ಕುಮಾರಸ್ವಾಮಿ ಅತ್ತಿದ್ದಾಯ್ತಲ್ಲ, ಅವರ ಕಾಮೆಂಟ್​ಗೆ ಹಬ್ಬದ ನಂತರ ಉತ್ತರಿಸುವೆ: ಡಿಕೆ ಸುರೇಶ್

ಕುಮಾರಸ್ವಾಮಿ ಅತ್ತಿದ್ದಾಯ್ತಲ್ಲ, ಅವರ ಕಾಮೆಂಟ್​ಗೆ ಹಬ್ಬದ ನಂತರ ಉತ್ತರಿಸುವೆ: ಡಿಕೆ ಸುರೇಶ್

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 09, 2024 | 12:50 PM

ಇದೇ ವಿಡಿಯೋದಲ್ಲಿ ಶಿವಕುಮಾರ್ ಅವರು ಸುರೇಶ್ ಜೊತೆ ತಮ್ಮ ಕಾರಲ್ಲಿ ತಮಿಳುನಾಡು ರಾಜ್ಯದ ತಿರುನಲ್ಲರ್ ಶನೈಶ್ವರ ದೇವಸ್ಥಾನಕ್ಕೆ ತೆರಳುವುದನ್ನು ನೋಡಬಹುದು. ಚುನಾವಣಾ ಪ್ರಯುಕ್ತ ಎಲ್ಲ ಪಕ್ಷಗಳ ನಾಯಕರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂದು ಸಾಯಂಕಾಲದ ಹೊತ್ತಿಗೆ ಶಿವಕುಮಾರ್ ನಗರಕ್ಕೆ ವಾಪಸ್ಸಾಗಲಿದ್ದಾರೆಂದು ಹೇಳಲಾಗಿದೆ.

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಗ್ಗೆ ಭಾವನಾತ್ಮಕವಾಗಿ ಮಾತಾಡುವುದನ್ನು ಮುಂದುವರಿಸಿದ್ದಾರೆ. ನಿನ್ನೆ ಸಭೆಯೊಂದರಲ್ಲಿ ಅವರು ರಾಮನಗರದ ಜೊತೆ ತನಗೆ ದಶಕಗಳಿಂದ ಅವಿನಾಭಾವ ಸಂಬಂಧವಿದೆ, ತಾಯಿ ಮಗುವಿನ ಹಾಗೆ ತಮ್ಮ ಮತ್ತು ರಾಮನಗರದ ಸಂಬಂಧವಿದೆ ಅಂತ ಹೇಳಿದ್ದರು. ಅವರು ಹೇಳಿದ್ದನ್ನು ಇಂದು ಡಿಕೆ ಶಿವಕುಮಾರ್ (DK Shivakumar) ನಿವಾಸದಲ್ಲಿದ್ದ ಅವರ ಸಹೋದರ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ (DK Suresh) ಅವರಿಗೆ ತಿಳಿಸಿದಾಗ, ಅತ್ತಿದ್ದೆಲ್ಲ ಆಯ್ತುಲ್ಲ? ಇವತ್ತು ಹಬ್ಬದ ಕಾರಣ ಕಾಮೆಂಟ್ ಗಳನ್ನು ಮಾಡೋದು ಬೇಡ, ಹಬ್ಬ ಮುಗಿಯಲಿ ಹೇಳ್ತೀನಿ ಅಂತ ಧಾವಂತದಲ್ಲಿ ಹೇಳಿದರು. ಇದೇ ವಿಡಿಯೋದಲ್ಲಿ ಶಿವಕುಮಾರ್ ಅವರು ಸುರೇಶ್ ಜೊತೆ ತಮ್ಮ ಕಾರಲ್ಲಿ ತಮಿಳುನಾಡು ರಾಜ್ಯದ ತಿರುನಲ್ಲರ್ ಶನೈಶ್ವರ ದೇವಸ್ಥಾನಕ್ಕೆ ತೆರಳುವುದನ್ನು ನೋಡಬಹುದು. ಚುನಾವಣಾ ಪ್ರಯುಕ್ತ ಎಲ್ಲ ಪಕ್ಷಗಳ ನಾಯಕರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂದು ಸಾಯಂಕಾಲದ ಹೊತ್ತಿಗೆ ಶಿವಕುಮಾರ್ ನಗರಕ್ಕೆ ವಾಪಸ್ಸಾಗಲಿದ್ದಾರೆಂದು ಹೇಳಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ತಮ್ಮನ್ನು 2-3 ಬಾರಿ ಆರಿಸಿ ಕಳಿಸಿದರೂ ಜನರಿಗೆ ಕೃತಜ್ಞತೆ ಸಲ್ಲಿಸುವ ಕೆಲಸ ದೇವೇಗೌಡರ ಕುಟುಂಬ ಮಾಡಲಿಲ್ಲ: ಡಿಕೆ ಸುರೇಶ್