AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೀಕರ ಬರದಿಂದ ಬತ್ತಿದ ಭತ್ತದ ನಾಡು, ರೈಸ್ ಮಿಲ್​ಗಳಿಗೆ ಬರುತ್ತಿಲ್ಲ ಭತ್ತ: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ

ಭೀಕರ ಬರದಿಂದ ಬತ್ತಿದ ಭತ್ತದ ನಾಡು, ರೈಸ್ ಮಿಲ್​ಗಳಿಗೆ ಬರುತ್ತಿಲ್ಲ ಭತ್ತ: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ

ಶಿವಕುಮಾರ್ ಪತ್ತಾರ್
| Edited By: |

Updated on: Oct 24, 2026 | 4:13 PM

Share

ಭತ್ತದ ನಾಡು ಕೊಪ್ಪಳದಲ್ಲಿ ಅಕ್ಕಿ ದರ ಗಗನಕ್ಕೇರಿದೆ. ಬರಗಾಲ ಮತ್ತು ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆಯಿಂದ ಭತ್ತದ ಉತ್ಪಾದನೆ ಕುಸಿದಿದೆ. ಸೋನಾ ಮಸೂರಿ ಸೇರಿದಂತೆ ಪ್ರಮುಖ ತಳಿಗಳ ಅಕ್ಕಿ ಬೆಲೆ ಕ್ವಿಂಟಾಲ್‌ಗೆ 2,000-2,500 ರೂ. ಹೆಚ್ಚಾಗಿದ್ದು, ಗ್ರಾಹಕರು ಹಾಗೂ ರೈಸ್‌ಮಿಲ್‌ಗಳಿಗೆ ತೀವ್ರ ತೊಂದರೆಯಾಗಿದೆ. ಇದು ರಾಜ್ಯಾದ್ಯಂತ ಅಕ್ಕಿ ದರ ಏರಿಕೆಗೂ ಕಾರಣವಾಗುತ್ತಿದೆ.

ಕೊಪ್ಪಳ, ಅಕ್ಟೋಬರ್ 24: ಕರ್ನಾಟಕದ ಭತ್ತದ ಕಣಜ ಎಂದು ಕರೆಸಿಕೊಳ್ಳುವ ಕೊಪ್ಪಳ ಜಿಲ್ಲೆಯ ಗಂಗಾವತಿ ಪ್ರದೇಶದಲ್ಲಿ ಅಕ್ಕಿ ದರದಲ್ಲಿ ತೀವ್ರ ಏರಿಕೆಯಾಗಿದೆ. ಕಳೆದ 15 ದಿನಗಳಿಂದ ಒಂದು ತಿಂಗಳ ಅವಧಿಯಲ್ಲಿ, ಸೋನಾ ಮಸೂರಿ, ಆರ್‍ಎನ್‍ಆರ್, ಮತ್ತು ಕೋಲಂ ಅಕ್ಕಿ ತಳಿಗಳ ಬೆಲೆ ಕ್ವಿಂಟಾಲ್‌ಗೆ 2,000 ರಿಂದ 2,500 ರೂಪಾಯಿಗಳಷ್ಟು ಹೆಚ್ಚಳವಾಗಿದೆ. ಒಂದು ತಿಂಗಳ ಹಿಂದೆ 7,500 ರೂ. ಇದ್ದ ಸೋನಾ ಮಸೂರಿ ಬೆಲೆ ಈಗ 9,000 ದಿಂದ 9,500 ರೂ. ತಲುಪಿದೆ. ಪರಿಣಾಮವಾಗಿ ಕರ್ನಾಟಕದ ಇತರ ಭಾಗಗಳಲ್ಲೂ ಅಕ್ಕಿ ದರ ಗಣನೀಯವಾಗಿ ಏರಿಕೆಯಾಗುತ್ತಿದೆ.

ಈ ಅನಿರೀಕ್ಷಿತ ಬೆಲೆ ಏರಿಕೆಗೆ ಪ್ರಮುಖ ಕಾರಣ ರಾಜ್ಯದಲ್ಲಿ ಆವರಿಸಿರುವ ಭೀಕರ ಬರಗಾಲ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಕೊರತೆಯಿಂದಾಗಿ ಭತ್ತದ ಉತ್ಪಾದನೆ ಕುಸಿದಿದೆ. ತುಂಗಭದ್ರಾ ಜಲಾಶಯದಲ್ಲಿ ಸಮರ್ಪಕ ನೀರು ಸಂಗ್ರಹವಾಗದಿರುವುದರಿಂದ, ಮುಂಗಾರು ಬೆಳೆ ಸಿಗುವುದೇ ಅನುಮಾನವಾಗಿದೆ. ಎರಡನೇ ಬೆಳೆ ಬೆಳೆಯಲು ಸಹ ರೈತರಿಗೆ ಸಾಧ್ಯವಾಗುತ್ತಿಲ್ಲ. ಭತ್ತದ ಕೊರತೆಯಿಂದಾಗಿ ಗಂಗಾವತಿ ಪ್ರದೇಶದ ಅನೇಕ ರೈಸ್‌ಮಿಲ್‌ಗಳು ಬಂದ್ ಆಗಿವೆ. ನೆರೆಯ ರಾಜ್ಯಗಳಿಂದಲೂ ಭತ್ತ ಪೂರೈಕೆ ಕಡಿಮೆಯಾಗಿದೆ. ಇದು ದಿನನಿತ್ಯದ ಅಗತ್ಯವಸ್ತು ಅಕ್ಕಿಯ ಬೆಲೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಶಿವಕುಮಾರ್ ಪತ್ತಾರ್
ಶಿವಕುಮಾರ್ ಪತ್ತಾರ್

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More