ರಾಜ್ಯದ ಎಲ್ಲ ಯೋಜನೆಗಳ ಹರಿಕಾರ ಕುಮಾರಸ್ವಾಮಿ, ನಾವು ಅವರ ಕೃಪೆಯಲ್ಲಿ ಬದುಕುತ್ತಿದ್ದೇವೆ: ರಮೇಶ ಕುಮಾರ, ಮಾಜಿ ಸ್ಪೀಕರ್
ಕೆ ಆರ್ ಎಸ್, ಎತ್ತಿನ ಹೊಳೆ, ಎಚ್ ಎಮ್ ಟಿ, ಎಚ್ ಎ ಎಲ್, ಕೆ ಸಿ ವ್ಯಾಲಿ ಸೇರಿದಂತೆ ಎಲ್ಲ ಯೋಜನೆಗಳು ಅವರವೇ, ನಾವೆಲ್ಲ ಅವರು ಕೃಪೆಯಲ್ಲಿ ಬದುಕುತ್ತಿದ್ದೇವೆ ಎಂದು ರಮೇಶ್ ಕುಮಾರ್ ಹೇಳಿದರು.
ಕೋಲಾರ: ವರಮಹಾಲಕ್ಷ್ಮಿ ಹಬ್ಬದ ದಿನದಂದು ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಮಾಜಿ ಸ್ಪೀಕರ್ ಮತ್ತು ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ (Ramesh Kumar) ಅವರು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ತಾವೇ ರಾಜ್ಯದಲ್ಲಿ ಬಹಳಷ್ಟು ಯೋಜನೆಗಳನ್ನು ಜಾರಿಮಾಡಿದ್ದು ಅಂತ ಹೇಳಿರುವ ಮಾತಿಗೆ ಪ್ರತಿಕ್ರಿಯಿಸುತ್ತಾ ವಂಗ್ಯವಾಡಿದರು. ಕೆ ಆರ್ ಎಸ್, ಎತ್ತಿನ ಹೊಳೆ, ಎಚ್ ಎಮ್ ಟಿ, ಎಚ್ ಎ ಎಲ್, ಕೆ ಸಿ ವ್ಯಾಲಿ ಸೇರಿದಂತೆ ಎಲ್ಲ ಯೋಜನೆಗಳು ಅವರವೇ, ನಾವೆಲ್ಲ ಅವರು ಕೃಪೆಯಲ್ಲಿ ಬದುಕುತ್ತಿದ್ದೇವೆ ಎಂದರು.