ಕಬ್ಬು ಬೆಳೆಗಾರರನ್ನು ಬಿಜೆಪಿಯವರು ಪ್ರಚೋದಿಸುತ್ತಿದ್ದಾರೆ; ಈಶ್ವರ ಖಂಡ್ರೆ ಆರೋಪ

Updated on: Nov 13, 2025 | 9:10 PM

ಬೆಂಗಳೂರಿನಲ್ಲಿ ಅರಣ್ಯ ಸಚಿವ ಈಶ್ವರ​ ಖಂಡ್ರೆ ಹೇಳಿಕೆ ನೀಡಿದ್ದು, ಆನೆ-ಮಾನವನ ನಡುವಿನ ಸಂಘರ್ಷ ನಿವಾರಣೆಗೆ ಸಭೆ ಮಾಡಲಾಗಿದೆ. ಸಂಘರ್ಷ ತಡೆಗೆ ಏನು ಕ್ರಮಕೈಗೊಳ್ಳಬೇಕೆಂದು ಚರ್ಚೆ ನಡೆಸಿದ್ದೇವೆ. ಹೊರಗುತ್ತಿಗೆ, ಗಸ್ತು ಹೆಚ್ಚಳ ಮಾಡುವುದರ ಬಗ್ಗೆ ಚರ್ಚೆ ಮಾಡಿದ್ದೇವೆ. ಮಾನವ ಸಂಘರ್ಷ ಕಾರ್ಯಪಡೆ ರಚನೆ ಮಾಡುವುದು, ಆನೆ ದಾಳಿಯನ್ನ ಪ್ರಕೃತಿ ವಿಕೋಪ ಅಂತ ಭಾವಿಸಬೇಕು. ಅವರಿಗೆ ಪರಿಹಾರ ನೀಡಲು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಪರಿಹಾರ ವಿಳಂಬ ಮಾಡಬಾರದೆಂದು ಸಿಎಂ ಸೂಚನೆ ನೀಡಿದ್ದಾರೆ. ಬೆಳೆ ನಷ್ಟಕ್ಕೆ ಕೂಡಲೇ ಪರಿಹಾರ ನೀಡಲು ಸಿಎಂ ಸೂಚಿಸಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್​ ಖಂಡ್ರೆ ಹೇಳಿದ್ದಾರೆ.

ಬೆಂಗಳೂರು, ನವೆಂಬರ್ 13: ಮುಧೋಳದಲ್ಲಿ ಕಬ್ಬು ಬೆಳೆಗಾರರ (Sugarcane Farmers) ಹೋರಾಟದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ (Eshwar Khandre), ಬಿಜೆಪಿಯೇ ರೈತರಿಗೆ ಪ್ರಚೋದನೆಯನ್ನು ನೀಡುತ್ತಿದೆ. ಇದರ ವಿರುದ್ಧ ನಾವು ಹೋರಾಟವನ್ನು ಮಾಡುತ್ತೇವೆ. ಇದು ಖಂಡನೀಯ. ಬಿಜೆಪಿಯವರಿಗೆ ನಿಜವಾಗಿಯೂ ಕಾಳಜಿ ಇದ್ದರೆ ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿ ಎಥೆನಾಲ್ ಹಾಗೂ ಸಕ್ಕರೆ ದರವನ್ನು ಹೆಚ್ಚು ಮಾಡಲಿ. ರಾಜ್ಯ ಸರ್ಕಾರದಿಂದ ಎಲ್ಲ ಹಣ ತೆಗೆದುಕೊಳ್ಳುತ್ತಾರೆ, ಆದರೆ ರಾಜ್ಯಕ್ಕೆ ವಾಪಸ್ ಹಣ ಕೊಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಬಿಜೆಪಿಗರು ಬೆಳಗಾವಿಗೆ ಹೋಗಿ ರೈತರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಇಂದು ಸಿಎಂ‌ ಎಲ್ಲರ‌ ಜತೆ ಚರ್ಚಿಸಿ ತೀರ್ಮಾನ ಮಾಡಿದ್ದಾರೆ. ಬಿಜೆಪಿಗರು ಬಾಯಿಗೆ ಬಂದಂತೆ ಹೇಳಿಕೆ ನೀಡ್ತಿದ್ದಾರೆ. ಪೆಟ್ರೋಲ್​ಗೆ 100 ರೂ. ಇದೆ, ಎಥೆನಾಲ್​ಗೂ 100 ರೂ. ಕೊಡಲಿ. ಸಕ್ಕರೆ ಬೆಲೆ ಜಾಸ್ತಿ ಆದರೆ ರೈತರಿಗೆ ಕೊಡಬಹುದು. ಕೇಂದ್ರ ರಫ್ತು ಬೆಲೆ ಜಾಸ್ತಿ ಮಾಡುತ್ತಿಲ್ಲ. ಕೇಂದ್ರ ಸರ್ಕಾರ ರಾಜ್ಯದ ಮೇಲೆ ಗೂಬೆ ಕೂರಿಸೋ ಪ್ರಯತ್ನ ಮಾಡುತ್ತಿದೆ ಎಂದು ಈಶ್ವರ ಖಂಡ್ರೆ ಟೀಕಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ