Karnataka legislative assembly session live: 4ನೇ ದಿನಕ್ಕೆ ಕಾಲಿಟ್ಟ ಅಧಿವೇಶನ, ಬಾವಿಗಿಳಿದು ಬಿಜೆಪಿ-ಜೆಡಿಎಸ್ ಧರಣಿ

|

Updated on: Jul 19, 2024 | 1:18 PM

ಕರ್ನಾಟಕ ವಿಧಾನ ಮಂಡಲ ಮುಂಗಾರು ಅಧಿವೇಶನ ಆರಂಭವಾಗಿದ್ದು, ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಮೂರನೇ ದಿನ ಕೂಡ ಸದನ ವಾಲ್ಮೀಕಿ ಹಗರಣ ಚರ್ಚೆಯಲ್ಲೇ ಕಳೆದು ಹೋಯ್ತು. ಹೀಗಾಗಿ ಇಂದಾದರೂ ರಾಜ್ಯದಲ್ಲಿ ಉದ್ಭವಿಸಿರುವ ಸಮಸ್ಯೆಗಳು ಚರ್ಚೆಗೆ ಬರುತ್ತಾವಾ? ಎಂದು ಜನರು ಕಾದು ಕುಳಿತಿದ್ದಾರೆ. ಅಧಿವೇಶನದ ಲೈವ್​ ಇಲ್ಲಿದೆ.

ಕರ್ನಾಟಕ ವಿಧಾನ ಮಂಡಲ ಮುಂಗಾರು ಅಧಿವೇಶನ ಆರಂಭವಾಗಿದ್ದು, ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಮೂರನೇ ದಿನ ಕೂಡ ಸದನ ವಾಲ್ಮೀಕಿ ಹಗರಣ ಚರ್ಚೆಯಲ್ಲೇ ಕಳೆದು ಹೋಯ್ತು. ಮೂರನೇ ದಿನ ಸದನ ಆರಂಭದಲ್ಲಿ ಓರ್ವ ರೈತರಿಗೆ ಅಪಮಾನ ಮಾಡಿದ ಜಿಟಿ ಮಾಲ್ ವಿಚಾರ ಮುನ್ನಲೆಗೆ ಬಂತು. ಈ ಚರ್ಚೆ ವೇಳೆ ಪಕ್ಷಾತೀತವಾಗಿ ಎಲ್ಲ ಶಾಸಕರು ಒಕ್ಕೋರಲಿನಿಂದ ಜಿಟಿ ಮಾಲ್​ ಬಂದ್​ ಮಾಡಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿದರು. ಶಾಸಕರ ಒತ್ತಡಕ್ಕೆ ಮಣಿದ ಸರ್ಕಾರ 7 ದಿನಗಳ ಕಾಲ ಜಿಟಿ ಮಾಲ್​ ಬಂದ್​​ ಮಾಡಿಸುವುದಾಗಿ ಆದೇಶ ಹೊರಡಿಸಿತು. ಇನ್ನೂ ಅನೇಕ ವಿಚಾರಗಳು ಸದನದಲ್ಲಿ ಚರ್ಚೆಯಾದವು.

ದಲಿತ ಪದ ಬಳಕೆ ವಿಚಾರವಾಗಿ ಸದನದಲ್ಲಿ ಭಾರಿ ಹಂಗಾಮ ಸೃಷ್ಟಿಯಾಗಿತ್ತು. ಸಚಿವರ ಗೈರು ಹಾಜರಿಗೆ ವಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಹಾಗೆ ಸಭಾಪತಿ ಯುಟಿ ಖಾದರ್​ ಕೂಡ ಸರ್ಕಾರಕ್ಕೆ ಚಾಟಿ ಬೀಸಿದರು. ಕಾಂಗ್ರೆಸ್ ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ ಎಂದು ವಿಪಕ್ಷಗಳು ಆರೋಪ ಮಾಡಿದವು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ ನಿಮ್ಮದೆಲ್ಲ ಹಗರಣ ಈಗ ಬಯಲಿಗೆ ಎಳೆಯುತ್ತೇನೆ ಎಂದು ಗುಡುಗಿದರು. ಹೀಗೆ ಹತ್ತು ಹಲವು ವಿಚಾರಗಳು ಮೂರನೇ ದಿನ ಸದನದಲ್ಲಿ ಚರ್ಚೆಯಾದವು.

Published on: Jul 19, 2024 10:49 AM