ವರಮಹಾಲಕ್ಷ್ಮಿ ಹಬ್ಬದಂದು ಹುಟ್ಟಿದ ಮಗಳಿಗೆ ಕೊಪ್ಪಳದ ದಂಪತಿ ಸುಷ್ಮಾ ಸ್ವರಾಜ್ ಅಂತ ಹೆಸರಿಡಲು ಬಯಸಿದ್ದಾರೆ

ವರಮಹಾಲಕ್ಷ್ಮಿ ಹಬ್ಬದಂದು ಹುಟ್ಟಿದ ಮಗಳಿಗೆ ಕೊಪ್ಪಳದ ದಂಪತಿ ಸುಷ್ಮಾ ಸ್ವರಾಜ್ ಅಂತ ಹೆಸರಿಡಲು ಬಯಸಿದ್ದಾರೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 06, 2022 | 10:49 AM

ದೇವರಾಜ್ ಹೆಸರಿನ ಅವರಿಗೆ ವರಮಹಾಲಕ್ಷ್ಮಿ ಹಬ್ಬದ ದಿನದಂದು ಹೆಣ್ಣುಮಗುವಾಗಿದ್ದು ಅದಕ್ಕೆ ಸುಷ್ಮಾ ಅವರ ನಿಶ್ಚಯವನ್ನು ಮಾಡಿಕೊಂಡಿದ್ದಾರೆ

ಕೊಪ್ಪಳ ಜಿಲ್ಲೆಯ ಮೈಲಾಪುರದಲ್ಲಿ ದಿವಂಗತ ಬಿಜೆಪಿ ನಾಯಕಿ ಮತ್ತು ಕೇಂದ್ರದಲ್ಲಿ ಸಚಿವರಾಗಿದ್ದ ಸುಷ್ಮಾ ಸ್ವರಾಜ್ (late Sushma Swaraj) ಅವರ ಕಟ್ಟಾ ಅಭಿಮಾನಿಯೊಬ್ಬರಿದ್ದಾರೆ. ದೇವರಾಜ್ (Devraj) ಹೆಸರಿನ ಬಿಜೆಪಿ ಕಾರ್ಯಕರ್ತನಿಗೆ ವರಮಹಾಲಕ್ಷ್ಮಿ ಹಬ್ಬದ ದಿನದಂದು ಹೆಣ್ಣುಮಗುವಾಗಿದ್ದು (baby girl) ಅದಕ್ಕೆ ಸುಷ್ಮಾ ಅವರ ನಿಶ್ಚಯವನ್ನು ಮಾಡಿಕೊಂಡಿದ್ದಾರೆ. ಸುಷ್ಮಾ ಸ್ವರಾಜ್ ಅವರ ಮಾನಸಪುತ್ರರೆನಿಸಿಕೊಂಡಿದ್ದ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಮತ್ತು ಹಾಲಿ ಸಾರಿಗೆ ಸಚಿವ ಬಿ ಶ್ರೀರಾಮುಲು ಅವರೇ ಆಗಮಿಸಿ ತಮ್ಮ ಮಗಳಿಗೆ ನಾಮಕರಣ ಮಾಡಬೇಕು ಅಂತ ಅವರು ಬಯಸಿದ್ದಾರೆ.