ಲೋಕಸಭೆ ಚುನಾವಣೆ 2024: ಖುದ್ದು ಫೀಲ್ಡ್​ಗೆ ಇಳಿದು ಚೆಕ್​​ಪೋಸ್ಟ್​​ಗಳಲ್ಲಿ ಪರಿಶೀಲನೆ ನಡೆಸಿದ ಎಸ್​ಪಿ, ಡಿಸಿ

ಲೋಕಸಭೆ ಚುನಾವಣೆ 2024: ಖುದ್ದು ಫೀಲ್ಡ್​ಗೆ ಇಳಿದು ಚೆಕ್​​ಪೋಸ್ಟ್​​ಗಳಲ್ಲಿ ಪರಿಶೀಲನೆ ನಡೆಸಿದ ಎಸ್​ಪಿ, ಡಿಸಿ

ವಿವೇಕ ಬಿರಾದಾರ
|

Updated on: Apr 06, 2024 | 11:47 AM

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಅಂಚೆಪಾಳ್ಯ ಚೆಕ್​ಪೋಸ್ಟ್​​ಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್​​ ಹಾಗೂ ಎಸ್​​ಪಿ ಅಶೋಕ್​​ ಕೆವಿ ಭೇಟಿ ನೀಡಿ ಖುದ್ದು ಕಾರು ಹಾಗೂ ಕೆಎಸ್ಆರ್​​ಟಿಸಿ ಬಸ್​ಗಳನ್ನು ತಪಾಸಣೆ ನಡೆಸಿದರು. ಪ್ರತಿಯೊಂದು ವಾಹನಗಳನ್ನು ತಪ್ಪದೆ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಲೋಕಸಭಾ ಚುನಾವಣಾ (Lok Sabha Election) ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಚುನಾವಣಾ ಅಕ್ರಮಕ್ಕೆ ಬ್ರೇಕ್​ ಹಾಕಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಚೆಕ್​​ಪೋಸ್ಟ್​​ ಹಾಕಲಾಗಿದೆ. ತುಮಕೂರು (Tumakur) ಜಿಲ್ಲೆಯ ಕುಣಿಗಲ್ (Kunigal) ತಾಲೂಕಿನ ಅಂಚೆಪಾಳ್ಯ ಚೆಕ್​ಪೋಸ್ಟ್​​ಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್​​ ಹಾಗೂ ಎಸ್​​ಪಿ ಅಶೋಕ್​​ ಕೆವಿ ಭೇಟಿ ನೀಡಿ ಖುದ್ದು ವಾಹನಗಳನ್ನು ಪರಿಶೀಲಿಸಿದರು. ಕಾರು ಹಾಗೂ ಕೆಎಸ್ಆರ್​​ಟಿಸಿ ಬಸ್​ಗಳನ್ನು ತಪಾಸಣೆ ನಡೆಸಿದರು. ಬಳಿಕ ಪ್ರತಿಯೊಂದು ವಾಹನಗಳನ್ನು ತಪ್ಪದೆ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಾಗಲಕೋಟೆ ಜಿಲ್ಲೆಯ ವಿವಿಧೆಡೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3.90 ಲಕ್ಷ ಹಣವನ್ನು ಜಪ್ತಿ ಮಾಡಲಾಗಿದೆ. ಬಾದಾಮಿ ತಾಲೂಕಿನ ಜಾಲಿಹಾಳ ಚೆಕ್​ಪೋಸ್ಟ್​ ಒಂದರಲ್ಲೇ 2.90 ಲಕ್ಷ ರೂ. ಮತ್ತು ಬೂದನಗುಡ್ಡ ರೋಡ್ ಚೆಕ್​ಪೋಸ್ಟ್​ನಲ್ಲಿ 1 ಲಕ್ಚ ರೂ. ಅನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು. ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಕೊಂಡಿಕೊಪ್ಪ ಚೆಕ್​ಪೋಸ್ಟ್​ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 16 ಲಕ್ಷ ಮೌಲ್ಯದ 1,536 ರೇಷ್ಮೆ ಸೀರೆಗಳು ಅಧಿಕಾರಿಗಳು ಜಪ್ತಿ ಮಾಡಿದ್ದರು. ಹುಬ್ಬಳ್ಳಿ ವಾಣಿಜ್ಯ ತೆರಿಗೆ ಜಾರಿ ವಿಭಾಗದ ಜಂಟಿ ಆಯುಕ್ತ ರವಿಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ