ನಾರ್ತ್ ಇಂಡಿಯಾ ಮಂದಿ ಧ್ರುವ ಸರ್ಜಾಗೆ ಇಟ್ಟ ಹೊಸ ಹೆಸರೇನು?
ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಮಾರ್ಟಿನ್’ ಚಿತ್ರ ಬಿಡುಗಡೆ ಆಗುತ್ತಿದೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ. ಈ ಬಗ್ಗೆ ನಿರ್ಮಾಪಕ ಉದಯ್ ಮೆಹ್ತಾ ಮಾತನಾಡಿದ್ದಾರೆ. ಧ್ರುವ ಸರ್ಜಾ ಅವರಿಗೆ ನಾರ್ತ್ ಇಂಡಿಯಾ ಮಂದಿ ಇಟ್ಟ ಹೆಸರ ಬಗ್ಗೆಯೂ ವಿವರಿಸಿದ್ದಾರೆ.
ಧ್ರುವ ಸರ್ಜಾ ನಟನೆಯ ಸಿನಿಮಾಗಳು ಇಷ್ಟು ದಿನ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದ್ದವು. ಈಗ ಅವರ ನಟನೆಯ ‘ಮಾರ್ಟಿನ್’ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ. ಈ ಬಗ್ಗೆ ನಿರ್ಮಾಪಕ ಉದಯ್ ಮೆಹ್ತಾ ಮಾತನಾಡಿದ್ದಾರೆ. ಧ್ರುವ ಸರ್ಜಾ ಅವರಿಗೆ ನಾರ್ತ್ ಇಂಡಿಯಾ ಮಂದಿ ಇಟ್ಟ ನಿಕ್ ನೇಮ್ ಬಗ್ಗೆಯೂ ವಿವರಿಸಿದ್ದಾರೆ. ‘ನಾರ್ತ್ ಇಂಡಿಯಾದಲ್ಲಿ ಧ್ರುವ ಸರ್ಜಾಗೆ ಇಂಡಿಯನ್ ಹಲ್ಕ್ ಎಂದು ಕರೆಯುತ್ತಿದ್ದಾರೆ. ಅವರನ್ನು ಬಿಟ್ಟು ಯಾರಿಗೂ ಆತರ ಬಾಡಿ ಇಲ್ಲ ಎಂಬುದು ಇದರ ಅರ್ಥ. ಸಿನಿಮಾದಲ್ಲಿ ಧ್ರುವ ಸರ್ಜಾಗೆ ವಿಶೇಷ ಶೇಡ್ಗಳಿವೆ. ಅವರಿಗೆ ಒಟ್ಟೂ ಮೂರು ಶೇಡ್ಗಳು ಬರುತ್ತವೆ. ಬೇರೆ ರೀತಿಯ ಪರ್ಫಾರ್ಮೆನ್ಸ್ ಕೇಳುತ್ತದೆ. ಅದನ್ನು ಉತ್ತಮವಾಗಿ ಧ್ರುವ ನಿಭಾಯಿಸಿದ್ದಾರೆ. ಕ್ಲೈ ಮ್ಯಾಕ್ಸ್ನಲ್ಲಿ ಬರೋ ಆ್ಯಕ್ಷನ್ ದೃಶ್ಯನ 45 ದಿನ ಶೂಟ್ ಮಾಡಿದ್ದೇವೆ. ಇದರ ಜೊತೆ ಟಾಕಿ ಶೂಟ್ ಸೇರಿದರೆ 54 ದಿನ ಆಗುತ್ತದೆ’ ಎಂದಿದ್ದಾರೆ ಉದಯ್ ಮೆಹ್ತಾ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.