ಫಯಾಜ್​ಗೆ ಗಲ್ಲು ಶಿಕ್ಷೆಯಾಗಬೇಕೆಂದು ಅಮಿತ್​ ಶಾಗೆ ಮನವಿ ಸಲ್ಲಿಸಿದ ನೇಹಾ ಪೋಷಕರು

| Updated By: ಕಿರಣ್ ಹನುಮಂತ್​ ಮಾದಾರ್

Updated on: May 01, 2024 | 9:25 PM

ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಫಯಾಜ್​ನನ್ನು ಇದೀಗ ನ್ಯಾಯಾಲಯಕ್ಕೆ ಕಳುಹಿಸಲಾಗಿದೆ. ಅದರಂತೆ ಇಂದು(ಮೇ.01) ಹುಬ್ಬಳ್ಳಿ(Hubli)ಯ ನೆಹರು ಮೈದಾನದಲ್ಲಿ ಗೃಹ ಸಚಿವ ಅಮಿತ್ ಶಾ(Amit Shah) ರನ್ನು ನಿರಂಜನ್​ ಹಿರೇಮಠ ಕುಟುಂಬ ಭೇಟಿ ಮಾಡಿದೆ.

ಹುಬ್ಬಳ್ಳಿ, ಮೇ.01: ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಫಯಾಜ್​ನನ್ನು ಇದೀಗ ನ್ಯಾಯಾಲಯಕ್ಕೆ ಕಳುಹಿಸಲಾಗಿದೆ. ಅದರಂತೆ ಇಂದು(ಮೇ.01) ಹುಬ್ಬಳ್ಳಿ(Hubli)ಯ ನೆಹರು ಮೈದಾನದಲ್ಲಿ ಗೃಹ ಸಚಿವ ಅಮಿತ್ ಶಾ(Amit Shah) ರನ್ನು ನಿರಂಜನ್​ ಹಿರೇಮಠ ಕುಟುಂಬ ಭೇಟಿ ಮಾಡಿದೆ. ಬಳಿಕ ಮಾತನಾಡಿದ ನೇಹಾ ತಂದೆ ​, ‘ಅಮಿತ್ ಶಾ ಜತೆ 10 ನಿಮಿಷ ಮಾತನಾಡಿದ್ದೇವೆ, ಹಾಡಹಗಲೇ ಕಾಲೇಜು ಆವರಣದಲ್ಲಿ ನೇಹಾ ಬರ್ಬರ ಹತ್ಯೆಯಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ನಿರ್ಭಯಾ ಕಾಯ್ದೆಯಂತೆ ನೇಹಾ ಕಾಯ್ದೆ ತಂದು ನೇಹಾ ಹಂತಕ ಫಯಾಜ್​ಗೆ 90 ದಿನದಲ್ಲಿ ಗಲ್ಲು ಶಿಕ್ಷೆಯಾಗಬೇಕೆಂದು ಮನವಿ ಸಲ್ಲಿಸಿದ್ದೇನೆ. ಜೊತೆಗೆ ಫಾಸ್ಟ್​ಟ್ರ್ಯಾಕ್ ಕೋರ್ಟ್​ನಲ್ಲಿ ಪ್ರಕರಣದ ವಿಚಾರಣೆ ನಡೆಯಬೇಕು. ಬೇರೆ ಹೆಣ್ಣುಮಕ್ಕಳಿಗೆ ಇಂತಹ ಅನ್ಯಾಯವಾಗದಂತೆ ಕ್ರಮಕ್ಕೆಒತ್ತಾಯಿಸಿದ್ದೇನೆ ಎಂದರು.

ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾ

ಇನ್ನು ನಮ್ಮ ಮಗಳ ಹತ್ಯೆ ಪ್ರಕರಣದಲ್ಲಿ ಅಮಿತ್ ಶಾ ಬಹಳಷ್ಟು ಗಂಭೀರವಾಗಿದ್ದಾರೆ. ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಧೈರ್ಯ ಹೇಳಿದರು. ಕೊಲೆ ಆರೋಪಿಗೆ ಉಗ್ರ ಶಿಕ್ಷೆಯಾಗುವ ನಿಟ್ಟಿನಲ್ಲಿ ವಿಶೇಷ ಕಾಯ್ದೆ ತರಲು ಮನವಿ ಮಾಡಿದ್ದೆವೆ. ಈ ಬಗ್ಗೆ ಮನವಿ ಪತ್ರ ನೀಡಿದ್ದೆವೆ. ನಮ್ಮ ಮನವಿಗೆ ಶಾ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:24 pm, Wed, 1 May 24

Follow us on