ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಬೆಚ್ಚಿಬಿದ್ದ ಕೈದಿಗಳು: ಮೊಬೈಲ್​​, ಗಾಂಜಾ, ಆಯುಧಗಳು ಜಪ್ತಿ

Edited By:

Updated on: Dec 17, 2025 | 12:53 PM

ಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಕರ್ನಾಟಕದ ಜೈಲುಗಳಲ್ಲಿ ಮೆಗಾ ಕಾರ್ಯಾಚರಣೆ ನಡೆಸಲಾಗಿದೆ. ಪರಪ್ಪನ ಅಗ್ರಹಾರ ಸೇರಿದಂತೆ ರಾಜ್ಯದ ವಿವಿಧ ಜೈಲುಗಳಲ್ಲಿ ಮೊಬೈಲ್ ಫೋನ್‌ಗಳು, ಚಾಕುಗಳು ಮತ್ತು ಗಾಂಜಾ ಸೇರಿದಂತೆ ಅಕ್ರಮ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 36 ಗಂಟೆಗಳ ಕಾಲ ನಡೆದ ಈ ದಾಳಿಯಲ್ಲಿ ಕೈದಿಗಳು ನಡೆಸುತ್ತಿದ್ದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗಿದೆ.

ಬೆಂಗಳೂರು, ಡಿಸೆಂಬರ್​​ 17: ಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಕರ್ನಾಟಕದ ಜೈಲುಗಳಾದ್ಯಂತ ಭಾರಿ ಕಾರ್ಯಾಚರಣೆ ನಡೆಸಲಾಗಿದ್ದು, ಕೈದಿಗಳಿಂದ ಮೊಬೈಲ್ ಫೋನ್‌ಗಳು, ಶಸ್ತ್ರಾಸ್ತ್ರಗಳು ಮತ್ತು ಇತರ ಅಕ್ರಮ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಸಿದ ವಿಶೇಷ ತಪಾಸಣೆಯಲ್ಲಿ 6 ಮೊಬೈಲ್ ಫೋನ್‌ಗಳು ಮತ್ತು 4 ಚಾಕುಗಳು ಪತ್ತೆಯಾಗಿವೆ. ಮೋಜು ಮಸ್ತಿ ಮಾಡುತ್ತಿದ್ದ ಕೈದಿಗಳಿಗೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಮೈಸೂರು ಜೈಲಿನಲ್ಲಿ 9 ಫೋನ್‌ಗಳು ಮತ್ತು 11 ಸಿಮ್ ಕಾರ್ಡ್‌ಗಳು ಪತ್ತೆಯಾಗಿವೆ. ಬೆಳಗಾವಿ ಜೈಲಿನಲ್ಲಿ 4 ಫೋನ್‌ಗಳು ಮತ್ತು 366 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿ ವೇಳೆ ಆರೋಪಿಗಳು ಗಾಂಜಾವನ್ನು ಹೊರಗೆ ಎಸೆದಿದ್ದರು ಎನ್ನಲಾಗಿದೆ. ಮಂಗಳೂರು ಜೈಲಿನಲ್ಲಿಯೂ 4 ಮೊಬೈಲ್ ಫೋನ್‌ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.