AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಟುಂಬವಾದ ಹಾಸುಹೊಕ್ಕು ನಮ್ಮ ರಾಜಕೀಯ ವ್ಯವಸ್ಥೆ ಹಾಳಾಗಿದೆ: ವಾಟಾಳ್ ನಾಗರಾಜ್

ಕುಟುಂಬವಾದ ಹಾಸುಹೊಕ್ಕು ನಮ್ಮ ರಾಜಕೀಯ ವ್ಯವಸ್ಥೆ ಹಾಳಾಗಿದೆ: ವಾಟಾಳ್ ನಾಗರಾಜ್

ಅರುಣ್​ ಕುಮಾರ್​ ಬೆಳ್ಳಿ
|

Updated on: May 24, 2024 | 4:09 PM

ಕಳ್ಳನನ್ನು ಕಳ್ಳರೇ ಹಿಡಿಯಬೇಕಾದ ಸ್ಥಿತಿ ನಮ್ಮಲ್ಲಿ ಉದ್ಭವಿಸಿದೆ, ಈ ಪ್ರಕರಣ ಬೆಳಕಿಗೆ ಬಂದಾಗ ನಮ್ಮ ರಾಜ್ಯದ ಎಲ್ಲ ಮಂತ್ರಿಗಳು, ಶಾಸಕರು ಮತ್ತು ಸಂಸದರು, ದೇಶದ ಮಾನವನ್ನು ಹರಾಜು ಹಾಕಿದ್ದರ ಹೊಣೆಹೊತ್ತು ರಾಜೀನಾಮೆ ಸಲ್ಲಿಸಬೇಕಿತ್ತು, ಅದರೆ ಅಂಥದನ್ನು ಯೋಚಿಸುವುದು ಸಾಧ್ಯವಿಲ್ಲ, ಪ್ರಸ್ತುತ ವಿದ್ಯಮಾನಗಳನ್ನು ಬದಲಾಯಿಸುವ ತಾಕತ್ತು ಮಾಧ್ಯಮ ಮತ್ತು ಶಿಕ್ಷಕರಿಗಿದೆ ಎಂದು ವಾಟಾಳ್ ನಾಗರಾಜ್ ಹೇಳಿದರು.

ಮಂಡ್ಯ: ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ವಿಧಾನ ಪರಿಷತ್ ಚುನಾವಣೆಯಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ (South Teachers Constituency) ಸ್ಪರ್ಧಿಸುತ್ತಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಅವರು ಇವತ್ತಿನ ರಾಜಕೀಯ ಸ್ಥಿತಿಯನ್ನು ವಿಡಂಬನೆ ಮಾಡುತ್ತಾ ವಿಶ್ಲೇಷಿಸಿದರು. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕುಟುಂಬ ರಾಜಕಾರಣನ (dynastic politics) ಹಾಸುಹೊಕ್ಕಿದೆ, ಮಂತ್ರಿಯಾದವನು ತನ್ನ ಮಗನಿಗೆ ಟಿಕೆಟ್ ಕೇಳುತ್ತಾನೆ, ಶಾಸಕನಾದನು ತನ್ನ ಹೆಂಡತಿಗೆ ಟಿಕೆಟ್ ಕೊಡಿ ಅನ್ನುತ್ತಾನೆ. ಇಡೀ ರಾಜಕೀಯ ವ್ಯವಸ್ಥೆ ಹಾಳಾಗಿ ಹೋಗಿದೆ, ದೇಶ ಮತ್ತು ಜನರ ಬಗ್ಗೆ ಯೋಚನೆ ಮಾಡುವ ರಾಜಕೀಯ ನಾಯಕರ ಸಂಖ್ಯೆ ಕ್ಷೀಣಿಸಿದೆ ಎಂದು ನಾಗರಾಜ್ ಹೇಳಿದರು. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಪರಸ್ಪರ ಕೆಸರೆರಚಾಟಲ್ಲಿ ತೊಡಗಿರುವುದನ್ನು ಅವರ ಗಮನಕ್ಕೆ ತಂದಾಗ, ಎಲ್ಲರೂ ಕಳ್ಳರೇ, ಕಳ್ಳನನ್ನು ಕಳ್ಳರೇ ಹಿಡಿಯಬೇಕಾದ ಸ್ಥಿತಿ ನಮ್ಮಲ್ಲಿ ಉದ್ಭವಿಸಿದೆ, ಈ ಪ್ರಕರಣ ಬೆಳಕಿಗೆ ಬಂದಾಗ ನಮ್ಮ ರಾಜ್ಯದ ಎಲ್ಲ ಮಂತ್ರಿಗಳು, ಶಾಸಕರು ಮತ್ತು ಸಂಸದರು, ದೇಶದ ಮಾನವನ್ನು ಹರಾಜು ಹಾಕಿದ್ದರ ಹೊಣೆಹೊತ್ತು ರಾಜೀನಾಮೆ ಸಲ್ಲಿಸಬೇಕಿತ್ತು, ಅದರೆ ಅಂಥದನ್ನು ಯೋಚಿಸುವುದು ಸಾಧ್ಯವಿಲ್ಲ, ಪ್ರಸ್ತುತ ವಿದ್ಯಮಾನಗಳನ್ನು ಬದಲಾಯಿಸುವ ತಾಕತ್ತು ಮಾಧ್ಯಮ ಮತ್ತು ಶಿಕ್ಷಕರಿಗಿದೆ ಎಂದು ವಾಟಾಳ್ ನಾಗರಾಜ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ತಮಿಳುನಾಡಿಗೆ ಕಾವೇರಿ ನೀರು; ಬೆಂಗಳೂರಿನಲ್ಲಿರುವ ತಮಿಳರ ವಾಪಸ್ ಕರೆಸಿಕೊಳ್ಳಿ, ಸ್ಟಾಲಿನ್​ಗೆ ವಾಟಾಳ್ ನಾಗರಾಜ್ ಆಗ್ರಹ