Karnataka Legislative Assembly, Live: ವಿಧಾನ ಸಭಾ ಅಧಿವೇಶನ, ಗುರುವಾರದ ಕಾರ್ಯಕಲಾಪಗಳ ನೇರ ಪ್ರಸಾರ

|

Updated on: Jul 20, 2023 | 11:26 AM

ವಿಧಾನ ಸಭೆಯಲ್ಲಿ ನಡೆಯತ್ತಿರುವ ಕಾರ್ಯಕಲಾಪಗಳ ನೇರ ಪ್ರಸಾರ.

ಬೆಂಗಳೂರು: ರಾಜ್ಯ ವಿಧಾನಮಂಡಲ ಬಜೆಟ್ ಅಧಿವೇಶನ (Assembly Session) ಮುಕ್ತಾಯ ಹಂತಕ್ಕೆ ಬಂದಿದ್ದು ಕೊನೆಯ ಎರಡು ದಿನಗಳು ಮಾತ್ರ ಉಳಿದಿವೆ. ವಿಧಾನ ಸಭೆಯಲ್ಲಿ ಇಂದಿನ ಕಾರ್ಯಕಲಾಪಗಳು (proceedings) ಅರಂಭವಾಗಿದೆ. ನಿನ್ನೆ ಅಂದರೆ ಬುಧವಾರ ಸದನದಲ್ಲಿ ಕೋಲಾಹಲ ಉಂಟಾಗಿತ್ತು. ಬಿಜೆಪಿ ಶಾಸಕರು ವಿಧೇಯಕವೊಂದರ ಪ್ರತಿಯನ್ನು ಹರಿದು ಪೀಠದಲ್ಲಿದ್ದ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ (Rudrappa Lamani) ಅವರ ಮೇಲೆ ಎಸೆದ ಬಳಿಕ ಸ್ಪೀಕರ್ ಯುಟಿ ಖಾದರ್ (UT Khader) ಆ ಪಕ್ಷದ 10 ಸದಸ್ಯರನ್ನು ಅಧಿವೇಶ ಮುಗಿಯುವ ಅವಧಿವರೆಗೆ ಅಮಾನತುಗೊಳಿಸಿದರು. ಮುಖ್ಯಮಂತ್ರಿ ಸಿದ್ದಾಮಯ್ಯ ಹೇಳಿಕೆಯೊಂದನ್ನು ನೀಡಿ ಸದನದಲ್ಲಿ ಗೂಂಡಾಗಿರಿ ವರ್ತನೆ ಸಹಿಸಲಾಗದು ಎಂದು ಹೇಳಿದ್ದರು. ಇವತ್ತಿನ ಕಾರ್ಯಕಲಾಪದಲ್ಲಿ ನಿನ್ನೆ ನಡೆದ ಘಟನೆಗಳು ಪ್ರತಿಧ್ವನಿಸಲಿವೆ. ವಿಧಾನ ಸಭೆಯಲ್ಲಿ ನಡೆಯತ್ತಿರುವ ಕಾರ್ಯಕಲಾಪಗಳ ನೇರ ಪ್ರಸಾರ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ