ಬೆಂಗಳೂರು: ಕಾರ್ಮಿಕನನ್ನು ಮೆಟ್ರೋದೊಳಗೆ ಬಿಡದೆ ಅವಮಾನಿಸಿದ ಸಿಬ್ಬಂದಿ

|

Updated on: Apr 09, 2024 | 12:33 PM

ಇದೀಗ ಬಟ್ಟೆ ಸರಿಯಿಲ್ಲ ಅಂತ ನಮ್ಮ ಮೊಟ್ರೋ ಸಿಬ್ಬಂದಿ ಕಾರ್ಮಿಕನನ್ನು ತಡೆದು ನಿಲ್ಲಿಸಿ ಅಪಮಾನಿಸಿದ ಘಟನೆ ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಶರ್ಟ್​​ನ​​ ಗುಂಡಿಯನ್ನ ಹಾಕಿಕೊಂಡು ನೀಟಾಗಿ ಬಾ, ಇಲ್ಲದಿದ್ದರೆ ಒಳಗೆ ಪ್ರವೇಶವಿಲ್ಲ ಎಂದು ಮೆಟ್ರೋ ಸಿಬ್ಬಂದಿ ಕಾರ್ಮಿಕನಿಗೆ ಹೇಳಿದ್ದಾರೆ.

ಬೆಂಗಳೂರು, ಏಪ್ರಿಲ್​ 09: ರೈತನ ಬಟ್ಟೆ ಕೊಳೆಯಾಗಿದೆ ಅಂತ ಇತ್ತೀಚೆಗಷ್ಟೇ ಸಿಬ್ಬಂದಿ ನಮ್ಮ ಮೆಟ್ರೋದೊಳಗೆ (Namma Metro) ಬಿಡದೆ ತಡೆದಿದ್ದರು. ಇದರ ಬೆನ್ನಲ್ಲೇ ಇದೀಗ ಬಟ್ಟೆ ಸರಿಯಿಲ್ಲ ಅಂತ ಮೊಟ್ರೋ ಸಿಬ್ಬಂದಿ ಕಾರ್ಮಿಕನನ್ನು ತಡೆದು ನಿಲ್ಲಿಸಿ ಅಪಮಾನಿಸಿದ ಘಟನೆ ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ (Doddakallasandra metro Station) ನಡೆದಿದೆ. ಶರ್ಟ್​​ನ​​ ಗುಂಡಿಯನ್ನ ಹಾಕಿಕೊಂಡು ನೀಟಾಗಿ ಬಾ, ಇಲ್ಲದಿದ್ದರೆ ಒಳಗೆ ಪ್ರವೇಶವಿಲ್ಲ ಎಂದು ಮೆಟ್ರೋ ಸಿಬ್ಬಂದಿ ಕಾರ್ಮಿಕನಿಗೆ ಹೇಳಿದ್ದಾರೆ. ಇದನ್ನು ಕಂಡ ಜನರು ಮೆಟ್ರೋ ಸಿಬ್ಬಂದಿ ವರ್ತನೆಗೆ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತನನ್ನು ಮೆಟ್ರೋದೊಳಗೆ ಬಿಡದ ಸಿಬ್ಬಂದಿ

ಇತ್ತೀಚಿಗೆ ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಸಿಬ್ಬಂದಿ ರೈತನನ್ನ ಅವಮಾನಿಸಿದ್ದರು. ಬಟ್ಟೆ ಸ್ವಚ್ಛವಾಗಿಲ್ಲ ಎಂಬ ಕಾರಣಕ್ಕೆ ರೈತನನ್ನು ಮೆಟ್ರೋ ಒಳಗೆ ಬಿಡದೆ ಸಿಬ್ಬಂದಿ ಅವಮಾನ ಮಾಡಿದ್ದರು. ಇದು ಸಹ ಪ್ರಯಾಣಿಕನ ಮೊಬೈಲ್‌ನಲ್ಲಿ ಸೆರೆಯಾಗಿತ್ತು. ರೈತನನ್ನು ಒಳಗೆ ಬಿಡದ ಸಿಬ್ಬಂದಿ ವಿರುದ್ಧ ಸಹ ಪ್ರಯಾಣಿಕರು ಕಿಡಿಕಾರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Apr 09, 2024 12:31 PM