Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ನೂ 5-6 ಲಕ್ಷ ರೈತರಿಗೆ ಬರ ಪರಿಹಾರ ನೆರವು ಸಿಕ್ಕಿಲ್ಲ, ಮುಂದಿನ ವಾರದೊಳಗೆ ಅವರಿಗೂ ಸಿಗಲಿದೆ: ಚಲುವರಾಯಸ್ವಾಮಿ

ಇನ್ನೂ 5-6 ಲಕ್ಷ ರೈತರಿಗೆ ಬರ ಪರಿಹಾರ ನೆರವು ಸಿಕ್ಕಿಲ್ಲ, ಮುಂದಿನ ವಾರದೊಳಗೆ ಅವರಿಗೂ ಸಿಗಲಿದೆ: ಚಲುವರಾಯಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: May 24, 2024 | 5:51 PM

ರಾಜ್ಯದ ಎಲ್ಲ 31ಜಿಲ್ಲೆಗಳಲ್ಲಿ ಮೇ ತಿಂಗಳ ಮುಂಗಾರು ಮಳೆ ವಾಡಿಕೆಗಿಂತ ಜಾಸ್ತಿಯಾಗಿದೆ. ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಬಿತ್ತನೆ ಬೀಜ, ಗೊಬ್ಬರ ಯಾವುದಕ್ಕೂ ಕೊರತೆಯಿಲ್ಲ, ರೈತರು ಆತಂಕಪಡುವ ಆವಶ್ಯಕತೆಯಿಲ್ಲ, ಅವರು ಬಿತ್ತುವಷ್ಟು ಬೀಜಗಳನ್ನು ಪೂರೈಸಲಾಗುವುದು ಎಂದು ಸಚಿವ ಹೇಳಿದರು.

ಮಂಡ್ಯ: ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಬರ ಪರಿಹಾರ ಹಣ ಈಗಾಗಲೇ ರೈತರಿಗೆ ವಿತರಿಸಲಾಗಿದೆ, ಆದರೆ, ಕೇಂದ್ರ ಸರ್ಕಾರ (Central Government) ಬರಪರಿಹಾರ ನಿಧಿ ಬಿಡುಗಡೆ ಮಾಡದ ಕಾರಣ ಸುಪ್ರೀಂ ಕೊರ್ಟ್್​ನಲ್ಲಿ ಹೋರಾಟ ನಡೆಸಿ ₹ 3,454ಕೋಟಿ ಪಡೆಯಲಾಗಿದೆ, ಅದನ್ನು 25ಲಕ್ಷ ರೈತರಿಗೆ ಈಗಾಗಲೇ ಹಂಚಲಾಗಿದ್ದು ಇನ್ನೂ 5-6 ಲಕ್ಷ ಜನರಿಗೆ ಸಿಕ್ಕಿಲ್ಲ, ಹಣ ಪಡೆಯದವರ ವಿವರಗಳನ್ನು ಭಾನುವಾರದೊಳಗೆ ಸಿದ್ಧಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಕಂದಾಯ ಸಚಿವ ಕೃಷ್ಣ ಭೈರೇಗೌಡ (Krishna Byre Gowda) ಸೂಚನೆ ನೀಡಿದ್ದಾರೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Cheluvarayaswamy) ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ, ರಾಜ್ಯದ ಎಲ್ಲ 31ಜಿಲ್ಲೆಗಳಲ್ಲಿ ಮೇ ತಿಂಗಳ ಮುಂಗಾರು ಮಳೆ ವಾಡಿಕೆಗಿಂತ ಜಾಸ್ತಿಯಾಗಿದೆ. ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಬಿತ್ತನೆ ಬೀಜ, ಗೊಬ್ಬರ ಯಾವುದಕ್ಕೂ ಕೊರತೆಯಿಲ್ಲ, ರೈತರು ಆತಂಕಪಡುವ ಆವಶ್ಯಕತೆಯಿಲ್ಲ, ಅವರು ಬಿತ್ತುವಷ್ಟು ಬೀಜಗಳನ್ನು ಪೂರೈಸಲಾಗುವುದು ಎಂದು ಹೇಳಿದರು. ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಮರಿತಿಬ್ಬೇಗೌಡರು ಕಳೆದ ನಾಲ್ಕು ಸಲ ಗೆದ್ದಿರುವುದರಿಂದ ಈ ಬಾರಿಯೂ ಶಿಕ್ಷಕರು ಅವರ ಪರವಾಗಿದ್ದಾರೆ, ಅದರೂ ನಮ್ಮ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಚಲುವರಾಯಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ರೇವಣ್ಣ ಪ್ರಕರಣದ ತನಿಖೆ ಮುಕ್ತ ಮತ್ತು ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ: ಎನ್ ಚಲುವರಾಯಸ್ವಾಮಿ