್ಕ್ನಲ್ಲಿ ಡಿಸಿಎಂ ವಾಯುವಿಹಾರ; ಜನರ ಸಮಸ್ಯೆ ಆಲಿಸಿದ ಡಿಕೆ ಶಿವಕುಮಾರ್
ಇಂದು ಬೆಳ್ಳಂಬೆಳಗ್ಗೆ ಮತ್ತಿಕೆರೆಯ ಜೆಪಿ ಪಾರ್ಕ್ಗೆ ಬಂದ ಡಿಸಿಎಂ ಡಿಕೆಶಿ ಕಾಫಿ ಕುಡಿಯುತ್ತಾ ಅಲ್ಲಿದ್ದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು, ಸಂವಾದ ನಡೆಸಿದರು. ಮತ್ತಿಕೆರೆಯ ಜೆಪಿ ಪಾರ್ಕ್ನಲ್ಲಿ ಡಿಸಿಎಂ ಡಿಕೆ ವಾಯುವಿಹಾರದ ವೇಳೆ ಜೆಪಿ ಪಾರ್ಕ್ನಲ್ಲಿ ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ಜನರೊಂದಿಗೆ ಡಿಸಿಎಂ ಸಂವಾದ ನಡೆಸಿದರು. ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಜಿಬಿಎ ಅಧಿಕಾರಿಗಳು ಸಾಥ್ ನೀಡಿದರು. ವಾಯುವಿಹಾರದ ಬಳಿಕ ಜನರ ಜೊತೆ ಡಿಕೆ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ನೋಟ್ ಮಾಡಿಕೊಂಡರು.
ಬೆಂಗಳೂರು, ಅಕ್ಟೋಬರ್ 12: ಬೆಂಗಳೂರು ನಡಿಗೆ (Bengaluru Nadige) ಕಾರ್ಯಕ್ರಮದ ಅಂಗವಾಗಿ ನಿನ್ನೆ (ಶನಿವಾರ) ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಲಾಲ್ಬಾಗ್ ಸಸ್ಯೋದ್ಯಾನದಲ್ಲಿ ವಾಯುವಿಹಾರ ನಡೆಸಿದ್ದರು. ಇಂದು ಬೆಳ್ಳಂಬೆಳಗ್ಗೆ ಮತ್ತಿಕೆರೆಯ ಜೆಪಿ ಪಾರ್ಕ್ಗೆ ಬಂದ ಡಿಸಿಎಂ ಡಿಕೆಶಿ ಕಾಫಿ ಕುಡಿಯುತ್ತಾ ಅಲ್ಲಿದ್ದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು, ಸಂವಾದ ನಡೆಸಿದರು. ಮತ್ತಿಕೆರೆಯ ಜೆಪಿ ಪಾರ್ಕ್ನಲ್ಲಿ ಡಿಸಿಎಂ ಡಿಕೆ ವಾಯುವಿಹಾರದ ವೇಳೆ ಜೆಪಿ ಪಾರ್ಕ್ನಲ್ಲಿ ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ಜನರೊಂದಿಗೆ ಡಿಸಿಎಂ ಸಂವಾದ ನಡೆಸಿದರು. ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಜಿಬಿಎ ಅಧಿಕಾರಿಗಳು ಸಾಥ್ ನೀಡಿದರು. ವಾಯುವಿಹಾರದ ಬಳಿಕ ಜನರ ಜೊತೆ ಡಿಕೆ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ನೋಟ್ ಮಾಡಿಕೊಂಡರು.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published on: Oct 12, 2025 08:51 AM
