ಚಿನ್ನಸ್ವಾಮಿಯಲ್ಲಿ IPL ಪಂದ್ಯಗಳಿಗೆ ಗೃಹ ಇಲಾಖೆ ಗ್ರೀನ್‌ಸಿಗ್ನಲ್: ತವರಿಗೆ ಮರಳುತ್ತಾ ಆರ್‌ಸಿಬಿ?
ಕರ್ನಾಟಕ ಗೃಹ ಇಲಾಖೆಯು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಮತ್ತು ಅಂತರಾಷ್ಟ್ರೀಯ ಪಂದ್ಯಗಳನ್ನು ನಡೆಸಲು ಅನುಮತಿ ನೀಡಿದೆ. ಇದು ಆರ್‌ಸಿಬಿ ಅಭಿಮಾನಿಗಳಿಗೆ ಸಂತಸದ ಸುದ್ದಿ. ಭದ್ರತಾ ಮಾನದಂಡಗಳನ್ನು ಪೂರೈಸುವ ಷರತ್ತಿನೊಂದಿಗೆ ಈ ಅನುಮೋದನೆ ದೊರೆತಿದೆ. ಐಪಿಎಲ್ ಪಂದ್ಯಗಳ ಶೆಡ್ಯೂಲ್ ಸಿದ್ಧಪಡಿಸುವ ಸಲುವಾಗಿ KSCAಗೆ ಬಿಸಿಸಿಐ ಸೂಚಿಸಿತ್ತು.
ಬೆಂಗಳೂರು, ಜನವರಿ 17: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಪ್ರಕರಣ ಬಳಿಕ ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಮ್ಯಾಚ್‌ಗಳು ನಡೆಯುವುದು ಡೌಟು ಎನ್ನಲಾಗುತ್ತಿತ್ತು. ಆದರೆ ಕರ್ನಾಟಕ ಗೃಹ ಇಲಾಖೆಯು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ನಡೆಸಲು ಅನುಮತಿ ನೀಡಿದೆ. ಆ ಮೂಲಕ ಆರ್‌ಸಿಬಿ ಅಭಿಮಾನಿಗಳಿಗೆ ಗುಡ್ನ್ಯೂಸ್ ಸಿಕ್ಕಿದೆ. ಎನ್. ಕುನ್ನಾ ಸಮಿತಿಯು ನೀಡಿದ ಭದ್ರತೆ ಸೇರಿದಂತೆ ಹಲವು ಷರತ್ತುಗಳನ್ನು ಕೆಎಸ್‌ಸಿಎ ಪೂರೈಸಿದ ನಂತರವಷ್ಟೇ ಅಂತಿಮ ಅನುಮತಿ ನೀಡಲಾಗುವುದು ಎಂದು ಗೃಹ ಇಲಾಖೆ ತಿಳಿಸಿತ್ತು. ಈ ಬೆನ್ನಲ್ಲೇ ಕೆಎಸ್‌ಸಿಎ ಈಗಾಗಲೇ ಈ ಷರತ್ತುಗಳನ್ನು ಪೂರೈಸುವ ನಿಟ್ಟಿನಲ್ಲಿ ಕೆಲಸ ಆರಂಭಿಸಿದ್ದು, ಹೀಗಾಗಿ ಇದೀಗ ಗೃಹ ಇಲಾಖೆ ಪಂದ್ಯಗಳ ಆಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಆರ್‌ಸಿಬಿ ತನ್ನ ತವರು ನೆಲವಾದಲ್ಲಿ ಆಡಲಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Jan 17, 2026 07:50 PM
