ದರ್ಶನ್ ಸಲುವಾಗಿ ಜೈಲು ಅಧಿಕಾರಿಗಳ ಕರ್ತವ್ಯ ಲೋಪ; ಗೃಹ ಸಚಿವರಿಗೆ ಪ್ರಶ್ನೆಗಳ ಸುರಿಮಳೆ

ದರ್ಶನ್ ಸಲುವಾಗಿ ಜೈಲು ಅಧಿಕಾರಿಗಳ ಕರ್ತವ್ಯ ಲೋಪ; ಗೃಹ ಸಚಿವರಿಗೆ ಪ್ರಶ್ನೆಗಳ ಸುರಿಮಳೆ

ಮದನ್​ ಕುಮಾರ್​
|

Updated on: Aug 26, 2024 | 3:49 PM

ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್​ಗೆ ವಿಐಪಿ ಟ್ರೀಟ್​ಮೆಂಟ್​ ನೀಡಲಾಗಿದೆ. ಸಿಗರೇಟ್​, ಮೊಬೈಲ್, ರೌಡಿಗಳ ಸಂಪರ್ಕ ಸೇರಿದಂತೆ ಹಲವು ಅಕ್ರಮಗಳು ಜೈಲಿನಲ್ಲಿ ನಡೆದಿವೆ. ರೌಡಿಶೀಟರ್​ಗಳ ಜೊತೆ ದರ್ಶನ್ ಸಿಗರೇಟು ಸೇದಿದ್ದು, ವಿಡಿಯೋ ಕಾಲ್​ ಮಾಡಿದ್ದು ಬಹಿರಂಗ ಆದ ಬಳಿಕ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಒಟ್ಟಾರೆ ಪ್ರಕರಣದ ಕುರಿತು ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ಕೊಲೆ ಆರೋಪಿ ದರ್ಶನ್​ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಫೋಟೋ ಮತ್ತು ವಿಡಿಯೋಗಳು ವೈರಲ್​ ಆಗಿವೆ. ಅಷ್ಟಕ್ಕೂ ಕಾರಾಗೃಹದಲ್ಲಿ ಇಂಥ ಅಕ್ರಮಗಳು ನಡೆಯಲು ಹೇಗೆ ಸಾಧ್ಯ ಎಂದು ಸರ್ಕಾರವನ್ನು ಜನರು ಪ್ರಶ್ನಿಸುತ್ತಿದ್ದಾರೆ. ಇಂದು (ಆಗಸ್ಟ್​ 26) ಗೃಹಸಚಿವ ಜಿ. ಪರಮೇಶ್ವರ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಅವರಿಗೆ ಪ್ರಶ್ನೆಗಳ ಸುರಿಮಳೆ ಆಯಿತು. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.