ಉಡುಪಿ, ತಿರುಪತಿ ಟ್ರಸ್ಟ್​​ಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ

Updated on: Apr 18, 2025 | 5:59 PM

ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ (Waqf Amendment Act) ವಿರುದ್ದ ಮುಸ್ಲಿಂ ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸುತ್ತಿವೆ. ಇತ್ತ ಕರ್ನಾಟಕದಲ್ಲೂ ಸಹ ಪ್ರತಿಭಟನೆಗಳು ನಡೆದಿವೆ. ಮಂಗಳೂರಿನಲ್ಲಿ (Mangaluru) ಮುಸ್ಲಿಂ ಸಂಘಟನೆಗಳಿಂದ (Muslim organizations) ಭಾರೀ ಪ್ರತಿಭಟನೆ (protest) ನಡೆದಿದೆ. ಇನ್ನು ಈ ಬಗ್ಗೆ ಹಿರಿಯ ರಾಜಕಾರಣಿ ಸಿ.ಎಂ. ಇಬ್ರಾಹಿಂ ಮಾತನಾಡಿದ್ದು, ಏನೆಲ್ಲಾ ಹೇಳಿದ್ದಾರೆ ಎನ್ನುವುದು ಇಲ್ಲಿದೆ.

ಬೆಂಗಳೂರು, (ಏಪ್ರಿಲ್ 18): ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ (Waqf Amendment Act) ವಿರುದ್ದ ಮುಸ್ಲಿಂ ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸುತ್ತಿವೆ. ಈ ಸಂಬಂಧ ಸುಪ್ರೀಂಕೋರ್ಟ್​ ಮೆಟ್ಟಿಲೇರಿದೆ. ಆದರೆ, ವಕ್ಫ್ (ತಿದ್ದುಪಡಿ) ಕಾಯ್ದೆ 2025ಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ವಕ್ಫ್ ಬೋರ್ಡ್ ಗಳು, ಕೇಂದ್ರ ಸರ್ಕಾರ ಹಾಗೂ ಅರ್ಜಿದಾರರಿಗೆ ಪ್ರತಿಕ್ರಿಯೆ ಗಳನ್ನು ಏಳು ದಿನಗಳಲ್ಲಿ ತಿಳಿಸುವಂತೆ ಸೂಚನೆ ನೀಡಿ ಮುಂದಿನ ವಿಚಾರಣೆಯನ್ನು ಮೇ 5ಕ್ಕೆ ಮುಂದೂಡಿದೆ. ಇತ್ತ ಕರ್ನಾಟಕದಲ್ಲೂ ಸಹ ಪ್ರತಿಭಟನೆಗಳು ನಡೆದಿವೆ. ಇನ್ನು ಈ ಬಗ್ಗೆ ಹಿರಿಯ ರಾಜಕಾರಣಿ ಸಿ.ಎಂ. ಇಬ್ರಾಹಿಂ ಮಾತನಾಡಿದ್ದು, ವಕ್ಫ್​ ಬೋರ್ಡ್​ನಲ್ಲಿ ಅನ್ಯ ಜಾತಿಯವರನ್ನು ಸದಸ್ಯರನ್ನಾಗಿ ಮಾಡಲು ಹೊರಟ್ಟಿದ್ದಾರೆ. ಹಾಗಾದ್ರೆ, ಉಡುಪಿ ಮಟದಲ್ಲಿ ಹಾಗೂ ತಿರುಪತಿ ಟ್ರಸ್ಟ್​ನಲ್ಲಿ ಮುಸ್ಲಿಮರನ್ನು ಹಾಕ್ತೀರಾ ಎಂದು ಪ್ರಶ್ನಿಸಿದ್ದಾರೆ.