ಎದೆ ಝಲ್ ಎನ್ನುವ ದೃಶ್ಯ: ಪ್ರಯಾಣಿಕರ ಜೀವದೊಂದಿಗೆ ಸರ್ಕಾರಿ ಬಸ್ ಚಾಲಕನ ಚೆಲ್ಲಾಟ
ಡೋಣಿ ನದಿ ಪ್ರವಾಹದಿಂದ ದೇವರಹಿಪ್ಪರಗಿ ತಾಲೂಕಿನ ಸಾತಿಹಾಳ ಬಳಿ ಸೇತುವೆ ಜಲಾವೃತವಾಗಿದೆ. ಸೇತುವೆ ಮೇಲೆ 2 ಅಡಿಯಷ್ಟು ನೀರು ಹರಿಯುತ್ತಿದ್ದು, ದೇವರಹಿಪ್ಪರಗಿ-ಬಸವನಬಾಗೇವಾಡಿ ಹೆದ್ದಾರಿ ಬಂದ್ ಆಗಿದೆ.
ವಿಜಯಪುರ: ಅಪಾಯ ಲೆಕ್ಕಿಸದೇ ಜಲಾವೃತವಾದ ಸೇತುವೆ ಮೇಲೆ ಚಾಲಕ ಸರ್ಕಾರಿ ಬಸ್ ಚಲಾಯಿಸಿರುವಂತಹ ಘಟನೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಸಾತಿಹಾಳ ಗ್ರಾಮದಲ್ಲಿ ಕಂಡುಬಂದಿದೆ. ಡೋಣಿ ಪ್ರವಾಹದಲ್ಲಿ ಮುಳುಗಡೆಯಾಗಿ ಸೇತುವೆ ತುಂಬಿ ಹರಿಯುತ್ತಿದ್ದು, ಹತ್ತಾರು ಪ್ರಯಾಣಿಕರ ಸಮೇತ ಜಲಾವೃತವಾದ ಸೇತುವೆ ಮೇಲೆ ಬಸ್ ಚಲಾಯಿಸಿ ಚಾಲಕ ನಿರ್ಲಕ್ಷ್ಯ ಮೆರೆದಿದ್ದಾನೆ. ಒಂದು ಹಂತದಲ್ಲಿ ಸೇತುವೆ ಬಿಟ್ಟು ಬಸ್ ವಾಲಿದ್ದು, ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದೆ. ಜಲಾವೃತವಾಗಿದ್ದ ಸೇತುವೆ ಮೇಲೆ ಬಸ್ ಬರುತ್ತಿದ್ದನ್ನು ಕಂಡು ಸ್ಥಳೀಯರು ಭಯಗೊಂಡಿದ್ದಾರೆ.
ಪ್ರಯಾಣಿಕರ ಜೀವದ ಜೊತೆಗೆ ಚೆಲ್ಲಾಟವಾಡಿದ ಬಸ್ ಚಾಲಕನ ಮೇಲೆ ಕ್ರಮ ತೆಗೆದುಕೊಳ್ಳಲು ಸ್ಥಳೀಯರು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಡೋಣಿ ನದಿ ಪ್ರವಾಹದಿಂದ ದೇವರಹಿಪ್ಪರಗಿ ತಾಲೂಕಿನ ಸಾತಿಹಾಳ ಬಳಿ ಸೇತುವೆ ಜಲಾವೃತವಾಗಿದೆ. ಸೇತುವೆ ಮೇಲೆ 2 ಅಡಿಯಷ್ಟು ನೀರು ಹರಿಯುತ್ತಿದ್ದು, ದೇವರಹಿಪ್ಪರಗಿ-ಬಸವನಬಾಗೇವಾಡಿ ಹೆದ್ದಾರಿ ಬಂದ್ ಆಗಿದ್ದು, ರಸ್ತೆಯ ಎರಡೂ ಬದಿಯಲ್ಲಿ ವಾಹನಗಳು ನಿಂತಿವೆ. ನದಿ ಪ್ರವಾಹಕ್ಕೆ ನೂರಾರು ಎಕರೆ ಜಮೀನು ಜಲಾವೃತವಾಗಿದೆ. ನದಿ ತೀರದಲ್ಲಿ ಜನರು ಬೀಡು ಬಿಟ್ಟಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

