ಬಿರುಗಾಳಿ ಮಳೆಗೆ ಉರುಳಿಬಿದ್ದ 150 ವರ್ಷದ ಹಳೆಯ ಅಶ್ವತ್ಥ ಮರ
ಚಿಕ್ಕಬಳ್ಳಾಫುರ (Chikkaballapur) ತಾಲೂಕಿನ ಅಜ್ಜವಾರ ಗ್ರಾಮದಲ್ಲಿ ಬಿರುಗಾಳಿ ಮಳೆಗೆ 150 ವರ್ಷದ ಹಳೆಯ ಅಶ್ವತ್ಥ ಮರ(Peepal tree) ಉರುಳಿಬಿದ್ದಿದೆ. ಈ ವೇಳೆ ಮರದ ಕೆಳಗೆ ಸಿಲುಕಿದ ಎರಡು ಬೈಕ್ ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟವಶಾತ್ ಬೈಕ್ ಸವಾರ ಬಚಾವ್ ಆಗಿದ್ದಾರೆ.
ಚಿಕ್ಕಬಳ್ಳಾಫುರ, ಮೇ.24: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣನ ಸಿಂಚನವಾಗಿದೆ. ಕೆಲವೆಡೆ ವಾರದಿಂದಲೂ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ. ಇದರಿಂದ ಕೆಲ ಅವಘಡಗಳು ನಡೆದಿದ್ದು, ಅದರಂತೆ ಚಿಕ್ಕಬಳ್ಳಾಫುರ (Chikkaballapur) ತಾಲೂಕಿನ ಅಜ್ಜವಾರ ಗ್ರಾಮದಲ್ಲಿ ಬಿರುಗಾಳಿ ಮಳೆಗೆ 150 ವರ್ಷದ ಹಳೆಯ ಅಶ್ವತ್ಥ ಮರ(Peepal tree) ಉರುಳಿಬಿದ್ದಿದೆ. ಈ ವೇಳೆ ಮರದ ಕೆಳಗೆ ಸಿಲುಕಿದ ಎರಡು ಬೈಕ್ ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟವಶಾತ್ ಬೈಕ್ ಸವಾರ ಬಚಾವ್ ಆಗಿದ್ದಾರೆ.
ಬಿರುಗಾಳಿ ಸಹಿತ ಮಳೆ ಹಿನ್ನಲೆ ಮರದ ಕೆಳಗೆ ಬೈಕ್ ನಿಲ್ಲಿಸಿ ಅಂಗಡಿಯೊಂದರ ಬಳಿ ಬೈಕ್ ಸವಾರರು ಹೋಗಿದ್ದ. ಬಳಿಕ ಬೈಕ್ ಸವಾರರು ಮರದಿಂದ ಸ್ವಲ್ಪ ದೂರ ಬರುತ್ತಿದ್ದಂತೆ ಮರ ಉರುಳಿ ಬಿದ್ದಿದೆ. ಇನ್ನು ಹೆಚ್ಚಾಗಿ ಅಶ್ವತ್ಥ ಮರದ ಕಟ್ಟೆಯ ಮೇಲೆ ದಿನವೂ ಇರುತ್ತಿದ್ದವರು ಮಳೆ ಹಿನ್ನಲೆ ಯಾರು ಇರಲಿಲ್ಲ. ಇತ್ತ ಕೆಲವು ವಿದ್ಯುತ್ ಕಂಬಗಳ ಮೇಲೆ ಮರ ಉರುಳಿ ಬಿದ್ದಿದ್ದರಿಂದ
ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ